LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

 ಎಫ್ ಆಯ್ ಡಿ ಮುಖಾಂತರ ರಸಗೊಬ್ಬರ ವಿತರಿಸುವ ಆದೇಶವನ್ನು ಕೈ ಬಿಡುಲು  ರೈತರ ಆಗ್ರಹ

ಬೆಳಗಾವಿ :ಪ್ರಸಕ್ತ  ರಾಜ್ಯದಲ್ಲಿ ಮುಂಗಾರು ಹಂಗಾಮು‌ ಆರಂಭವಾಗಿರುವದರಿಂದ ರಾಜ್ಯದ  ರೈತರಿಗೆ ಎಫ್ ಆರ್ ಡಿ ಮುಖಾಂತರ ರಸಗೊಬ್ಬರ ವಿತರಿಸುವ ರಾಜ್ಯ ಸರ್ಕಾರದ  ಆದೇಶವನ್ನು ಕೈ ಬಿಡುವಂತೆ ಆಗ್ರಹಿಸಿ, ಭಾರತೀಯ ಕೃಷಿಕ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಅವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಯನ್ನು ನಡೆಸಿದರು.
ಸೋಮವಾರ ರೈತ ಸಂಘಟನೆ ಮುಖಂಡರು ‌ಕಾರ್ಯಕರ್ತರು ಗಮಾವಣೆಗೊಂಡು, ರೈತರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಏಫ್ ಆರ್ ಡಿ ಅಂಗಡಿಯಲ್ಲಿ ರಸಗೊಬ್ಬರ ವಿತರಣೆಯಲ್ಲಿ ಸಾಕಷ್ಟು ತೊಂದರೆ ಯಾಗುತ್ತಿದ್ದು, ಕೇಂದ್ರ ಸರ್ಕಾರ 2026-27 ನೇ ಸಾಲಿನ (MSP) ಕನಿಷ್ಠ ಬೆಂಬಲ ಬೆಲೆ ಮರುಪರೀಶಿಲಿಸಬೇಕೆಂದು ಜಿಲ್ಲಾಧಿಕಾರಿಗಳ ಕಛೇರಿಯ ಎದರು ಪ್ರತಿಭಟನೆಯ ಮೂಲಕ ರಾಜ್ಯ‌ ಕೇಂದ್ರ ಸರ್ರ್ಕಾರಕ್ಕೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಅವರು ಮಾತನಾಡಿ, ಪ್ರಸಕ್ತ ಸಾಲಿನ 2026-27 ನೇ, ಈ ವರ್ಷದ ಮುಂಗಾರು ವಾಡಿಕೆಗಿಂತ. 15 ದಿನಗಳ ಮುಂಚಿತವಾಗಿ ಮುಂಗಾರು ಪ್ರವೇಶದ ಬಗ್ಗೆ ಸರ್ಕಾರದ ಹವಾಮಾನ ಇಲಾಖೆ ಮುನೂಚನೆ ನೀಡಿದೆ. ಹಾಗಾಗಿ ಸದರಿ ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳು ಮತ್ತು ಕೃಷಿಯೇತರ ಚಟುವಟಿಗಳಿಗೆ ಅವಶ್ಯವಾದ ಸಲಕರದ ಮತ್ತು ಸಾಮಾಗ್ರಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಮಳೆಗಾಲದಲ್ಲಿ ಉಂಟಾದ ಮಹಾಪೂರ, ಅತಿವೃಷ್ಟಿ, ಅನಾವೃಷ್ಟಿಯಿಂದ ನೈಸರ್ಗಿಕ ವಿಕೋಪಕ್ಕೆ ರೈತರ ಆಸ್ತಿ-ಪಾಸ್ತಿ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸುವ ಕುರಿತು ಈ ಕೆಳಗಿನ ಬೇಡಿಕೆಗಳನ್ನು ಈಡೇರಿಬೇಕೆಂದು ಆಗ್ರಹಿಸಿದರು. ‌
     ಪ್ರಸಕ್ತ ಹಂಗಾಮಿನಲ್ಲಿ ಎಫ್ ಆಯ್ ಡಿ ಮೂಲಕ ರಸಗೊಬ್ಬರ ಪೂರೈಸುವ ಮತ್ತು ಪರಿಮಿತಿ ಆದೇಶವನ್ನು ತಕ್ಷಣ ಕೈಬಿಟ್ಟು. 
ರೈತರಿಗೆ ಬೇಕಾಗುವಷ್ಟು  ಬೀಜ, ಗೊಬ್ಬರ  ಬೇಕಾಗುವಷ್ಟು ಪೂರೈಸಬೇಕು. ರೈತರು ಖರೀದಿಸಿದ ಸಾಮಾಗ್ರಿಗಳಿಗೆ ಹೆಚ್ಚುವರಿ ಹಣ ಪಡೆಯವದನ್ನು ತಡೆಯಬೇಕು ಮತ್ತು ರಶೀದಿಕೊಡುವ ವ್ಯವಸ್ತೆಯನ್ನು ಕಡ್ಡಾಯಗೊಳಿಸಬೇಕು.
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ 2026-27 ಸಾಲಿನ (MSP) ಕೃಷಿ ಉತ್ಪನ್ನಗಳ “ಕನಿಷ್ಟ ಬೆಂಬಲ ಬೆಲೆ" ಮರುಪರಿಷ್ಠರಿಸಿ, ದಿನಮಾನಸ ಹಣದುಬ್ಬರ ತಕ್ಕಂತೆ ಹೆಚ್ಚಿಸಬೇಕು.
ರೈತರಿಗೆ ಕೃಷಿ ಚಟುವಟಿಗಳಿಗೆ ಅವಶ್ಯಕತೆಗೆ ತಕ್ಕಂತೆ ಡಿಸೇಲ್ ಕಡಿಮೆ ದರದಲ್ಲಿ ಲಭ್ಯವಿರಬೇಕು ಮತ್ತು ಬೇಡಿಕೆಗನುಗುಣವಾಗಿ ರಿಯಾಯತಿ ದರದಲ್ಲಿ ಪೂರೈಸಬೇಕು.
    ಈ ವೇಳೆ  ದುಂಡನಗೌಡ ಪಾಟೀಲ್, ಮಲ್ಲಿಕಾರ್ಜುನ ದೊಂಗರಗಾವಿ, ಮಲ್ಲಿಕಾರ್ಜುನ ಪಾಟೀಲ, ರಾಮನಗೌಡ ಪಾಟೀಲ, ಶಿವಶಂಕರಪ್ಪ ಪೂಜಾರ, ಈರಪ್ಪ ಪಟ್ಟಿಹಾಳ, ಬಸಪ್ಪ ಅಂಗಡಿ ಸೇರಿದಂತೆ ‌ಇತರರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್