ಯರಗಟ್ಟಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಸಂಗೋಳಿ ರಾಯಣ್ಣ ವೃತ್ತದಲ್ಲಿ ರೈತರ ಹುತಾತ್ಮ ದಿನ ಆಚರಿಸಲಾಯಿತು.
ಇದೇ ವೇಳೆ ಯರಗಟ್ಟಿ ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ ?೫೦ ಸಾವಿರ ಪರಿಹಾರ ನೀಡಬೇಕೆಂದು ಹಕ್ಕೊತ್ತಾಯ ಮಾಡಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಅಧ್ಯಕ್ಷ ರಂಗಪ್ಪ ಗಂಗರಡ್ಡಿ ಮಾತನಾಡಿ, ’ರೈತರ ಹೋರಾಟ, ತ್ಯಾಗದ ಸವಿನೆನಪಿನಲ್ಲಿ ಪ್ರತಿವರ್ಷ ಜುಲೈ ೨೧ರಂದು ರೈತರ ಹುತಾತ್ಮ ದಿನ ಆಚರಿಸಲಾಗುತ್ತದೆ. ಕೂಡಲೇ ಬರಪೀಡಿತ ಪ್ರದೇಶ ಎಂದು ಘೋಷಿಸಿ, ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.
’ಬೆಳೆ ವಿಮೆ ಪರಿಹಾರವನ್ನು ಅರ್ಹ ರೈತರಿಗೆ ಶೀಘ್ರ ಬಿಡುಗಡೆ ಮಾಡಬೇಕು. ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಸುಮಾರು ?೧೦ ಕೋಟಿ ಹಣವನ್ನು ತಕ್ಷಣ ಪಾವತಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ನಿರಂತರ ಏಳು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಗಿರೇಪ್ಪ ಗಂಗರಡ್ಡಿ, ಫಕ್ಕೀರಪ್ಪ ಮಾಳಗಿ, ಯಕ್ಕೆರೆಪ್ಪ ತಳವಾರ, ಯಂಕಣ್ಣಾ ಹುರಕನ್ನವರ, ರಮಿಜಾ ಪತ್ತುನಾಯ್ಕರ, ಶಿವಲಿಂಗಪ್ಪ ಬಿ.ಪಾಟೀಲ, ರಾಮಕೃಷ್ಣ ಎಳ್ಳೆಮ್ಮಿ, ಅಶೋಕ ನಂದಿ, ಮುತ್ತೆಪ್ಪ ಕಬ್ಬೂರಿ, ಈರಪ್ಪ ಬಳಿಗಾರ, ಶ್ರೀಶೈಲ ದಿಡಗನ್ನವರ, ಶೇಖಪ್ಪ ಕಿಲಾರಿ, ಹನಂಂತ ಸರ್ವಿ ಸೇರಿದಂತೆ ಅನೇಕರು ಇದ್ದರು.