LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರೈತರು ಸಾವಯವ ಪದ್ಧತಿ ಕೃಷಿ ಅಳವಡಿಸಿ ಭೂಮಿ ತಾಯಿಯನ್ನು ರಕ್ಷಿಸಬೇಕು : ಶಿವಪ್ರಕಾಶ ಪಾಟೀಲ

ಯರಗಟ್ಟಿ: ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಮತ್ತು ಭೂಮಿತಾಯಿ ರಕ್ಷಣಾ ಕಣ್ಗಾವಲು ಸಭೆಯನ್ನು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತಾನಾಡಿ ರೈತರು ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದ್ದು ಆದ? ರೈತರು ಸಾವಯವ ಪದ್ಧತಿ ಕೃಷಿ ಅಳವಡಿಸಿ ಭೂಮಿ ತಾಯಿಯನ್ನು ರಕ್ಷಿಸಬೇಕು, ರೈತ ಬಾಂಧವರು ಕೇವಲ ಬೆಳೆಯ ಇಳುವರಿಯನ್ನು ಮಾತ್ರ ಹೆಚ್ಚಿಸದೇ  ಬೆಳೆ ಬೆಳೆಯುವಾಗ ತಗಲುವ ಖರ್ಚನ್ನು ಕೂಡ ಕಡಿಮೆ ಮಾಡುವುದರಿಂದ ಕೃಷಿಯನ್ನು ಲಾಭದಾಯಕವಾಗಿಸಬಹುದು ಮತ್ತು ಅತಿಯಾದ ಯುರಿಯಾ ಬಳಕೆ ಆಗುತ್ತಿರುವುದರಿಂದ ಪ್ರತಿ ರೈತರಿಗೆ ಪ್ರತಿ ಎಕರೆಗೆ ಒಂದು ಚೀಲ  ಯೂರಿಯಾ ಗೊಬ್ಬರವನ್ನು ಕೆ ಕಿಸಾನ್ ಯೂರಿಯಾ ವಿತರಣಾ ತಂತ್ರಾಂಶದ ಮೂಲಕವೇ ವಿತರಣೆ ಮಾಡಲಾಗುತ್ತಿದೆ ಮತ್ತು ಗೊಬ್ಬರ ಖರೀದಿಸಲು ಎಫ್.ಆಯ್.ಡಿ. ಖಡ್ಡಾಯವಾಗಿ ಹೊಂದಿರಬೇಕು.

ಒಂದು ವೇಳೆ ಎಫ್.ಆಯ್.ಡಿ. ಇಲ್ಲವಾದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ  ಎಫ್.ಆಯ್.ಡಿ. ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ನಂತರ ಮಾತನಾಡಿದ ಕೆವಿಕೆ ಮತ್ತಿಕೊಪ್ಪದ ಬೇಸಾಯ ಶಾಸ್ತ್ರ ವಿಭಾಗದ ವಿಜ್ಞಾನಿ  ಜಿ. ಬಿ. ವಿಶ್ವನಾಥ ಅವರು ಮಾತನಾಡಿ ಬೀಜೋಪಚಾರದ ಮಹತ್ವ, ಬೀಜಮೊಳಕೆ ಪರೀಕ್ಷೆಯ ಉದ್ದೇಶ ಮತ್ತು ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಮಾಹಿತಿ ನೀಡಿದರು.

ಬಿತ್ತನೆ ಪೂರ್ವ ಯಾವುದೇ ಬೀಜಗಳಿಗೆ ಶೀಲಿಂದ್ರನಾಶಕ, ಕೀಟನಾಶಕ ಮತ್ತು ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದ್ದಲ್ಲಿ ಬೆಳೆಗಳಿಗೆ ಮಣ್ಣಿನಿಂದ ತಗುಲುವ ರೋಗಗಳಿಂದ ರಕ್ಷಿಸಬಹುದು ಮತ್ತು ಇದರಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ತದನಂತರ ರೈತರು ತಾವು ಬೆಳೆ ಬೆಳೆಯುವ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳಾದ ಕಬ್ಬು ಬೆಳೆಯಲ್ಲಿ ಬಿಳಚಿ ಕಸ ನಿರ್ವಹಣೆ ಮತ್ತು  ಗೊನ್ನೆ ಹುಳು ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು.

ಕೃಷಿ ಅಧಿಕಾರಿಗಳಾದ  ಎಸ್. ಎಲ್. ದೇಸಾಯಿ, ಎಂ. ಜಿ. ಕಳಸಪ್ಪನವರ, ಆತ್ಮ ಸಿಬ್ಬಂದಿ ಉಮೇಶ್ ಯರಗಟ್ಟಿ, ಕೃಷಿ ಸಂಜೀವಿನಿ ಸಿಬ್ಬಂದಿ ಶ್ರವಣ ಶಿವಪೂಜಿ, ಮಂಜುನಾಥ ಮುಂಡೇಶಿ, ಮಹಾಂತೇಶ ಮಾಗುಂಡನವರ, ಪ್ರಗತಿ ಪರ ರೈತರು, ರೈತ ಮಹಿಳೆಯರು ಹಾಗೂ ಕೃಷಿ ಸಖಿಯರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್