LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಚಲನಚಿತ್ರ ಲೋಕದ ದಂತಕಥೆ ಎಸ್. ಜಾನಕಿ : ಡಾ. ತೋಂಟದ ಸಿದ್ಧರಾಮ ಶ್ರೀಗಳು


ಗದಗ : ಕನ್ನಡ ಚಲನಚಿತ್ರ ರಂಗದಲ್ಲಿ ಎಸ್. ಜಾನಕಿ ಅವರ ಸಾಧನೆ ಬಹಳ ದೊಡ್ಡದು. ಕನ್ನಡದಲ್ಲಿ ಅತೀ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಬದುಕಿರುವಾಗಲೇ ದಂತಕಥೆಯಾಗಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಮಾತನಾಡಿದರು.  
ಲಿಂಗಾಯತ ಪ್ರಗತಿಶೀಲ ಸಂಘದ ೨೮೦೭ನೆಯ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕೋಗಿಲೆಯ ಧ್ವನಿಯಂತೆ ಜಾನಕಿ ಅವರ ಧ್ವನಿಯು ಇಂಪಾಗಿತ್ತು. ಜಾನಕಿ ಅವರು ತಮ್ಮ ಇಂಪಾದ ಧ್ವನಿಯ ಮೂಲಕ ಜನಮನವನ್ನು ರಂಜಿಸಿದ್ದಾರೆ. ಕನ್ನಡದಲ್ಲಿ ಹೆಚ್ಚು ಗೀತೆಗಳನ್ನು ಹಾಡಿದ್ದಲ್ಲದೆ, ೧೭ ಭಾಷೆಗಳಲ್ಲಿ ೪೮೦೦೦ ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಜಾನಕಿ ಅವರಿಗೆ ಸಲ್ಲುತ್ತದೆ. ತಮ್ಮ ಧ್ವನಿಯ ಮೂಲಕ ಸಾಕಷ್ಟು ಹಾಡುಗಳಿಗೆ ಜೀವ ತುಂಬಿದ್ದಾರೆ ಎಂದು ಶ್ರೀಗಳು ಸ್ಮರಿಸಿದರು. 
ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರಿಗೆ ಸಂತಾಪ ಸೂಚಿಸಿದ ಪೂಜ್ಯರು, ದೇವೇಗೌಡರು ಮತ್ತು ಶ್ರೀಮತಿ ಚೆನ್ನಮ್ಮನವರು ಬಹಳ ಅನ್ಯೊನ್ಯತೆಯಿಂದ ಜೀವನ ಸಾಗಿಸಿದ್ದಾರೆ. ಕುಟುಂಬವನ್ನು ಹೇಗೆ ಮುನ್ನಡೆಸಬೇಕು ಎಂಬುದಕ್ಕೆ ಶ್ರೀಮತಿ ಚೆನ್ನಮ್ಮನವರಲ್ಲಿದ್ದ ಆದರ್ಶ ಗುಣಗಳು ಮಾದರಿಯಾಗಿವೆ. ಲಿಂಗೈಕ್ಯ ಶ್ರೀಮತಿ ಚೆನ್ನಮ್ಮ ಅವರ ಆತ್ಮಕ್ಕೆ ಬಸವಾದಿ ಶರಣರು ಶಾಂತಿ ನೀಡಲಿ ಮತ್ತು ದುಃಖ ಸಹಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದಯಪಾಲಿಸಲಿ ಎಂದು ಶ್ರೀಗಳು ಸಂತಾಪ ಸೂಚಿಸಿದರು. 
ವಿರುಪಾಕ್ಷಗೌಡ ಪಾಟೀಲ ಅವರು ಮಾತನಾಡಿ, ೧೯೫೧ ರಲ್ಲಿ ಮೈಸೂರಿನ ಮಹಾರಾಜರು ಗದಗ ಬಂದಿದ್ದರು. ಜಯರಾಮರಾಜೇಂದ್ರ ಒಡೆಯರಿಗೆ ಸಿದ್ಧಲಿಂಗೇಶ್ವರರ ಇತಿಹಾಸ ಕುರಿತು ಪುಸ್ತಕಗಳನ್ನು ರಚಿಸಿ ನೀಡಿದ್ದನ್ನು ಸ್ಮರಿಸಿದರು. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಕುರಿತು ೧೯೫೧ ರಲ್ಲಿಯೇ ಚರ್ಚೆಗಳು ಜರುಗಿದ ಬಗ್ಗೆ ಮತ್ತು ಲಿಂಗಾಯತ ಹೋರಾಟ ಬೆಳೆದು ಬಂದ ಬಗ್ಗೆ ಕೂಲಂಕುಷವಾಗಿ ತಿಳಿಸಿದರು.    
ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕ ಎಸ್.ಎನ್. ಕಲ್ಲಿಗನೂರ ಅವರ ಅಗಲುವಿಕೆಗೆ ಸಂತಾಪ ಸೂಚಿಸಲಾಯಿತು. 
ರಾಣಿ ಚೆನ್ನಮ್ಮ ವಿವಿದೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷರಾದ  ಶ್ರೀಮತಿ ಶಿವಲೀಲಾ ಪ್ರಕಾಶ ಅಕ್ಕಿ, ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಅಮರೇಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಡೈಟ್ ಅದೀಕ್ಷಕರಾದ ಶ್ರೀನಿವಾಸ ದತ್ತಾತ್ರೇಯ ಕುಲಕರ್ಣಿ, ಪ್ರೌಢಶಾಲಾ ಶಿಕ್ಷಕರಾದ ಶ್ರೀಮತಿ ಶಿಲ್ಪಾ ವಿ. ಕುರಹಟ್ಟಿ, ಯೋಗ ಹಾಗೂ ಸಂಗೀತ ಶಿಕ್ಷಕಿಯರಾದ ಶ್ರೀಮತಿ ಸುನಂದ ಜಾನೋಪಂಥರ, ಶ್ರೀಮತಿ ಲಲಿತಾ ಇಂಗಳಹಳ್ಳಿ, ಎಂ. ಎಂ. ಮಂಗಳೂರು, ಶ್ರೀಮತಿ ಭುವನೇಶ್ವರಿ ಹಿರೇಮಠ ಅವರು ಎಸ್. ಜಾನಕಿ ಹಾಡಿರುವ ಹಾಡುಗಳನ್ನು ಪ್ರಸ್ತುತಪಡಿಸಿದರು. ವಚನ ಸಂಗೀತ ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಧರ್ಮಗ್ರಂಥ ಪಠಣ ವರ್ಷ ಯಳವತ್ತಿಮಠ, ವಚನ ಚಿಂತನ ವೇದಾವತಿ ಮಠದ ಅವರು ನೆರವೇರಿಸಿದರು. ದಾಸೋಹ ಸೇವೆಯನ್ನು ಎಸ್.ಎ. ಪಾಟೀಲ ಮತ್ತು ಸಹೋದರರು, ರತ್ನಕ್ಕ ಪಾಟೀಲ ಗದಗ ಅವರು ವಹಿಸಿಕೊಂಡಿದ್ದರು. 
ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ನಿರೂಪಣೆಯನ್ನು ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ವಿದ್ಯಾ ಗಂಜಿಹಾಳ ಮಾಡಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಶ್ರೀಮತಿ ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶಿವಾನುಭವದಲ್ಲಿ ಸಿದ್ದಣ್ಣ ಬಂಗಾರಶೆಟ್ಟರ, ಗಂಗಾಧರ್ ಹಿರೇಮಠ, ದಾನಯ್ಯ ಗಣಾಚಾರಿ, ಅಶೋಕ್ ಬರಗುಂಡಿ, ಪ್ರಕಾಶ ಅಸುಂಡಿ, ಜಿ.ಬಿ. ಪಾಟೀಲ ಶ್ರೀಮತಿ ಶಕುಂತಲಾ ಸಿಂಧೂರ, ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್