LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಎಲ್‌ಕೆಜಿ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭ

ಯರಗಟ್ಟಿ,ಜೂ,೧೩: ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯು ಪ್ರಸ್ತುತ ೨೦೨೬-೨೭ನೇ ಸಾಲಿನ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಸೂಕ್ತ ಕಲಿಕೆ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸರಕಾರ ಇದೇ ಮೊದಲ ಬಾರಿಗೆ ಶಾಲೆಯಲ್ಲಿ ಎಲ್‌ಕೆಜಿ ತರಗತಿಗಳನ್ನು ಆರಂಭಿಸಲಾಗಿದ್ದು, ಈಗಾಗಲೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಯರಗಟ್ಟಿ ಅಲ್ಲದೇ, ಸುತ್ತಮುತ್ತಲ ಬಡಾವಣೆ ಮತ್ತು  ಸ್ಥಳೀಯ  ನಿವಾಸಿಗಳು ತಮ್ಮ ಮಕ್ಕಳನ್ನು ಇಲ್ಲಿ ದಾಖಲಿಸುತ್ತಿದ್ದಾರೆ. ಎಂದು ತಮ್ಮ ಸ್ವಾಗತ ಪರ ಭಾಷಣದಲ್ಲಿ  ಶಾಲೆಯ ಪ್ರಧಾನ ಗುರುಗಳಾದ ಎ ಎ ಮಕ್ತುಮನವರ ಹೇಳಿದರು. 

೧೮೭೯ರಲ್ಲಿ ಸಣ್ಣದಾಗಿ ಆರಂಭಗೊಂಡ ಶಾಲೆಯು ಈಗ ಬೃಹತ್ ಸ್ವರೂಪ ಪಡೆದುಕೊಂಡಿದೆ. ಮಕ್ಕಳಿಗೆ ಆಟವಾಡಲು ವಿಶಾಲ ಮೈದಾನವಿದೆ. ಅಲ್ಲದೇ, ಸ್ಮಾರ್ಟ್  ತರಗತಿ ಕೊಠಡಿಗಳನ್ನು ಹೊಂದಿದೆ. ಸರ್ಕಾರದಿಂದ ಲಭ್ಯವಾಗುವ ಎಲ್ಲಾ ಸೌಕರ್ಯಗಳನ್ನು ಇಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ.

ಬಾಸ್ ಪ್ರೈವೇಟ್ ಲಿಮಿಟೆಡ್ ಇವರ ಆರ್ಥಿಕ ನೆರವಿನಿಂದ ಯರಗಟ್ಟಿ ಶಾಲೆಯು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ  ಸ್ಮಾರ್ಟ್ ಕ್ಲಾಸ್ ಗಳು ಪ್ರಯೋಗಾಲಯ ಕಂಪ್ಯೂಟರ್ ಲ್ಯಾಬ್ ಮಕ್ಕಳಿಗೆ ಕುಡಿಯಲು ಶುದ್ಧ ನೀರಿನ ಘಟಕ ಹಾಗೂ ಸಭಾಭವನ ಈ ಎಲ್ಲ ಕಾರ್ಯಗಳನ್ನು ಬಾಸ್ ಫೌಂಡೇಶನ್ ಇಂಡಿಯಾ ಲಿಮಿಟೆಡ್ ಇವರ ಸಹಯೋಗದಲ್ಲಿ ಅಭಿವೃದ್ಧಿಯನ್ನು ಹೊಂದಿದೆ.

’ಜಿಲ್ಲೆಯ ಪ್ರಮುಖರಿಂದ ಅಲ್ಲದೇ ಗ್ರಾಮಸ್ಥರು ಕೂಡ ಶಾಲಾಭಿವೃದ್ಧಿಗೆ ದೇಣಿಗೆ ನೀಡಿದ್ದಾರೆ. ಅವರು ನೀಡಿದ ವಿವಿಧ ಸ್ವರೂಪದ ನೆರವಿನಿಂದ ಶಾಲಾ ಕಟ್ಟಡ ನಿರ್ಮಿಸಲಾಗಿದೆ ಮತ್ತು ಇತರೆ ಸೌಲಭ್ಯಗಳನ್ನು ಕೂಡ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರಯತ್ನಗಳು ನಡೆದಿವೆ’ ಎಂದು ಶಾಲಾ ಶಿಕ್ಷಕರು ತಿಳಿಸಿದರು.

’ಶಾಲೆಯಲ್ಲಿ ಎಲ್‌ಕೆಜಿಯಿಂದ ೮ನೇ ತರಗತಿಯವರೆಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಲಿಯಬಹುದು. ಇಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ ಒದಗಿಸಲಾಗುತ್ತದೆ. ಪ್ರತಿ ದಿನವೂ ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ,  ಬಾಳೆಹಣ್ಣು ಮುಂತಾದವು ವಿತರಿಸುತ್ತೇವೆ’ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ. ಚೀಲದವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು ಹೇಳಿದರು.

ಈ ವೇಳೆ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಹಾಗೂ ಪಟ್ಟಣ ಪಂಚಾಯತಿಯ ಸಿಬ್ಬಂದಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ನೂತನ ಎಲ್‌ಕೆಜಿ ತರಗತಿಯ ಕೊಠಡಿಯಲ್ಲಿ ಶಾರದಾ ಪೂಜೆ ನೇರವೇರಿಸಿ ತರಗತಿಗೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಲಕ್ಕಪ್ಪ ಜಗದಾರ ಇವರು ಎಲ್‌ಕೆಜಿ ಹಾಗೂ ೧ನೇ ತರಗತಿ ಮಕ್ಕಳಿಗೆ  ಉಚಿತವಾಗಿ ೧೦೦ ಶಾಲಾ ಬ್ಯಾಗಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಸುನಿತಾ ಹಿರೇಮಠ, ಎಸ್‌ಡಿಎಂಸಿ ಫಿರೋಜ ಖಾದ್ರಿ, ದುಂಡಯ್ಯ ಹಿರೇಮಠ, ಮೌನೇಶ ಹಳ್ಳಂಡಿ, ನಿಂಗಪ್ಪ ಗಂರಡ್ಡಿ, ಲಕ್ಷ್ಮಣ ಹಣಬರ, ಮೀನಾಕ್ಷಿ ಮದ್ದಾನಿ, ಶಕುಂತಲಾ ಹಡಪದ, ಪ್ರೇಮಾ ಹೂಲಿಕಟ್ಟಿ, ಲಕ್ಷ್ಮೀ ಸುರೇಬಾನ, ಸುಹಾನಾ ಉಗರಗೋಲ, ಶಾಹೀನ ಹುಕ್ಕೇರಿ, ಯರಗಟ್ಟಿ ಸಿಆರ್‌ಪಿ ವಸಂತ ಬಡಿಗೇರ ಬಿಇಓ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ಎಂ. ಬಿ. ಕಡಕೋಳ, ಬಿಆರ್‌ಪಿಗಳಾದ ಸಿದ್ರಾಮ ಪಟ್ಟಣಶೆಟ್ಟಿ ಶಾಲೆಯ ಸರ್ವ ಸಿಬ್ಬಂದಿ ಬಳಗ ಪಾಲಕ ಪೋಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ರಮೇಶ ಹುಣಸಿಕಟ್ಟಿ ನಿರೂಪಣೆ ಮಾಡಿದರು ಶ್ರೀ ಎಸ್ ಬಿ ಮಿಕಲಿ ಅವರು ವಂದನಾರ್ಪಣೆ ಹೇಳಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್