LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಸ್ತೆ ದುರಸ್ಥಿಗಾಗಿ ರೈತರಿಂದ ರಸ್ತೆ ತಡೆ

ಇಂಡಿ : ಸುಮಾರು ಹದಿನೈದು ವರ್ಷಗಳಿಂದ ಗುಂದವಾನ ದಿಂದ ಶೀಗಣಾಪುರ ರಸ್ತೆಗೆ ಇಣುಕಿ ನೋಡದ ಅಧಿಕಾರಿಗಳು, ರಸ್ತೆ ಹಾಳಾಗಿದ್ದರಿಂದ ರೈತರು, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ದಿನದ ಕೆಲಸಕ್ಕೆ ಕಂಟಕ ಬಂದಿದೆ ಎಂದು ಗುಂದವಾನ ರೈತರಾದ ಭೀರಪ್ಪ ಪೂಜಾರಿ ತಮ್ಮ ಅಳಲನ್ನು ತೋಡಿಕೊಂಡರು.

          ಗುಂದಾವನ ಗ್ರಾಮದ ರೈತರು ರಸ್ತೆ ದುರಸ್ಥಿಗಾಗಿ ಎಲ್ಲ ಅಧಿಕಾರಿಗಳ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರು ರಸ್ತೆ ಸುಧಾರಣೆ ಮಾಡದ ಕಾರಣ ಕೆ. ಎಸ್. ಆರ್ ಪಕ್ಷದ ಸಹಯೋಗದಲ್ಲಿ, ರೈತರಿಂದ ರಸ್ತೆ ತಡೆದು ಸರ್ಕಾರಕ್ಕೆ   ಪ್ರಕಟಣೆ ಮೂಲಕ  ಎಚ್ಚರಿಕೆ ನೀಡಲಾಯಿತು.

           ಈ ಸಂದರ್ಭದಲ್ಲಿ  ಕೆ. ಆರ್. ಎಸ್ ಪಕ್ಷದ ವಿಜಯಪುರ ಜಿಲ್ಲಾ ಅಧ್ಯಕ್ಷರು ಅಶೋಕ ರಾಠೋಡ್ ಮಾತನಾಡಿ ಗುಂದವಾನ ಮತ್ತು ಶೀಗಣಾಪುರ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿರುಗಾಡಲು ರಸ್ತೆ ವ್ಯವಸ್ಥೆ ಸರಿಯಾಗಿಲ್ಲ, ಇದನ್ನು ಎಲ್ಲ ಅಧಿಕಾರಿಗಳ ಗಮನಕ್ಕೆ ತಂದರು ರೈತರ ಮತ್ತು ವಿದ್ಯಾರ್ಥಿಗಳ ಜೀವನದ ಜ್ಯೋತೆ ಅಟವಾಡುತ್ತಿರುವ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಧಿಕ್ಕಾರ ಹಾಕಿದರು, ಮಳೆಗಾಲದ ಸಮಯದಲ್ಲಿ ರಸ್ತೆಯ ಮೇಲೆ ತಿರುಗಾಡುವಂತಿಲ್ಲ, ಶಾಲಾ ಕಾಲೇಜಿಗೆ, ಪರೀಕ್ಷೆ ಸಮಯದಲ್ಲಿ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯ ವಾಗುತ್ತಿಲ್ಲ ಎಂದು ಇಲ್ಲಿನ ರೈತರ ಗೋಳು ಯಾರು ಕೇಳುತ್ತಿಲ್ಲ ಒಂದು ವೇಳೆ ಕೂಡಲೆ ಮೇಲಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ಕೊಟ್ಟು ಇಲ್ಲಿನ ಪರಿಸ್ಥಿತಿ ಸುಧಾರಣೆ ಮಾಡದೇ ಹೋದಲ್ಲಿ ರೈತರಿಂದ, ಸಂಘ ಪಾರಿವಾರದೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡಲಾಗುವದು ಎಂದರು.

               ಕೆ. ಆರ್. ಎಸ್ ಪಕ್ಷದ ರಾಜ್ಯ ಸಂಘಟನೆ ಕಾರ್ಯದರ್ಶಿ ಗಣಪತಿ ರಾಠೋಡ್ ಮಾತನಾಡಿ ರೈತ ದೇಶದ ಬೆನ್ನೆಲಬು, ವಿದ್ಯಾರ್ಥಿಗಳು ಮುಂದಿನ ನಾಯಕರು ಎಂದು ಭಾಷಣದಲ್ಲಿ ಬಿಗಿಯುತ್ತಾರೆ, ಆದರೆ ಅವರು ಕಷ್ಟದಲ್ಲಿದ್ದಾಗ ಅವರನ್ನು ಯಾರು ಗಮನಿಸುವದಿಲ್ಲ, ರೈತರು, ವಿದ್ಯಾರ್ಥಿಗಳು ತಮ್ಮ ಗೋಳು ಯಾರಿಗೆ ಹೇಳಬೇಕು ಅನ್ನೋದು ತಿಳಿಯದಾಗಿದೆ, ೧೫ ವರ್ಷಗಳಿಂದ ರಸ್ತೆಕಡೆಗೆ ಇಣುಕಿ ನೋಡುತ್ತಿಲ್ಲ, ಅಂದರೆ ಈ ಗ್ರಾಮ ಕಾಡಿನಲ್ಲಿ ಇದೆಯೆ ಅನ್ನೋದು ಪ್ರಶ್ನೆ?, ಈ ವಿಷಯವಾಗಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಸೆ ಬಗೆಹರಿಸುವಂತೆ ಈ ಸಂದರ್ಭದಲ್ಲಿ ವಿನಂತಿಸಿಕೊಂಡರು.

     ಈ ಸಂದರ್ಭದಲ್ಲಿ ಚಂದ್ರಕಾಂತ್ ನಾಗೂರ್, ಅಣ್ಣಾ ಪೂಜಾರಿ, ಮಲ್ಲಿಕಾರ್ಜುನ ಬಿರಾದಾರ, ಉಮೇಶ್ ತಳವಾರ, ರೇವಣಸಿದ್ಧ ಮುತ್ಯಾ, ಗ್ರಾಮ ರೈತರಾದ ಸಿದ್ದರಾಮ ಕದಮ, ರಾಮಚಂದ್ರ ಪಾಟೀಲ್, ಅಮಸಿದ್ದ ಕರಗಣಿ, ರಾಜು ಹೊನ್ನುಟಗಿ, ಹೈಬತಿ ಕರಗಣಿ, ಮೈನು ಬಳಗಾರ, ರೇವು ತುಪ್ಪದ, ಶ್ರೀಕಾಂತ್ ತುಪ್ಪದ, ಮಲ್ಲು ತುಪ್ಪದ, ಹಾಗೂ ಬಳ್ಳೊಳ್ಳಿ, ಗುಂದವಾನ, ಶೀಗಣಾಪುರ ಗ್ರಾಮದ ರೈತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್