LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಕುಂಟೋಜಿ ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ಸಮಿತಿ ರಚನೆ

ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ)ಯನ್ನು ರಚಿಸಲಾಯಿತು.

ಶಾಲೆಯ ಅಭಿವೃದ್ಧಿ, ಶೈಕ್ಷಣಿಕ ಗುಣಮಟ್ಟದ ವೃದ್ಧಿ ಹಾಗೂ ಉತ್ತಮ ಆಡಳಿತ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಗ್ರಾಮಸ್ಥರು, ಪಾಲಕರು ಹಾಗೂ ಹಿರಿಯರ ಸಮ್ಮುಖದಲ್ಲಿ ಸಮಿತಿ ರಚನೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಮಲ್ಲನಗೌಡ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಶಾಂತಮ್ಮ ಹುಲಗಣ್ಣಿ ಸರ್ವಾನುಮತದಿಂದ ಆಯ್ಕೆಯಾದರು.

ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಹಿರಿಯರಾದ ಭೀಮನಗೌಡ ಬಿರಾದಾರ, ಶಾಲೆಯ ಶೈಕ್ಷಣಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಎಸ್‌ಡಿಎಂಸಿ ಪ್ರಮುಖ ಪಾತ್ರ ವಹಿಸಲಿದ್ದು, ಶಾಲೆ ಹಾಗೂ ಪಾಲಕರ ನಡುವೆ ಉತ್ತಮ ಸಮನ್ವಯ ಸಾಧಿಸಲು ಸಮಿತಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರು ಹಾಗೂ ಶಾಲಾ ಹಿತೈಷಿಗಳು ಭಾಗವಹಿಸಿ, ನೂತನ ಸಮಿತಿಗೆ ಶುಭ ಹಾರೈಸಿದರು.

ಸಂದರ್ಭದಲ್ಲಿ ಮಾಜಿ ಪ್ರಧಾನರಾದ ಸಂಗನಗೌಡ ಪಾಟೀಲ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಸನಗೌಡ ಬಿರಾದಾರ, ಮಲ್ಲಪ್ಪ ಯರಝರಿ, ಶ್ರೀಶೈಲ ಸಜ್ಜನ, ಬಿ.ಟಿ. ಬಿರಾದಾರ, ದ್ಯಾಮಣ್ಣ ಹೊಸಮನಿ, ಪರಶುರಾಮ ಆಂದೇಲಿ, ಬಸವರಾಜ ಚವಣಬಾವಿ, ಗಣೇಶ ಹೆಬ್ಬಾಳ, ರಾಮಣ್ಣ ಕವಡಿಮಟ್ಟಿ, ಮಲ್ಲಿಕಾರ್ಜುನ ಕನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಂಕರಗೌಡ ಪಾಟೀಲಗೆ ಶಿಕ್ಷಣ ಸೇವಾರತ್ನ ಪ್ರಶಸ್ತಿ ಪ್ರದಾನಹತಾಷಭಾವನೆಯಿಂದ ನಡಹಳ್ಳಿ ಹೋರಾಟ-ಪ್ರಭುಗೌಡಕಂಟೆಪ್ಪಗೌಡ ಪಾಟೀಲ ನಿಧನವಿದ್ಯಾರ್ಥಿಗಳು ಕಲಿಕಾ ಮಟ್ಟ ಸುಧಾರಿಸಿಕೊಳ್ಳಬೇಕು: ಜಮಗೊಂಡಿಕೃಷಿ ಸಖಿ ಮಾಡ್ಯೂಲ್-ಗಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ*27 ದಿನಗಳಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ; ಎಐಸಿಸಿ ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ಸಕ್ರಿಯ ಭಾಗಿ*ಕಾಗವಾಡ ಬರಪೀಡಿತ ಪಟ್ಟಿಯಿಂದ ಹೊರಕ್ಕೆ: ನಿರಂತರ ವಿದ್ಯುತ್ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ಬೃಹತ್ ರಸ್ತೆ ತಡೆ ಪ್ರತಿಭಟನೆಗುಡದಳ್ಳಿ ಗ್ರಾಮದಲ್ಲಿ ಅಂತರಾಷ್ಟಿçÃಯ ಹಾವು ಕಡಿತ ಜಾಗೃತಿ ದಿನ ಕಾರ್ಯಕ್ರಮಕಿತ್ತೂರು ಬಸ್ ನಿಲ್ದಾಣಕ್ಕೆ ಟ್ರ್ಯಾಕ್ಟರ್ ಅಡ್ಡಹಾಕಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆರಾಮದುರ್ಗವನ್ನು ಸಂಪೂರ್ಣ ಬರಪೀಡಿತ ತಾಲೂಕು ಎಂದು ಘೋಷಿಸಲು ಸರ್ಕಾರಕ್ಕೆ ಮನವಿ