LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬಳ್ಳಾರಿಯ ಇಎಸ್ ಐಸಿ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ: ಡಾ.ಮಹಿಪಾಲ್ ಸ್ವಾಗತ

ಬಳ್ಳಾರಿ, ಮೇ.05.: ಇಲ್ಲಿನ ಕಾರ್ಮಿಕ ಆರೋಗ್ಯ ರಕ್ಷಣೆ, ಚಿಕಿತ್ಸೆಗೆ ಸಹಕಾರಿಯಾಗುವ ಇಎಸ್ ಐಸಿ (ಕಾರ್ಮಿಕ) ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬುದು ಕಳೆದ ಹಲವು ದಶಕಗಳ ಬೇಡಿಕೆಯಾಗಿತ್ತು. 160 ಕೋಟಿ ರೂ ವೆಚ್ಚದಲ್ಲಿ ಭಾರತ ಸರ್ಕಾರ ಬಳ್ಲಕಾರಿಯ 100 ಹಾಸಿಗೆಗಳ ಇಎಸ್ ಐಸಿ (ಕಾರ್ಮಿಕ) ಆಸ್ಪತ್ರೆಗೆ ಇಂದು ರಾಜ್ಯದ ಚಿಕ್ಕಬಳ್ಳಾಪುರದಲ್ಲಿ  ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ನೆರವೇರಿಸಿದ್ದಾರೆ. ಈ ವೇಳೆ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಚಿಕ್ಕ ಬಳ್ಳಾಪುರ ಸಂಸದ ಡಾ.ಸುಧಾಕರ್ ಉಪಸ್ಥಿತರಿದ್ದರು.
ಅವಿಭಜಿತ ಬಳ್ಳಾರಿಯ ಕಾರಿಗನೂರಿನಲ್ಲಿ ಈಹಿಂದೆ ಸಣ್ಣದಾದ ಇಎಸ್ ಐಸಿ ಆಸ್ಪತ್ರೆ ಇತ್ತು. ಕಾಲಾನಂತರ ಅದನ್ನು ಮುಚ್ಚಲಾಯ್ತು. ಬಳ್ಳಾರಿಯ ಸತ್ಯನಾರಾಯಣ ಪಟೇಯಲ್ಲಿ ಚಿಕ್ಕದಾದ ಒಂದು ಕ್ಲೀನಿಕ್ ಮಾತ್ರ ಇದ್ದು. ಅದು ಇದ್ದು ಇಲ್ಲದಂತಿದ್ದು. ಇಎಸ್ ಐಸಿ ವಿಮಾದಾತರಿಗೆ ಉಪ ಯೋಗವಿಲ್ಲದಂತಿತ್ತು.
ಅದಕ್ಕಾಗಿ ಈ ಆಸ್ಪತ್ರೆ ನಿರ್ಮಾಣಕ್ಕೆ ಹಲವು ವರ್ಷಗಳಿಮನದ ಹೋರಾಟ ನಡೆದಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದರೂ ಈ ಆಸ್ಪತ್ರೆ ಆಗಲಿಲ್ಲ. ಅವರು ಕಲ್ಬುರ್ಗಿಯಲ್ಲಿ ಬೃಹತ್ ಆಸ್ಪತ್ರೆ ಮಾಡಿಕೊಂಡರು.
ಆದರೆ ಕಾರ್ಮಿಕ ಸಂಘಟನೆಗಳ ಹೋರಾಟದ ಹಿನ್ನಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ . ಡಿಎಂಎಫ್ ಫಂಡ್ ನಲ್ಲಿ ಈ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದರೂ ಆಗಲಿಲ್ಲ. ನಿವೇಶನದ ಹುಡುಕಾಟಕ್ಕಾಗಿ ವಿಳಂಬವಾಯ್ತು. ಕೊನೆಗೆ ಬೆಳಗಲ್ಲು ರಸ್ತೆಯಲ್ಲಿ 5 ಎಕರೆ ನಿವೇಶನ ಗುರುತಿಸಲಾಯ್ತು.
ಇಂದು ಇಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಕೋಡಾಲು ಗ್ರಾಮದ ಕಾರ್ಮಿಕ ಹೋರಾಟಗಾರ ತಿಪ್ಪೆಸ್ವಾಮಿ ಈ ಆಸ್ಪತ್ರೆ ನಿರ್ಮಣಕ್ಕೆ ಹೋರಾಟ ನಡೆಸಿದ್ದರು. ಅಖಂಡ ಜಿಲ್ಲೆಯಲ್ಲಿ 80 ಸಾವಿರ ಇಎಸ್ ಐಸಿ ವಿಮಾದಾರರಿದ್ದು ಈ ಆಸ್ಪತ್ರೆಯಿಂದ ಸಹಕಾರಿಯಾಗಲಿದೆಂದರು.
ಇಎಸ್ ಐಸಿ ಎಂದರೆಭಾರತ ಸರ್ಕಾರದ ಒಂದು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆ. ಉದ್ಯೋಗಿಗಳ ರಾಜ್ಯ ವಿಮಾ ನಿಗಮ ನಿರ್ವಹಣೆ ಮಾಡುತ್ತದೆ. ಯೋಜನೆಯ ಅಡಿಯಲ್ಲಿ ನೋಂದಾಯಿತ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ. ತಜ್ಞರ ಚಿಕಿತ್ಸೆ, ಲ್ಯಾಬ್ ಪರೀಕ್ಷೆಗಳು, ಔಷಧ ವಿತರಣೆ, ತುರ್ತು ಚಿಕಿತ್ಸೆ ಇಎಸ್ ಐಸಿ ವಿಮಾ ಕಾರ್ಡ್ ಇರುವ ಉದ್ಯೋಗಿಗಳಿಗೆ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯುತ್ತದೆ.
ಮಾಸಿಕ ವೇತನ ₹21,000 ಒಳಗಿನ ಉದ್ಯೋಗಿಗಳು,
10 ಅಥವಾ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳ ಕಾರ್ಮಿಕರು, ಫ್ಯಾಕ್ಟರಿ, ಹೋಟೆಲ್, ಅಂಗಡಿ, ಕಚೇರಿ ಕೆಲಸಗಾರರು ಅರ್ಹರು.ಉದ್ಯೋಗಿ ಮಾಸಿಕ ವೇತನದ 0.75%, ಉದ್ಯೋಗದಾತ 3.25% ನೀಡಬೇಕಾಗುತ್ತದೆ.
ನಮ್ಮ ತಾಯಿ ಕೇಂದ್ರದ ಮಾಜಿ ಸಚಿವೆ ಬಸವರಾಜೇಶ್ವರಿ ಅವರು ಆಗಲೇ ಬಳ್ಳಾರಿಯಲ್ಲಿ ಅನೇಕ ಕೈಗಾರಿಕೆಗಳು ಇದ್ದು ಇಲ್ಲಿನ ಕಾರ್ಮಿಕರಿಗೆ ಇಎಸ್ ಐಸಿ ಆಸ್ಪತ್ರೆ ಬೇಕೆಂದು ಭಾರತ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಆ ಕನಸು ಈಗ ನನಸಾಗುತ್ತಿರುವುದು ಸ್ವಾಗತಾರ್ಹ.ಆಸ್ಪತ್ರೆ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಂಡು ಕಾರ್ಮಿಕರಿಗೆ ಸಹಕಾರಿಯಾಗಲಿ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್