LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗಾಂಧಾರಿ ವಿದ್ಯೆ ಪ್ರದರ್ಶನ ಹಾಗೂ ಪುಣ್ಯಾರಾಧನೆ ಪೂರ್ವಭಾವಿ ಸಭೆ ಯಶಸ್ವಿ

ಬಳ್ಳಾರಿ, ಮೇ 27: ನಗರದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಶ್ರೀ ನಂದಿಪುರ ಅಜ್ಜನವರ ಪುಣ್ಯಾರಾಧನೆ ಪ್ರಯುಕ್ತ ಪೂರ್ವಭಾವಿ ಸಭೆ ಹಾಗೂ ಗಾಂಧಾರಿ ವಿದ್ಯೆ ಪ್ರದರ್ಶನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಚಿದಂಬರರಾವ್ ಅವರ ನೇತೃತ್ವದಲ್ಲಿ ಉಮಾ ಗಡಗಿ ಅವರು 15 ಮಕ್ಕಳಿಗೆ ಗಾಂಧಾರಿ ವಿದ್ಯೆಯನ್ನು ತರಬೇತಿ ನೀಡಿದರು. ಈ ತಂಡದಲ್ಲಿ ಸಿ.ಕೆ. ಪ್ರಕಾಶ್ ಹಾಗೂ ಎ. ರಾಘವೇಂದ್ರ ಸಹಕರಿಸಿದರು. ಮಕ್ಕಳಿಗೆ ಗಾಂಧಾರಿ ವಿದ್ಯೆಯನ್ನು ತಿಳಿಸಿಕೊಡುವಲ್ಲಿ ಶ್ರೀಮತಿ ವನಜಾಕ್ಷಿ ಮೇಡಂ ಅವರು ಪ್ರಮುಖ ಪಾತ್ರವಹಿಸಿ ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಲಿಂಗಪ್ಪ ವಹಿಸಿದ್ದರು. ಉದ್ಘಾಟಕರಾಗಿ ಶ್ರೀ ಜೋಳದರಾಶಿ ತಿಮ್ಮಪ್ಪ ಅವರು ಭಾಗವಹಿಸಿ ಗಾಂಧಾರಿ ವಿದ್ಯೆಯ ಮಹತ್ವದ ಕುರಿತು ಮಾತನಾಡಿ ಮಕ್ಕಳನ್ನು ಉತ್ಸಾಹಭರಿತರನ್ನಾಗಿ ಮಾಡಿದರು.
 ಮಕ್ಕಳಿಂದ ಗಾಂಧಾರಿ ವಿದ್ಯೆಯ ಪ್ರದರ್ಶನ ಕೂಡ ನಡೆಸಲಾಯಿತು. ಅಲ್ಲದೆ ಶ್ರೀ ಅಜ್ಜನವರ ಸಮ್ಮುಖದಲ್ಲಿ ವಿದ್ಯೆಯ ಡೆಮೊ ಪ್ರದರ್ಶಿಸಿ ಆಶೀರ್ವಾದ ಪಡೆದರು.
ನಂತರ ಮಕ್ಕಳಿಗೆ ಸರ್ಟಿಫಿಕೇಟ್ ಹಾಗೂ ಮೆಮೊಂಟೋಗಳನ್ನು ವಿತರಿಸಲಾಯಿತು. ಪೂಜ್ಯರ ಆಶೀರ್ವಾದ ಪಡೆದ ಮಕ್ಕಳು ಸಂತಸ ವ್ಯಕ್ತಪಡಿಸಿದರು. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಹಾಗೂ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಪತಂಜಲಿ ಶ್ರೀ ಶಂಕರಾಚಾರ್ಯ ಚೈತನ್ಯ ವೇದಿಕೆ ಹಾಗೂ ಎಸ್.ಆರ್.ಕೆ ಯೋಗಾ ಕೇಂದ್ರ, ಬಳ್ಳಾರಿ ಇವರ ವತಿಯಿಂದ ಆಯೋಜಿಸಲಾಗಿತ್ತು. ಭಾಗವಹಿಸಿದ ಪ್ರತಿಯೊಬ್ಬರಿಗೂ ಸಂಘಟಕರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸುಮಾರಡ್ಡಿ, ಅಶೋಕ್ ದಿನ್ನಿ, ವಾಮಣ್ಣ, ಪ್ರಕಾಶ್, ರಾಘವೇಂದ್ರ, ರಮೇಶ್ ಸರ್ ಸೇರಿದಂತೆ ಅನೇಕ ಗಣ್ಯರು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್