LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶಿಕ್ಷಕಿ ಗೀತಾ ಬಸ್ತವಾಡ ಚೊಚ್ಚಲ ಕೃತಿ ಗೀತ ಗುಚ್ಚ ಕವನ ಸಂಕಲನ ಬಿಡುಗಡೆ

 

ಹುಕ್ಕೇರಿ : ಮಹಿಳೆಯರಲ್ಲಿ ಅಡಗಿರುವ ಆಚಾರ ವಿಚಾರಗಳ ಅನುಭವಮೃತ ನುಡಿಗಳನ್ನ ಬರವಣಿಗೆ ಮೂಲಕ ಮುಖ್ಯವಾಹಿನಿಗೆ ತರುವದು ಇಂದು ಪ್ರಸ್ತುತ ಅವಶ್ಯವಾಗಿದೆ ಎಂದು ಚಿಕ್ಕೋಡಿ ಶಿಕ್ಷಣ ಇಲಾಖೆಯ ಯೋಜನಾಧಿಕಾರಿ ರೇವತಿ ಮಠದ ಹೇಳಿದರು.
ಅವರು ಪಟ್ಟಣದ ರವದಿ ಪಾರ್ಮ ಹೌಸದಲ್ಲಿ ಜರುಗಿದ ಶಿಕ್ಷಕಿ ಗೀತಾ ಸುಭಾಷ ಬಸ್ತವಾಡ ಅವರು ರಚಿಸಿದ ಗೀತ ಗುಚ್ಚ ಕವನ ಸಂಕಲನ ಹಾಗೂ ವಿವಾಹ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಸಾಹಿತ್ಯ ಬರವಣಿಗೆ ಎಲ್ಲರಲ್ಲಯೂ ಮೂಡಿ ಸಮಾಜಕ್ಕೆ ಒಳ್ಳೆಯ ಯುವ ಸಾಹಿತಿಗಳು ತಮ್ಮ ಪ್ರತಿಭೆಗಳು ಹೊರಬರಬೇಕಾಗಿದೆಂದರು.
ಸಾನಿಧ್ಯವಹಿಸಿದ್ದ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಜಾನಪದ ಸೋಗಡಿನ ಜೊತೆಗೆ ಓದುಗರ ಅಭಿರುಚಿಗೆ ಸಾಹಿತ್ಯ ರಚನೆಗಳು ಮೂಡಿಬರಬೇಕಾಗಿದೆ. ಧಾರ್ಮಿಕ ಸಾಮಾಜೀಕಿ, ಶೈಕ್ಷಣಿಕವಾಗಿ ಶ್ರಮಿಸುತ್ತರಿರುವ ಯುವ ಸಾಹಿತಿ ಗೀತಾ ಸುಭಾಷ ಬಸ್ತವಾಡ ದಂಪತಿಗಳು ಕಾರ್ಯ ಶ್ಲಾಘನೀಯ ಎಂದರು.
ಶಿಕ್ಷಕಿ ಗೀತಾ ಬಸ್ತವಾಡ (ಶೇಠಿ) ಮಾತನಾಡಿ ಬಾಲ್ಯದಿಂದಲೂ ಕಥೆ,ಕವನ ಬರೆಯುವ ರೂಡಿಯನ್ನು ಗುರುಗಳ ಹಾಗೂ ನನ್ನಪರಿಸರದ ಜನರ ಪೋತ್ಸಾಹ ಋಣದ ಫಲವಾಗಿ ಇಂದು ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ,ಶೈಕ್ಷಣಿಕ ಸೇರಿದಂತೆ ೧೦೦ ಕವನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿರುವದು ಹೆಮ್ಮೆ . ಜೊತೆಗೆ ಹಲವಾರು ಪ್ರಶಸ್ತಿಗಳು ಗೌರವಗಳು ಲಭಿಸಿರುವದು ಸಮಾಜಕ್ಕೆ ಋಣಿಯಾಗಿದ್ದೇನೆಂದರು
ಮಹಾವೀರ ಶಿಕ್ಷಣ ಸಂಸ್ಥೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅಧ್ಯಕ್ಷತೆ ವಹಿಸಿದ್ದರು. ವಿಜಯ ಸಮಾಜ ಸಂಸ್ಥೆ ಅಧ್ಯಕ್ಷ ವಿಜಯ ರವದಿ ಕಾರ್ಯಕ್ರಮ ಉದ್ಘಾಟಿಸಿದರು.
ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ನಿವೃತ್ತಿ ಪ್ರಾಧ್ಯಾಪಕ ಪಿ.ಜಿ ಕೊಣ್ಣೂರ, ಅರಿಹಂತ ಬ್ಯಾಂಕ ಅಧ್ಯಕ್ಷ ಬಿಬಿ ಚೌಗಲಾ, ಸಾಹಿತಿ ಎಸ್.ಎಮ್ ಶಿರೂರ,ಅಥಿತಿಗಳಾಗಿ ಆಗಮಿಸಿದ್ದರು.
ವಿಶ್ರಾಂತ ಪ್ರಾಧ್ಯಾಪಕ ಡಾ ರಾಜಶೇಖರ ಇಚ್ಚಂಗಿ ಗ್ರಂಥ ಪರಿಚಯಿಸಿದರು.
೨೫ ಜನ ಆದರ್ಶ ದಂಪತಿಗಳನ್ನು ಸಮಿತಿವತಿಯಿಂದ ಗೌರವಿಸಿದರು.
ಕ್ಷೇತ್ರ ಸಮನ್ವಧಿಕಾರಿ ಎ.ಎಸ್ ಪದ್ಮಣವರ ,ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಮ್ ನಾಯಿಕ ಪಿಡಿಓ ಶ್ರೀಶೈಲ್ ಮಠದ ಮಾತನಾಡಿದರು.
ಚಿತ್ರ ಕಲಾ ಶಿಕ್ಷಕ ಕುಮಾರ ಬಡಿಗೇರ ಸ್ವಾಗತಿಸಿದರು. ಎಮ್ ಎನ್ ತೇರದಾಳ ಪ್ರಾರ್ಥನೆ ಮಾಡಿದರು.ಸಿಎಮ್ ದರಬಾರೆ ಕಾರ್ಯಕ್ರಮ ನಿರೂಪಿಸಿದರು ಸುಭಾ? ಬಸ್ತವಾಡ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್