ತಾಳಿಕೋಟೆ, ಪಟ್ಟಣದ ಪತ್ರಕರ್ತರಾದ ಅಂಬಾಜಿ ಜಿ ಘೋರ್ಪಡೆ ಅವರಿಗೆ ವಿಶ್ವದರ್ಶನ ದಿನಪತ್ರಿಕೆಯಿಂದ ಮಾದ್ಯಮ ರತ್ನ ಪ್ರಶಸ್ತಿ ರವಿವಾರರಂದು ಕಲಬುರ್ಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಶ್ರೀ ಮಹೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರುಗಿದ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ೬ ವಾರ್ಷಿಕೋತ್ಸವ ಹಾಗೂ ಸರ್ವಧರ್ಮದ ಭಾವ್ಯಕ್ಯತೆಯ ೭ನೇ ರಾಜ್ಯ ಸಮ್ಮೇಳನದಲ್ಲಿ ಹಲವಾರು ಪುಜ್ಯರ, ಗಣ್ಯಮಾನ್ಯರ ಸಮ್ಮುಖದಲ್ಲಿ ಡಾ. ಎಸ್.ಎಸ್ ಪಾಟಿಲ್ ಸಂಪಾದಕರು ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ಹುಬ್ಬಳ್ಳಿ ಇವರ ನೇತೃತ್ವದಲ್ಲಿ ಈ ಪ್ರಶಸ್ತಿಯನ್ನು ನಿಡಿ ಗೌರವಿಸಲಾಯಿತು.