LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವೆಂಕಟೇಶ್ ಕೊಲ್ಲೂರ್ ಅವರಿಂದ ಚೆಸ್ ಅಸೋಸಿಯೇಷನ್ ಗೆ ನಿವೇಶನ ಕೊಡುಗೆ

ಬಳ್ಳಾರಿ. ಫೇ. 08 : ಚದುರಂಗದಾಟ ಒಂದು  ಬುದ್ಧಿವಂತಿಕೆ ಗೇಮ್, ಇಂಥ ಪಂದ್ಯಾವಳಿಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಅದರಲ್ಲೂ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಕಾಪಾಡಿಕೊಳ್ಳಬಹುದು ಇಂಥ ಪಂದ್ಯಾವಳಿಯನ್ನು ಆಯೋಜಿಸಿರುವ ಬಸವರಾಜ್ ರವರಿಗೆ ಅಭಿನಂದನಾರ್ಹರು, ಮುಂದಿನ ದಿನಗಳಲ್ಲಿ ಇಂಥ ಪಂದ್ಯಾವಳಿಗಳನ್ನು ಸಮರ್ಪಕ ರೀತಿಯಲ್ಲಿ ಆಯೋಜಿಸುವ ಸಲುವಾಗಿ ನಮ್ಮ ಬಡಾವಣೆಯಲ್ಲಿರುವ  4800  (60*80) ಚದುರ ಅಡಿ ನಿವೇಶನವನ್ನು ನೀಡುವುದಾಗಿ ವೆಂಕಟೇಶ್ ಕೊಲ್ಲೂರ್ ವಾಗ್ದಾನ ನೀಡಿದರು.

ಅವರು ಇಂದು ನಗರದ ಗಾಂಧಿನಗರ ಮುಖ್ಯ ರಸ್ತೆಯ ವಾಟರ್ ಬೂಸ್ಟರ್ ಸಮೀಪದಲ್ಲಿರುವ ಟ್ರೆಂಡಿ ಪೇಪರ್ ಚೆಸ್ ಅಸೋಸಿಯೇಷನ್, ಕನಕದುರ್ಗ ಚೆಸ್ ಅಕಾಡೆಮಿ ಮತ್ತು ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಚೆಸ್ ಪಂದ್ಯಾವಳಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಸಿದ್ದಲಿಂಗ ಮೂರ್ತಿ ಮಾತನಾಡಿ,  ವಿದ್ಯಾರ್ಥಿಗಳು ತಮಗೆ ಸಿಗುವ ರಜೆಯ ಸಂದರ್ಭದಲ್ಲಿ ಮೊಬೈಲ್ ಹಿಡಿದುಕೊಂಡು ಕಾಲಹರಣ ಮಾಡದೆ  ಈ ತರ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದರೆ ಮಕ್ಕಳ ಬುದ್ಧಿಮಟ್ಟ ಬೆಳೆಯುತ್ತದೆ ಎಂದು ತಿಳಿಸಿದರು. ಚೆಸ್ ಅಸೋಸಿಯೇಷನ್  ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ ಮಾತನಾಡಿ, 2017ರಲ್ಲಿ ಪ್ರಾರಂಭವಾದ ಈ ಅಸೋಸಿಯೇಷನ್ ಕೆಲವೇ ಕೆಲವು  ಆಟಗಾರರನ್ನು ಮಾತ್ರ  ಹೊಂದಿತ್ತು. ಈಗ ಸುಮಾರು ನೂರಾರು ಆಟಗಾರರನ್ನು  ಹೊಂದಿರುವುದು ಬಹಳ ಹೆಮ್ಮೆಯ ವಿಷಯ ಎಂದ ಅವರು,

 ಈ ಸಂದರ್ಭದಲ್ಲಿ ಶ್ರೀ ಏರಿತಾತ  ಕೋ-ಆಪರೇಟಿವ್ ಸೊಸೈಟಿ ಮತ್ತು ವಿ ವಿ ಎಸ್ಎಸ್ ಟ್ರಸ್ಟ್  ಅಧ್ಯಕ್ಷ ವೀರೇಶ್ ತೋಟದ್, ಕೆಇಎಸ್ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗ ಮೂರ್ತಿ, ಅನುದಾನ ರಹಿತ ಶಾಲೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ ರೆಡ್ಡಿ,  ಬೆಸ್ಟ್ ಶಾಲೆಯ ಕಾರ್ಯದರ್ಶಿ  ಶ್ರೀನಿವಾಸ್,

 ಬಳ್ಳಾರಿ ಜಿಲ್ಲೆ ಚೆಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಬಿ ಎಚ್ ಎಮ್ ವಿರೂಪಾಕ್ಷಯ್ಯ,  ಟ್ರೆಂಡಿ ಪೇಪರ್ ಶಾಪ್

ಮಾಲಿಕರಾದ ಸುನಿಲ್,  ಸೀನಿಯರ್ ಆರ್ಬಿಟರ್  ಪ್ರಕಾಶ್, ಸಹಾಯಕ ನಾಗರಾಜ್, ಶಿವಕುಮಾರ್ ಸೇರಿದಂತೆ  ಇತರರು ಉಪಸ್ಥಿತರಿದ್ದರು.

 ಈ ಪಂದ್ಯಾವಳಿಯ ಎಲ್ಲಾ ಉಸ್ತುವಾರಿಯನ್ನು ಸಂಘಟನೆ ಅಂತರಾಷ್ಟ್ರೀಯ ನಿರ್ಣಾಯಕರು ಹಾಗೂ ಇಂಟರ್ನ್ಯಾಷನಲ್ ಆರ್ಬಿಟರ್ ಎಂ ಬಸವರಾಜ್ ವಹಿಸಿಕೊಂಡಿದ್ದರು.

ಈ ಅಸೋಸಿಯೇಷನ್ಗೆ 68 120 ಅಳತೆಯ ನಿವೇಶನವನ್ನು ದಾನವಾಗಿ ಕೊಡಲು ಮುಂದೆ ಬಂದ  ಖ್ಯಾತ ಜ್ಯೋತಿಷಿ ವಿಶ್ವ ಎಂದು ಪರಿಷತ್ತಿನ ಅಧ್ಯಕ್ಷರು ಆದ ವೆಂಕಟೇಶ್ ಕೊಲ್ಲೂರವರನ್ನ ಅಭಿನಂದಿಸಿ ಸನ್ಮಾನಿಸಲಾಯಿತು.  ಈ  ಪಂದ್ಯಾವಳಿಯಲ್ಲಿ  ನೂರಾರು ಮಕ್ಕಳು ಭಾಗವಹಿಸಿದ್ದರು.

 ವಿಜೇತರಾದ ಮಕ್ಕಳಿಗೆ ಸೂಕ್ತ ಬಹುಮಾನವನ್ನು ನೀಡಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್