LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸುಖ-ದುಃಖ ಪುಣ್ಯ-ಪಾಪದ ಫಲ: ಸಿದ್ಧಾರೂಢ ಶರಣರು

ಜಮಖಂಡಿ: ಅನುಕೂಲ ಎನ್ನುವುದೆಲ್ಲವೂ ಸುಖ. ಪ್ರತಿಕೂಲ ಎನ್ನುವುದೆಲ್ಲವೂ ದುಃಖ. ಸುಖ-ದುಃಖಗಳು ಪುಣ್ಯ-ಪಾಪಗಳ ಫಲ. ಪುಣ್ಯದ ಫಲವೆ ಸುಖ. ಪಾಪದ ಫಲವೆ ದುಃಖ. ಸುಖ-ದುಃಖವನ್ನು ಬೇರೆಯವರಿಗೆ ಕೊಡಲು ಅಥವಾ ಬೇರೆಯವರಿಂದ ಪಡೆಯಲು ಬರುವುದಿಲ್ಲ ಎಂದು ಹಿಪ್ಪರಗಿಯ ಸಿದ್ಧಾರೂಢ ಶರಣರು ಹೇಳಿದರು.
  ತಾಲ್ಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳು ೪ನೇ ಭಾನುವಾರ ಹಮ್ಮಿಕೊಳ್ಳುವ ಶ್ರೀಗುರುದೇವ ಸತ್ಸಂಗ ಏ.೨೬ರ ಮಾಸಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರದ ಸಾನ್ನಿಧ್ಯ ವಹಿಸಿ ಅವರು ‘ಸುಖಕ್ಕೆ ಸಾಧನಗಳು ಯಾವುವು?’ ವಿಷಯ ಕುರಿತು ಅನುಭಾವ ಹಂಚಿಕೊAಡರು.
  ಕೋಟಿ ಕೋಟಿ ಜಪ-ತಪ ಮಾಡಿದರೂ ಗುರುವಿನ ಬೋಧೆ ಪಡೆಯದಿದ್ದರೆ ವಾಸ್ತವಿಕ ಸುಖ ಲಭಿಸದು. ಸದ್ರೂಪ ಸುಖ ಎಲ್ಲ ಕಾಲದಲ್ಲೂ ಇರುವಂತಹದ್ದು. ಪುಣ್ಯದಷ್ಟು ಸುಖ, ಪಾಪದಷ್ಟು ದುಃಖ ಇರುತ್ತದೆ. ಭಗವಂತನ ತಕ್ಕಡಿಯಲ್ಲಿ ಪಾಪ-ಪುಣ್ಯಗಳು ಹೆಚ್ಚು-ಕಡಿಮೆ ಆಗುವುದಿಲ್ಲ ಎಂದರು.
  ಕಾಜಿಬೀಳಗಿಯ ಮಲ್ಲಿಕಾರ್ಜುನ ಶರಣರು ಸಾನ್ನಿಧ್ಯ ವಹಿಸಿ ಮಾತನಾಡಿ, ಒಮ್ಮೆ ಸುಖ ಬಂದರೆÉ ತಿರುಗಿ ದುಃಖ ಬರಬಾರದು. ಅದಕ್ಕಾಗಿ ಭಗವಂತನ ಚಿಂತನೆಯಲ್ಲಿ ಇರಬೇಕೆ ವಿನಹ ಸಂಪತ್ತಿನ ಚಿಂತೆಯಲ್ಲಿ ಇರಬಾರದು. ಬಲ್ಲವರ ನುಡಿ ಮುತ್ತುಗಳು ಸುಖಕ್ಕೆ ಸಾಧನ. ಆದ್ದರಿಂದ ಮಹಾತ್ಮರ, ಸಂತರ, ಸತ್ಪುರುಷರ ಸಂಗದಲ್ಲಿ ಇರಬೇಕು ಎಂದು ಆಶೀರ್ವಚನ ನೀಡಿದರು.
  ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ದುಃಖ ಯಾವಾಗಲೂ ಇರುತ್ತದೆ. ಸುಖ ಆಗಾಗ ಬಂದು ಹೋಗುತ್ತಿರುತ್ತದೆ. ಆದ್ದರಿಂದ ನಾವು ಸುಖವನ್ನು ಹುಡುಕುತ್ತಿರುತ್ತೇವೆ. ನಿರಂತರ ಸುಖವನ್ನು ಮಹಾತ್ಮರು ಅನುಭವಿಸುತ್ತಾರೆ. ಅಂತೆಯೆ ಮಹಾತ್ಮರನ್ನು ಆರಾಧಿಸುತ್ತೇವೆ ಎಂದು ಆಶೀರ್ವಚನ ನೀಡಿದರು.
  ಹೊಸೂರಿನ ಶಂಕರಾನAದ ಮಠದ ಪರಮಾನಂದ ಮಹಾಸ್ವಾಮಿಗಳು, ಸಿದ್ದಾಪುರದ ಅಡವಿ ಸಿದ್ಧೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿತಾಯಿ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದ ಲಿಂಗರಾಜ ಪಾಟೀಲ, ಮಹಾಪ್ರಸಾದದ ದಾಸೋಹ ಸೇವೆಗೈದ ಆಲಬಾಳ ಗ್ರಾಮದ ಸಂಗಮೇಶ ತೇಲಿ-ಸಾವಿತ್ರಿ ತೇಲಿ ದಂಪತಿಯನ್ನು ಸನ್ಮಾನಿಸಲಾಯಿತು.
  ೨೦೨೫-೨೬ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ ೯೦ಕ್ಕೂ ಅಧಿಕ ಅಂಕ ಪಡೆದ ಹುಲ್ಯಾಳ ಸುತ್ತಲಿನ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
  ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸಗೌಡ ಪಾಟೀಲ, ಪರಮೇಶ್ವರ ತೇಲಿ, ಅಕ್ಷಯ ಹೂಗಾರ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಶಿಕ್ಷಕ ಗುರುನಾಥ ಸುತಾರ ಸ್ವಾಗತಿಸಿದರು. ಉಪನ್ಯಾಸಕ ಸಂಗಮೇಶ ತೆಲಸಂಗ, ಶಿಕ್ಷಕ ಎಸ್.ಐ. ಚನಪನ್ನವರ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್