LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮಕ್ಕಳಿಗೆ ವೃದ್ಧರಿಗೆ ತೊಂದರೆಯಾಗುತ್ತದೆ  ಮೊಬೈಲ್ ಟವರ್ ಸ್ಥಳಾಂತರ ಬೇಡ : ಯಾಸಿನ್ ಮಸೀದಿ  ಬೀದಿಯ ಜನರ ತೀವ್ರ ವಿರೋಧ.






ಬಳ್ಳಾರಿ. ಎ. 09: ನಗರದ  28 ವಾರ್ಡ್ ಪ್ರದೇಶದ ಯಾಸಿನ್ ಸಾಬ್ ಮಸೀದಿಯ ವಾಣಿಜ್ಯ ಸಂಕೀರ್ಣಗಳ ಕಟ್ಟಡದಮೇಲೆ ಈಗಾಗಲೇ 1989ರಿಂದ ಏರ್ಟೆಲ್ ಕಂಪನಿ ಗೆ ಸಂಬಂಧಿಸಿದ ಮೊಬೈಲ್ ಟವರ್ ಅನ್ನು ಸ್ಥಾಪಿಸಲಾಗಿತ್ತು , ಆದರೆ ಈ ಮೊಬೈಲ್ ಟವರ್ ಅನ್ನು ಈಗ ಏಕಾಏಕಿ ತೆರವುಗೊಳಿಸಿ ಅತ್ಯಂತ ಜನನಿಬಿಡ ಮತ್ತು ಜನವಸತಿ ಪ್ರದೇಶದ ಸಮೀಪದಲ್ಲಿರುವ ಅದೇ ಮಸೀದಿಯ ಹಿಂದಿನ ಭಾಗದಲ್ಲಿ ಅಳವಡಿಸಲು ಮಸೀದಿಯ ಕಮಿಟಿಯವರು ಹುನ್ನಾರ ನಡೆಸುತ್ತಿದ್ದಾರೆ, ಈ ಮೊಬೈಲ್ ಟವರನ್ನು  ಈಗ ಎಲ್ಲಿದೆಯೋ ಅಲ್ಲಿ ಹಾಗೆ ಬಿಡಲಿ ಅಥವಾ ಬೇಡವಾದರೆ ಅದನ್ನು ಈ ಪ್ರದೇಶದಿಂದ ಸಂಪೂರ್ಣವಾಗಿ ತೆರವುಗೊಳಿಸಲು ಯಾವುದೇ ಕಾರಣಕ್ಕೂ ಮಸೀದಿ ಹಿಂದಿನ ಜಾಗದಲ್ಲಿ ಮೊಬೈಲ್ ಟವರ್ ಅಳವಡಿಸಬಾರದು ಎಂದು ಈ ಪ್ರದೇಶದ ಮಾಜಿ ಕಾರ್ಪೊರೇಟರ್ ಇಸ್ಮಾಯಿಲ್ ಮತ್ತು   ಯಾಸಿನ್ ಸಾಬ್ ಮಸೀದಿಯ ಸುತ್ತಮುತ್ತಲ ವಾಸಿಸುವ ಸಾರ್ವಜನಿಕರು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.


 ಈ ಹಿಂದೆ ಹಲವಾರು ಬಾರಿ

 ಈಗಾಗಲೇ ಸಂಬಂಧಿಸಿದ ಶಾಸಕರಿಗೆ ಸಂಸದರಿಗೆ, ಜಿಲ್ಲಾಧಿಕಾರಿಗಳಿಗೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ನೀಡಿ ಈ ಮೊಬೈಲ್ ಟವರ್ ಈ ಪ್ರದೇಶದಲ್ಲಿ ಅಳವಡಿಸ ದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಆದರೂ ಸಹ ಯಾವೊಬ್ಬ ಅಧಿಕಾರಿಗಳು ಈ ಮೊಬೈಲ್ ಟವರ್ ಅಳವಡಿಕೆಯನ್ನು ತಡೆಯಲು ಮುಂದಾಗಿಲ್ಲದ ಕಾರಣ ಕಂಪನಿ ಈ ಜನವಸತಿ ಪ್ರದೇಶದ ಹತ್ತಿರ ಮೊಬೈಲ್ ಟವರ್ ಅಳವಡಿಸಲು ಮುಂದಾಗಿರುತ್ತದೆ, ಕಂಪನಿಯ ಮ್ಯಾನೇಜರ್ ಖಲೀಲ್ ಅಹ್ಮದ್ ಅವರನ್ನು ಕೇಳಿದಾಗ ಸಮಿತಿಯ ಕೆಲ ಜನ ಈ ಟವರನ್ನು ಸ್ಥಳಾಂತರಿಸಲು ತಿಳಿಸಿದ್ದಾರೆ ಕಾರಣ ಅದನ್ನು ನಾವು ಕಂಪನಿ ವತಿಯಿಂದ ಕಟ್ಟಡದ ಮೇಲಿನಿಂದ ಈ ಕೆಳಗಿನ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಯಾರು ಹೇಳಿದರು ಎಂದರೆ ಹೆಸರು ಹೇಳಲು ಇಚ್ಚಿಸದ ಖಲೀಲ್ ನನ್ನನ್ನು ಏನು ಕೇಳಬೇಡಿರಿ ಸಮಿತಿಯವರನ್ನೇ ಕೇಳಿ ಎಂದು ಹಾರೈಕೆ ಉತ್ತರ ನೀಡುತ್ತಿದ್ದಾರೆ.


 ಒಂದು ವೇಳೆ ಈ ಮೊಬೈಲ್ ಟವರ್ ಅನ್ನು ಈಗಿನ ಪ್ರಸ್ತಾಪಿತ ಸ್ಥಳದಲ್ಲಿ ಅಳವಡಿಸಿದ್ದೆ ಆದಲ್ಲಿ ಅದರ ಜನರೇಟರ್ ನಿಂದ ಶಬ್ದ ಮಾಲಿನ್ಯ ವಿಪರೀತ ಮೊಬೈಲ್ ರೇಡಿಯೇಷನ್ಗಳು  ಉಂಟಾಗಿ ಮಕ್ಕಳಿಗೆ ಮತ್ತು ವೃದ್ಧರಿಗೆ ತೊಂದರೆಯಾಗುವ ಅಪಾಯವಿದೆ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಎಳೆವಯಸ್ಸಿನ ಮಕ್ಕಳಿಗೆ ಮತ್ತು ಇಳಿ ವಯಸ್ಸಿನ ವೃದ್ಧರಿಗೆ ಹಲವಾರು ರೀತಿಯ ಅನಾರೋಗ್ಯ ಕಾಡುವ ಅಪಾಯವಿದೆ  ಯಾವುದೇ ಕಾರಣಕ್ಕೂ ಈ ಮೊಬೈಲ್ ಟವರ್  ಅಳವಡಿಸುವುದನ್ನು ತಡೆಹಿಡಿಯಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಲ್ಲಿ ಮಾಧ್ಯಮದ ಮೂಲಕ ಇವರ ಅಕ್ರೋಶವನ್ನು ವ್ಯಕ್ತಪಡಿಸಿದರು.

 ಈ ಮಸೀದಿಯು ವಕಾಫ್  ಬೋರ್ಡ್ ಆಸ್ತಿಯಲ್ಲ, ಬದಲಾಗಿ ಕೇವಲ ನಿರ್ವಹಣೆ ಮಾತ್ರ ಬೋರ್ಡಿಗೆ ಸಂಬಂಧಿಸಿದಂತೆ

ಮಸೀದಿಯ ಆದಾಯಕ್ಕಾಗಿ  ಸಾರ್ವಜನಿಕರ ಆರೋಗ್ಯವನ್ನು ಹಾಳು ಗೆಡುವಲು ಮುಂದಾಗಿದ್ದಾರೆ ಯಾವುದೇ ಕಾರಣಕ್ಕೂ ಮೊಬೈಲ್ ಟವರ್ ಅಳವಡಿಕೆ ಬೇಡ ಎಂದು

ಮಾಜಿ ಕಾರ್ಪೊರೇಟರ್  ಇಸ್ಮಾಯಿಲ್, ಸ್ಥಳೀಯ ನಿವಾಸಿಗಳಾದ  ರಿಯಾಜ್, ಶಬ್ಬೀರ್, ಮೌಸಿನ್ ಅಲಿ, ಖಾಜಾ ಮೌನಿದಿನ್, ಸುಲೇಮಾನ್, ಎಂ.ಡಿ. ಅಲಿ, ಮೊಹಮ್ಮದ್ ಭಾಷಾ, ರಮಾನಾಥ್ ರಾವ್, ನೇಯಾಜ್, ಅಹ್ಮದ್, ಅಯೂಬ್, ಆಶ್ರರ್ ಸುಹಾಲ್, ಮೊಹಮ್ಮದ್ ಇಶಾಕ್ ಸೇರಿದಂತೆ ಹಲವರು ಸಹಿ ಹಾಕಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಸಾರ್ವಜನಿಕ ಸುರಕ್ಷತೆ ಮತ್ತು ಜನರ ಯೋಗಕ್ಷೇಮದ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.







Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ