LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸರಳ ಸಜ್ಜನಿಕೆಗೆ ಇನ್ನೊಂದು ಹೇಸರೆ ಶಿಕ್ಷಕ ಎಚ್.ಎಮ್.ಬಿಳ್ವಾರ : ಯಶವಂತರಾಯಗೌಡ ಪಾಟೀಲ

ಇಂಡಿ: ಶಿಕ್ಷಣ ಸಂಸ್ಥೆಗಳು ಪ್ರಗತಿ ಪಥದತ್ತ ಸಾಗಬೇಕಾದರೆ ಆಡಳಿತ ಮಂಡಳಿ ಶ್ರಮ ಸಾಲದು ಅಲ್ಲಿನ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕ ಎಚ್.ಎಮ್.ಬಿಳ್ವಾರ ಅವರ ಅನುಪಮ ಸೇವೆ ಕೂಡಾ ಒಂದಾಗಿದೆ ಎಂದರೆ ತಪ್ಪಾಗಲಾರದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ನಗರದ ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರೌಡ ಶಾಲೆಯ ದೈಹಿಕ ಶಿಕ್ಷಕ ಹುಮಾಯುನ್ ಬಿಳವಾರ ವಯೋನಿವೃತ್ತಿ ಪ್ರಯುಕ್ತ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೇಲವ ವಿದ್ಯಾರ್ಥಿಗಳ ಜೊತೆ ಗುರು ಶಿಷ್ಯರ ಸಂಬಂದ ಹೊಂದದೆ ಸ್ನೇಹಮಯಿಯಾಗಿ ಒಡನಾಟ ಬೆಳಸಿಕೊಂಡ ಸರಳ ಸಜ್ಜನಿಕೆಗೆ ಇನ್ನೊಂದು ಹೇಸರೆ ಬಿಳವಾರ ಅವರಾಗಿದ್ದರು. ದೈಹಿಕ ಶಿಕ್ಷಕರಾಗಿದ್ದರು ಸಹ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಬಹಳವಿದೆ. ಅವರಿಗೆ ನೂರು ವರ್ಷ ಆಯುಷ್ಯ ನೀಡಲಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೆನೆ ಎಂದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಿ ಮುಂಬರುವ ಪರಿಕ್ಷೇಯ ತಯಾರಿಯನ್ನು ಈಗಿನಿಂದಲೆ ಪ್ರಾರಂಭಿಸಿ. ತಳಹಂತದ ಮಹತ್ವ ಪರಿಕ್ಷಯಾಗಿದ್ದು ಇದನ್ನು ಚಾಲೆಂಜಾಗಿ ಸ್ವಿಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
. ಸನ್ಮಾನ ಶ್ವಿಕರಿಸಿ ಶಿಕ್ಷಕ ಎಚ್.ಎಮ್.ಬಿಳ್ವಾರ ಮಾತನಾಡಿ ವಿದ್ಯಾರ್ಥಿಗಳ ಹಾಗೂ ಸಮಾಜದ ಒಳಿತಿಗಾಗಿ ನಾನು ಮಾಡಿರುವ ಪ್ರತಿಯೊಂದು ಕೇಲಸವು ನನ್ನ ಕರ್ತವ್ಯ ಎಂದು ಭಾವಿಸಿ ಮಾಡುತ್ತಿದ್ದೆ ಹೊರತು ಯಾವುದೆ ಉದ್ದೇದಿಂದ ಅಲ್ಲ ಎಂದರು.
ಮೌಲಾನ ಶಾಕೀರ ಹುಸೇನ ಕಾಸ್ಮಿ ಸಾನಿದ್ಯ ವಹಿಸಿದ್ದರು. ವೇದಿಕೆ ಮೇಲೆ ಲಿಂಬೆ ಅಭಿವೃದ್ದಿ ಮಂಡಲಿ ಅಧ್ಯಕ್ಷ ಭೀಮಣ್ಣ ಕವಲಗಿ, ಜಿಲ್ಲಾ ಗ್ಯಾರೆಂಟಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಅನೀಸ ಫಾತಿಮಾ ಮುಜಾವರ, ಜಗದೀಶ ಕ್ಷೇತ್ರಿ, ಫಾರೂಕ ತುರ್ಕಿ ಇದ್ದರು.
ಮುಖ್ಯೋಪಾಧ್ಯಾಯ ಮುಜೀಬ ಬಾಗವಾನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೋಟೊ ಕ್ಯಾಪ್ಸನ್ ೦೭ ಇಂಡಿ ೦೨: ನಗರದ ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರೌಡ ಶಾಲೆಯ ದೈಹಿಕ ಶಿಕ್ಷಕ ಹುಮಾಯುನ್ ಬಿಳವಾರ ವಯೋನಿವೃತ್ತಿ ಪ್ರಯುಕ್ತ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ಘಾಟಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್