LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹುಕ್ಕೇರಿ ಬಸ್ ನಿಲ್ದಾಣ ಗಬ್ಬೆದ್ದು ನಾರುತ್ತಿದೆ

ಹುಕ್ಕೇರಿ ಬಸ್ ನಿಲ್ದಾಣದಲ್ಲಿ ತ್ವರಿತ ಗತಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ಕೆ, ತಿಳಿಯದ ವಿಳಂಬದ ಕಾರಣ  
ಕೆಲವೇ ದಿನಗಳಲ್ಲಿ ಮುಗಿಯಬೇಕಿದ್ದ ವ್ಯಾಪಾರ ಮಳಿಗೆಗಳು ತಿಂಗಳಾದರೂ ಮುಗಿಯುತ್ತಿಲ್ಲ. ಕಾರಣ ಯಾರಿಗೂ ತಿಳಿಯುತ್ತಿಲ್ಲ. ಹುಕ್ಕೇರಿ ಪಟ್ಟಣದ ನೂತನ  ಹೈಟೆಕ್ ಬಸ್ ನಿಲ್ದಾಣ ಬಳಿ ಇದ್ದ ಅನುಪಯುಕ್ತ ಮೂತ್ರಾಲಯ, ಅದರ ಮುಂದೆ ಹಾಕುವ ತ್ಯಾಜ್ಯ ಕಸದ ರಾಶಿ, ಹೊರಗಡೆ ಬಯಲಲ್ಲೇ ಮೂತ್ರವಿಸರ್ಜನೆ, ಕೆಟ್ಟ ದುರ್ವಾಸನೆ ಇದರಿಂದಾಗುವ ಸಾರ್ವಜನಿಕ ತೊಂದರೆಯನ್ನು ತಡೆಯಲು ಮತ್ತು ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಿ, ಸಂಸ್ಥೆಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಹಾಗೂ ಬಯಲಲ್ಲೇ ಮೂತ್ರವಿಸರ್ಜನೆ ತಡೆಯುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶಿಷ್ಟ ಹೆಜ್ಜೆ ಇಟ್ಟಿದ್ದು. ಸಂಸ್ಥೆಯ ಅಧೀನದ ಈ ನಿರುಪಯುಕ್ತ ಜಾಗದಲ್ಲೇ ಜನೋಪಯೋಗಿ ಮತ್ತು ಸಂಸ್ಥೆಗೆ ಆದಾಯ ತಂದುಕೊಡಬಲ್ಲ  ಮೂರು ಮಾರಾಟ ಮಳಿಗೆಗಳನ್ನು ನಿರ್ಮಿಸಲು ಕಾಮಗಾರಿ ಆರಂಭಿಸಿದ್ದಾರೆ.ಜೊತೆಗೆ ಮಾರಾಟ ಮಳಿಗೆಗಳು ಮುಗಿಯುವ ಹಂತದಲ್ಲಿವೆ. ಹಿತಾಸಕ್ತಿಗೆ ಅನುಗುಣವಾಗಿ ಸಾರಿಗೆ ಸಂಸ್ಥೆ ಕೈಗೆತ್ತಿಕೊಂಡಿರುವ ಈ ಮಹತ್ತರ ಕಾರ್ಯಕ್ಕೆ ಸಾರ್ವಜನಿಕರಿಂದ ಕೂಡ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.  ಆದರೇ ತಮ್ಮ ನೈತಿಕತೆಯನ್ನು ಮರೆತು ಸೂಕ್ತ ಕಾರಣವಿಲ್ಲದೆ ತಮ್ಮ ಸ್ವಂತ ಲಾಭವನ್ನೇ ತಮ್ಮ ಉದೇಶವನ್ನಾಗಿಸಿಕೊಂಡ ಕೆಲವು ಸಂಘಗಳು ಮತ್ತು ಕೆಲವು ಮಾಧ್ಯಮಗಳು, ಬಸ್ ನಿಲ್ದಾಣದಲ್ಲಿ ಪ್ರಾರಂಭವಾಗುತ್ತಿರುವ ವ್ಯಾಪಾರ ಮಳಿಗೆಗಳನ್ನು ವಿರೋಧಿಸುತ್ತಿವೆ ಮತ್ತು ವಿನಾಕಾರಣ ಕಿರಿಕಿರಿ ಉಂಟುಮಾಡುತ್ತಿವೆ.
ಈ ಬಸ್ ನಿಲ್ದಾಣದ ಆಗಮನ ಮತ್ತು ನಿರ್ಗಮನ ದ್ವಾರದ ಬಳಿ ಖಾಸಗಿ ವಾಹನಗಳ ಹಾವಳಿಯಿಂದ ಸಂಸ್ಥೆಗೆ ನಿತ್ಯ ಸಾವಿರಾರು ರೂ ನಷ್ಟವಾಗುತ್ತಿತ್ತು. ಅಷ್ಟೇ ಅಲ್ಲದೇ  ದ್ವಿಚಕ್ರ ಮತ್ತು ಖಾಸಗಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಸಾಕಷ್ಟು ಟ್ರಾಫಿಕ್ ಸಮಸ್ಯೆಯೂ ಉದ್ಭವಿಸುತಿತ್ತು. ಜೊತೆಗೆ ಈ ಸ್ಥಳದಲ್ಲಿಯೇ ಇದ್ದ ಅನುಪಯುಕ್ತ ಮೂತ್ರಾಲಯದಿಂದ ತ್ಯಾಜ್ಯ ಕಸದ ರಾಶಿ, ಹೊರಗಡೆಯೇ ಮೂತ್ರವಿಸರ್ಜನೆ ಸಾಮಾನ್ಯವಾಗಿತ್ತು. ಇದರಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಬ್ಬೆದ್ದ ವಾಸನೆಯಿಂದ ಮೂಗು ಮುಚ್ಚಿಕೊಂಡು ಹಿಡಿಶಾಪ ಹಾಕುತ್ತಿದ್ದರು. ಸಂಸ್ಥೆಯ ಅಧಿಕಾರಿ-ಸಿಬ್ಬಂದಿಗಳು ಸಾರ್ವಜನಿಕರಲ್ಲಿ ಹಲವಾರು ಬಾರಿ ಮನವಿ ಮಾಡಿದರೂ ರಾತ್ರಿ ಈ ಸ್ಥಳದಲ್ಲಿ ಮೂತ್ರವಿಸರ್ಜನೆ, ಸಾರಾಯಿ ಪ್ಯಾಕೆಟ್ ಎಸೆಯುವುದು ತಪ್ಪಿರಲಿಲ್ಲ. ಹೊಟೇಲ್‌ನವರು, ನಿತ್ಯ ತ್ಯಾಜ್ಯ ಎಸೆದು ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಹಲವು ಬಾರಿ ಸ್ವಚ್ಛಗೊಳಿಸಿ ಕಸ ಹಾಕದಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಇದನ್ನು ಮನಗಂಡ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರೊಂದಿಗೆ ಸಂಸ್ಥೆಗೆ ಆದಾಯ ತಂದುಕೊಡುವ ಯೋಜನೆ ರೂಪಿಸಿದ್ದಾರೆ.
ಇಂತಹ ಮಹತ್ತರ ಯೋಜನೆಯನ್ನು ಅನಾವಶ್ಯಕ ಕಾರಣಗಳಿಂದಾಗಿ ಆಗುವ ವಿಳಂಬವನ್ನು ಮುನ್ನ ಸ್ಥಳೀಯ ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಇದನ್ನು ಪರಿಶೀಲಿಸಿ ಕೂಡಲೇ ಹುಕ್ಕೇರಿ ಬಸ್ ನಿಲ್ದಾಣದ ಆವರಣದಲ್ಲಿ ಜನೋಪಯೋಗಿ ಮತ್ತು ಸಂಸ್ಥೆಗೆ ಆದಾಯ ತಂದುಕೊಡಬಲ್ಲ ವ್ಯಾಪಾರ ಮಳಿಗೆಗಳ ನಿರ್ಮಾಣಕ್ಕೆ  ಅನುಕೂಲ ಕಲ್ಪಿಸಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್