LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಹುಕ್ಕೇರಿ ಚಲೋ!


ಹುಕ್ಕೇರಿ,ಮೇ,೧೨ : ಹುಕ್ಕೇರಿ ತಾಲೂಕಿನ ರೈತರ ಬಾಳಿಗೆ ಸ್ವಾತಂತ್ರ ದೊರೆತು ೮೦ ವರ್ಷಗಳಾದರೂ ಸಹ  ಅವರ ಆರ್ಥಿಕ ಸ್ವಾವಲಂಭನೆಗೆ ಸಿಗಬೇಕಾದ ಮೂಲಭೂತ ಸೌಕರ್ಯವಾದ ನೀರು, ಇನ್ನೂವರೆಗೂ ಗಗನ ಕುಸುಮವಾಗಿದೆ.

ತಾಲೂಕಿನ ನೂರಾರು ಹಿರಿಯ ರೈತರ ಪರಿಶ್ರಮ, ತ್ಯಾಗದ ಪ್ರತಿಕವಾಗಿ,  ಹಲವಾರು  ಹಿರಿಯ ಸಹಕಾರಿಗಳು, ಬುದ್ದಿ ಜೀವಿಗಳು, ಅಲ್ಲದೇ ಎಷ್ಟೋ ಜನ ರೈತರು ತಮ್ಮ ಮನೆ ಹೊಲ ಗದ್ದೆಗಳನ್ನು ದಾನ ನೀಡಿ ತಾಲೂಕಿನ ನನ್ನ ಜನ ಮುಂದೆ ಏಂದೂ ಯಾವದೇ ಕಾರಣಕ್ಕೂ ನೀರಿಗಾಗಿ ಪರಿತಪ್ಪಿಸ ಬಾರದು ಎಂಬ ಮಹತ್ತರ ಉದ್ದೇಶವನ್ನು ಹೊಂದಿ ತಾಲೂಕಿನ ಜನರ ಒಳಿತಿಗಾಗಿ ಎರಡು ಡ್ಯಾಮಗಳನ್ನು ನಿರ್ಮಿಸಿದ್ದಾರೆ. 

 ಆದರೇ ಇವತ್ತಿನ ದಿನ ತಾಲೂಕಿನ ಮುಗ್ಧ ಜನ  ತಮ್ಮ ದನ ಕರು ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ಕೃಷಿ ಕೆಲಸಕ್ಕೆ ನೀರು ಸಿಗದೆ ನೀರಿಗಾಗಿ ಪರದಾಡುವಂತಾಗಿದೆ, ತಾಲೂಕಿನ ರೈತರಲ್ಲಿ ಶೇಕಡಾ ೬೦ ರಷ್ಟು ಜನ ಮಳೆ ಆಶ್ರಿತ ಕೃಷಿ ಕಾಯಕ ಮಾಡುತ್ತಿದ್ದಾರೆ, ನೀರಿನ ಅಂತರ ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿವುತ್ತಿದೆ, ತಾಲೂಕಿನ ರೈತ ಕುಟುಂಬದ ಯುವಕರು ಶಹರಗಳಿಗೆ ಕೃಷಿಯನ್ನು ಬಿಟ್ಟು ಬೇರೆ ಕೆಲಸಕ್ಕೆ ಹೋಗುತ್ತಿದ್ದಾರೆ.

ಇಂತಹ ದುಸ್ತರ ಪರಿಸ್ಥಿತಿ ತಾಲೂಕಿನಲ್ಲಿ  ಇರುವಾಗ ಮಾನ್ಯ ರಾಜ್ಯ ಸರಕಾರ ಹುಕ್ಕೇರಿ ತಾಲೂಕಿನಲ್ಲಿಯ ಡ್ಯಾಮ ನೀರನ್ನು ಧಾರವಾಡದ ಕೈಗಾರಿಕೆಗೆ ಪೂರೈಸುವ ಯೋಜನೆಯನ್ನು ರೂಪಿಸಿ ಕೆಲಸ ಪ್ರಗತಿ ಯಲ್ಲಿದೆ. ಇದನ್ನು ಪ್ರಶ್ನೀಸದ ಸ್ಧಳೀಯ ಯಾವ ಒಬ್ಬ ಶಾಸಕ, ಲೋಕಸಭೆ ಸದಸ್ಯ ಇವರ ಈ ಮಲತಾಯಿ ನೀತಿಯನ್ನು ಧಿಕ್ಕರಿಸಿವುದು.

ತಾಲೂಕಿನಲ್ಲಿ ಹತ್ತಾರು ವಷ೯ಗಳಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನಗಳಾದ ಮಲ್ಲಿಕಾಜು೯ನ ಎತ ನೀರಾವರಿ ಯೋಜನೆ, ಕುರಣಿ ಎತ ನೀರಾವರಿ ಯೋಜನೆ,ಕೋಚರಿ ಎತ ನೀರಾವರಿ ಯೋಜನೆ,ಹಿರಣ್ಯಕೇಶಿ ಎತ ನೀರಾವರಿ ಯೋಜನೆ,ರುಸ್ತುಂಪೂರ ಎತ ನೀರಾವರಿ ಯೋಜನೆ,ಉಳ್ಳಾಗಡಿ ಖಾನಾಪೂರ ಗ್ರಾಮದ ಕೆರೆ ತುಂಬುವ ಯೋಜನೆ, ಅಲ್ಲದೇ ತಾಲೂಕಿನ ಅವಳಿ ನಗರಗಳಾದ ಸಂಕೇಶ್ವರ ಹಾಗೂ ಹುಕ್ಕೇರಿ  ನಗರಗಳಿಗೆ ೨೪/೭ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಗೋಳಿಸುವ ಕುರಿತು ಇದೇ ದಿನಾಂಕ ೨೦-೦೫-೨೦೨೬ ರಂದು ಹುಕ್ಕೇರಿ ನಗರದ ಕೋಟ೯ಸಕ೯ಲದಲ್ಲಿ  ತಾಲುಕಿನ ಎಲ್ಲಾ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ,ತಾಲುಕಿನ ಸಮಗ್ರ ನೀರಾವರಿ ಆಗುವವರೆಗೆ   ಕನಾ೯ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರಾಜ್ಯಾಧ್ಯಕ್ಷರಾದ ಶ್ರೀ ಚೂನಪ್ಪ ಪೂಜೇರಿ ಹಾಗೂ ರಾಜ್ಯ ಗೌರವಾಧ್ಯಕ್ಷರಾದ ಶ್ರೀ ಶಶೀಕಾಂತ ಪಡಸಲಗಿ  ಗೂರುಜಿ ಇವರ ನೇತ್ರತ್ವದಲ್ಲಿ  ಬೃಹತ ಪ್ರಮಾಣದಲ್ಲಿ  ಅನಿದಿ೯ಷ್ಟ ಅವಧಿಯವರೆಗೆ  ತಾಲೂಕನ್ನು ಸಂಪೂಣ೯ ನೀರಾವರಿ ಮಾಡುವವರೆಗೆ ಹೋರಾಟ ಹಮ್ಮಿಕೊಳ್ಳಲಾಗಿದೆ.

 ಸದರಿ ಹೋರಾಟದಿಂದ ತಾಲೂಕಿನ ಸರಿಸುಮಾರು ೬೦ ಹಳ್ಳಿಗಳಿಗೆ ೧೮,೦೦೦ ಹೆಕ್ಟರ ಕೃಷಿ ಜಮೀನು ಸಂಪೂ೯ಣ ನೀರಾವರಿ ಕೃಷಿ ಜಮೀನಾಗಿ ಪರಿವತ೯ನೆ ಆಗಲಿದೆ.ಸದರಿ ಎಲ್ಲಾ ನೀರಾವರಿ ಯೋಜನೆಗಳ ಒಟ್ಟು ವೆಚ್ಚ ೧೦೩೦.೦೦ ಕೋಟಿ ರೂಗಳು ಅಂತಾ  ಅಂದಾಜು ಮಾಡಲಾಗಿದೆ. ಈ ಯೋಜನೆಗಳ ಅನುಷ್ಠಾನದಿಂದ ತಾಲೂಕಿನ ಜನ ಮುಂದೇ ಎಂದೂ ನೀರಾವರಿಗಾಗಿ ಪರಿತಪ್ಪಿಸುವ ಪ್ರಮಯ ಬರುವದಿಲ್ಲ, ಹಾಗಾಗಿ ತಾಲೂಕಿನ ರೈತ ದೇವರುಗಳು, ಪ್ರಜಾವಂತ ಜನರು, ಸದರಿ ಹೋರಾಟದಲ್ಲಿ ಪಾಲ್ಗೋಂಡು ಹೋರಾಟ ಯಶಸ್ವಿಗೋಲಿಸ ಬೇಕಾಗಿ ವಿನಂತಿ.                                                                                                  

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್