LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಇದ್ದಲಗಿ ಗ್ರಾಮಸ್ಥರ ಧರಣಿ ಸತ್ಯಾಗ್ರಹ : ಬೇಡಿಕೆಗಳ ಇಡೇರಿಕೆಗೆ ಪ್ರಾಮಾಣಿಕ ಪ್ರಯತ್ನದ ಭರವಸೆ ನೀಡಿದ ಸಂಸದ ಪಿ.ಸಿ. ಗದ್ದಿಗೌಡರ

ಹುನಗುಂದ; ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಇಲಾಖಾವಾರು ಸಚಿವರುಗಳ ಹಾಗೂ ಶಾಸಕರನ್ನೊಳಗೊಂಡು ಹೆಚ್ಚಿನ ನಿವೇಶನ ಸೇರಿದಂತೆ ನಿಮ್ಮೆಲ್ಲ ಬೇಡಿಕೆಗಳನ್ನು ಇಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಬಾಗಲಕೋಟ ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.                                             ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಯೋಜನಾಭಾದಿತ ಸಂತ್ರಸ್ಥರು ವಿವಿದ ಬೇಡಿಕೆಗಳ ಇಡೇರಿಕೆಗೆ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದಾಗ ಸಂತ್ರಸ್ಥರು ನೀಡಿದ ಮನವಿ ಸವೀಕರಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬ, ಕೃಷಿ ಚಟುವಟಿಕೆಗೆ ಬೇಕಾಗುವ ದನಕರುಗಳನ್ನು ಜೊತೆಗೆ ಇಟ್ಟುಕೊಂಡು ಜೀವನ ನಡೆಸಬೇಕಾಗುತ್ತದೆ. ಈಗಾಗಲೆ ಸಂಸ್ರಸ್ಥರಿಗೆ ನೀಡಿದ ಕೇವಲ ೧ಗುಂಟೆ ಸ್ಥಳದ ಅವೈಜ್ಞಾನಿಕವಾಗಿದೆ. ಇಷ್ಟರಲ್ಲಿ ಬದುಕು ಸಾಗದೆ ಸಂತ್ರಸ್ಥಿಗೆ ಕನಿಷ್ಠ ೪ಗುಂಟೆ ಸ್ಥಳವನ್ನು ಕಲ್ಪಿಸಿ ಜೀವನಕ್ಕೆ ಬೇಕಾಗುವ ವಿವಿದ ಸೌಕರ್‍ಯಗಳನ್ನು ಒದಗಿಸಬೇಕು. ಈ ಕಾರ್‍ಯ ಯಾವಾಗೊ ಆಗಬೇಕಿತ್ತು. ಅಧಿಕಾರಿಗಳ ನಿರ್ಲಕ್ಷವೊ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷವೊ ತಿಳಿಯದು. ಈಗ ಇದರ ಜವಾಬ್ದಾರಿಯನ್ನು ಸರ್ಕಾರವೆ ನಿಭಾಯಿಸಬೇಕು. ರಾಜ್ಯದಲ್ಲಿ ಸಿಎಂ ಬದಲಾವಣೆ ಮತ್ತು ಸಚಿವರುಗಳ ಬದಲಾವಣೆ ಹೀಗೆಲ್ಲ ತೊಂದರೆಯಿಂದ ಈ ಧರಣಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತ ೪೫ದಿನಗಳಿಂದ ಹೋರಾಟ ನಡೆಸುತ್ತಿದೆ. ನಿಮ್ಮ ಪ್ರಾಮಾಣಿಕ ಬೇಡಿಕೆ ಇಡೇರಿಕೆಗೆ ನಿಮ್ಮೊಂದಿಗೆ ನಾನು ಶ್ರನಿಸುತ್ತೇನೆಂದು ಸಂಸದ ಗದ್ದಿಗೌಡರ ಸಂತ್ರಸ್ಥರಿಗೆ ತಿಳಿಸಿದರು. ಬಿಜೆಪಿ ಮುಖಂಡರಾದ ಡಾ. ಮಹಾಂತೇಶ ಕಡಪಟ್ಟಿ, ವೀರೇಶ ಉಂಡೋಡಿ, ವಿಠ್ಠಲ ತಿಮ್ಮಾಪೂರ, ಅಜ್ಜಪ್ಪ ನಾಡಗೌಡ, ಬಸವರಾಜ ಬಡ್ಡಿ, ಮಹಾಂತೇಶ ನಾಡಗೌಡ, ಮಲ್ಲಪ್ಪ ಹಳಪೇಟಿ, ಸಂಗಪ್ಪ ಆನೇಹೊಸುರ, ಹಸನಸಾಬ ಪಿಂಜಾರ, ಶರಣಪ್ಪ ಮುಳ್ಳೂರ, ವೀರಪ್ಪ ಆನೇಹೊಸೂರ, ಬಸವರಾಜ ತಿಮ್ಮಾಪೂರ, ಕಲ್ಲಪ್ಪ ಆನೇಹೊಸೂರ, ಮೀನಾಕ್ಷಿ ಗಂಜಿಹಾಳ, ಶಂಕ್ರವ್ವ ವಾಲೀಕಾರ ಇತರರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ