LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕಲುಷಿತ ವ್ಯವಸ್ಥೆಗೆ ಕಡಿವಾಣ ಹಾಕದೆಹೋದರೆ ಅದೋಗತಿ ನಿಶ್ಚಿತ ....ಪ್ರಭುಜೀ.

 

ಮುಗಳಖೋಡ,01 :  ಬೆಳೆಯುವ ಶಿರಿ ಮೊಳಕೆಯಲ್ಲಿ ಕಾಣು ಎನ್ನುವಂತೆ ಆದರ್ಶಮಯ ಶಿಕ್ಷಣ ಸಿಗಬೇಕಾದರೆ ಪರಿಪೂರ್ಣ ಜ್ಞಾನವಂತ ಶಿಕ್ಷಕನಿಂದ ಮಾತ್ರ ಸಾಧ್ಯವೋ ಹಾಗೆ ಕಲುಷಿತ ಗೊಂಡಿರುವ ಇಂದಿನ ವ್ಯವಸ್ಥೆಗೆ   ನೀತಿವಂತ ಅರಿವಿನ ಜ್ಞಾನ ಹೊಂದಿರುವ ಅಭಿವೃದ್ಧಿಯ ಹರಿಕಾರರು  ಅದಕ್ಕೆ ಕಡಿವಾಣ ಹಾಕದೇ ಹೋದರೆ ಅದೋಗತಿ ನಿಶ್ಚತ ಎಂದು ಇಂಚಗೇರಿ ಸಂಪ್ರದಾಯದ ಹಿಪ್ಪರಗಿ ಮಠದ ಪ್ರಭುಜೀ ಮಹಾರಾಜರು ಹೇಳಿದರು. 
ಅವರು ಶುಕ್ರವಾರ 31 ರಂದು  ಪಟ್ಟಣದ ಮೂಕನಜಾಲಿ ತೋಟದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 26 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ   ಮುಖ್ಯ ಶಿಕ್ಷಕ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಿ.ಬೆಂಗಳೂರು ನೀಡಿರುವ ಜಿಲ್ಲಾ ಆದರ್ಶ ಶಿಕ್ಷಕ ಮತ್ತು ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ   ರಾಮಪ್ಪ ಯಮನಪ್ಪಾ ಬೀರಕ್ಕನವರ ಸೇವಾ  ನಿವೃತ್ತಿ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಇಂತಹ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ  ಅರಿವು,ಸತ್ಯ,ಸನ್ಮಾರ್ಗ,ಸಂಸ್ಕೃತಿ ಮತ್ತು ಸಂಸ್ಕಾರಯುತ ಶಿಕ್ಷಣ ಬೇಕು ಅದು ಇಂದು ಇಲ್ಲಿಯ ವಿದ್ಯಾರ್ಥಿಗಳಿಗೆ ಸಿಕ್ಕಿದೆ ಆದರೆ ಹಲವಾರು ಕಡೆ  ಮಾಯವಾಗಿ ಯಾವುದೇ ಮಾರ್ಗವಾಗಿರಲಿ ಹಣ ಗಳಿಸುವುದೆ ಮುಖ್ಯವಾಗಿದೆ, ಪಾಲಕರು ಪೋಷಕರು ಮತ್ತು ಶಿಕ್ಷಕರು ಮುದ್ದು ಮಕ್ಕಳಿಗೆ ಮುದ್ದಾದ ಅರಿವಿನ ಶಿಕ್ಷಣ ನೀಡಿ ಬದುಕಿನ ಮೂಲ ತತ್ವಗಳನ್ನು ಬೋಧಿಸಿ ಅವರ ಜೀವನ ಪರಿಪೂರ್ಣ ಹೊಂದುವಂತೆ ಮಾಡಬೇಕು ಆಗ ನಿಮ್ಮ ಸಾಧನೆ ಇನ್ನು ಇಮ್ಮಡಿಗೊಳ್ಳುತ್ತದೆ, ಭ್ರಷ್ಟರೂ ಬಹುವಾಗಿ ಭ್ರಷ್ಟತೆ ಭೃಹ್ದಾಕಾರವಗಿ ಬೆಳೆಯುತ್ತಿರುವ ಈ ದಿನಗಳಲ್ಲಿ ನೀವು ನಿಮ್ಮವರು ನಿಮಗಾಗಿ ರೀತಿ ನೀತಿಯಿಂದ ಬಾಳಿ ಜಗಕ್ಕೆ ಜ್ಯೋತಿಯಾಗುವ ಶಕ್ತಿಯನ್ನು ನಿಮ್ಮ ಮಕ್ಕಳಿಗೆ ನೀಡಿ ಎಂದು ಆಶೀರ್ವಾದದ ನುಡಿ ನುಡಿದರು.
ಸ್ವಾತಂತ್ರ್ಯ ಸಿಕ್ಕು   75 ವರ್ಷವಾದರು ಅಭಿವೃದ್ಧಿ ಹೊಂದದೆ ಇನ್ನೂ ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರ ವಾಗಿದೆ ,
ಮೇಲಕ್ಕೆ ಏರಿದವ ಏರುತ್ತಾ, ಕೆಳಕ್ಕೆ ಕುಳಿತವಾ ತುಳಿತಕ್ಕೆ ಒಳಗಾದ , ಜಾತಿ ಜಾತಿ ಎನ್ನುತ್ತಾ ಶಿಕ್ಷಣದ ಜೋತೆ ಎಲ್ಲವೂ ಅದೋಗತಿಗೆ ಬಂದಿದ್ದೇವೆ ನೂರಿತ ಅನುಭವಿ ಶಿಕ್ಷಣ ಹೊಂದಿದ ವ್ಯಕ್ತಿಯನ್ನು ನಾವು ನಮ್ಮ ನಾಯಕನನ್ನಾಗಿ ಯಾವಾಗ  ಆಯ್ಕೆ ಮಾಡಿಕೊಳ್ಳುತ್ತೆವೆಯೋ ಆಗ ಮಾತ್ರ ಅಭಿವೃದ್ಧಿ ಹೊಂದುಲು ಸಾಧ್ಯ .ಶಿಕ್ಷಕನನ್ನು ಪಾಠ ಭೋಧನೆಗೆ ಸೀಮಿತ ಗೊಳಿಸದೆ ಸರಕಾರದ ಎಲ್ಲ ಆಡಳಿತ ಯಂತ್ರಕ್ಕೆ ಬಳಿಸಿಕೊಳ್ಳುತ್ತಿರುವುದರಿಂದ ಸರ್ಕಾರಿ ಶಾಲಾ ಶಿಕ್ಷಣ ಕುಂಠಿತ ಗೊಂಡು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ ಇನ್ನಾದರೂ ಎಲ್ಲರೂ ಎಚ್ಚರಗೊಳ್ಳಿ ನಾನೂ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ದಿನಗಳು ಮರೆಯಲಾರದ ಕ್ಷಣಗಳು ಎಂದು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ    ಕಿರೆಸೂರ ಗುರುಗಳು  ಭಾವುಕರಾಗಿ ತಮ್ಮ ಮನದಾಳದ ಮಾತುಗಳನ್ನು ಆಡಿದರು.ಶಿಕ್ಷಕಿ  ಚಂದ್ರಕಲಾ ಬಡಿಗೇರ  ,
.ಸಮೂಹ ಸಂಪನ್ಮೂಲ ವ್ಯಕ್ತಿ  ಬಿ ಸಿ ಬಾಗೆನ್ನವರ , ಸೇವಾ ನಿವೃತ್ತಿ ಹೊಂದಿದ ಬೀರಕ್ಕನವರ ಗುರುಗಳು  ನಮ್ಮ ಆದರ್ಶ ಶಿಕ್ಷಕರಾಗಿ ಎಲ್ಲರ ಮನದಲ್ಲಿ ಹಸಿರಾಗಿ ಕಂಗೋಳಿಸಿ ಸೇವಾ ನಿವೃತ್ತಿ ಹೊಂದಿದ ಅವರ ಜೀವನ ಸುಖವಾಗಿ ನೂರಾರು ವರ್ಷಗಳ ಕಾಲ ನಮಗೆ ಮಾರ್ಗದರ್ಶನ ನೀಡಲಿ ಎಂದು ಹಾರೈಸಿ ಸತ್ಕರಿಸಿ  ಬಿಳ್ಕೋಟ್ಟರು. ಹಿರಿಯರಾದ ಸಂಗಪ್ಪ ಜಂಬಗಿ,ಶ್ರೀಶೈಲ ಮುಧೋಳ,ಶಿವಜ್ಜ ಜಂಬಗಿ,ಅಲ್ಲಯ್ಯ ಹಿರೇಮಠ,ಶ್ರೀಕೃಷ್ಣ ಕುಲಕರ್ಣಿ,ಹನಸಿ ಗುರುಗಳು, ವಿನೋಬಾ ಜಂಬಗಿ,ಮುತ್ತಪ್ಪ ಹುಕ್ಕೇರಿ,ಮಹಾದೇವ ಮುಧೋಳ,ದಿಲಾವರ ಎಲಿಗಾರ,ನಿಂಗಪ್ಪ ಯರಡೆತ್ತಿ,ಗಟೆಗೆಪ್ಪ ಹುಕ್ಕೇರಿ,ಶಂಕರ ಅಂಗಡಿ,ಶಿವಲಿಂಗ ಜಂಬಗಿ,ಶಿವಲಿಂಗ ಹೊನ್ನಪ್ಪನವರ,ಸದಾಶಿವ ಜಂಬಗಿ,ಶಂಕರ ಹುಕ್ಕೇರಿ,ಆನಂದ ಜಂಬಗಿ ಎಲ್ಲ ಶಾಲಾ ಹಾಗೂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮುಖ್ಯೋಪಾಧ್ಯಾಯರ ,ಶಿಕ್ಷಕರು ಪಾಲಕರು ಪೋಷಕ ಅಭಿಮಾನಿಗಳು ವಿದ್ಯಾರ್ಥಿಗಳು ಇದ್ದರು. 
ಮುಖ್ಯೋಪಾಧ್ಯಾಯ ಬಸವರಾಜ ಯಡವಣ್ಣವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್