Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಕ್ರಮ ಅದಿರು ಸಾಗಾಣೆ ಪತ್ತೆಹಚ್ಚಿದಅಕ್ರಮ ಅದಿರು ಸಾಗಾಣೆ ಪತ್ತೆಹಚ್ಚಿದ ಸಂಸದ ಇ.ತುಕರಾಂ

ಬಳ್ಳಾರಿ, ಏ.23:.. ಈ ಜಿಲ್ಲೆಗೂ ಅಕ್ರಮ ಅದಿರು ಸಾಗಾಣೆಗೂ ಬಿಡಿಸಲಾರದ ಸಂಬಂಧ, ನಂಟು. ಏನೇ ಕ್ರಮಗಳನ್ನು ಕೈಗೊಂಡರೂ ಅಕ್ರಮ ದಂಧೆ ಸ್ವರೂಪ ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಇದೆ ಎಂಬುದನ್ನು ಲೋಕಸಭಸ ಸದಸ್ಯ ಇ.ತುಕರಾಂ ಅವರು ಇಂದು ಪತ್ತೆಹಚ್ಚಿ ಹೊರ ಹಾಕಿದ್ದಾರೆ.
ಸಂಡೂರು ಭಾಗದ ಗಣಿ ಪ್ರದೇಶಗಳಿಂದ ಕಬ್ಬಿಣ ಅದಿರನ್ನು ತುಂಬಿಕೊಂಡು ದಿನನಿತ್ಯ 1500 ಕ್ಕೂ ಹೆಚ್ಚು ಲಾರಿಗಳು ಜಿಂದಾಲ್ ಉಕ್ಕು ಕಾರ್ಖಾನೆ ಮತ್ತು ಇತರೇ ಕಾರ್ಖಾನೆಗಳಿಗೆ ಅದಿರನ್ನು ಸಾಗಿಸುತ್ತವೆ.
ಒಂದು ಲಾರಿಯಲ್ಲಿ ಕನಿಷ್ಟ 18 ರಿಂದ 40 ಟನ್ ವರೆಗೆ ಅದಿರನ್ನು ಸಾಗಾಟ ಮಾಡಲಾಗುತ್ತದೆ.
ಅದಿರು ಉತ್ಪಾದನೆಯ ಪ್ರದೇಶದಲ್ಲಿ ಪರ್ಮಿಟ್ ಜನರೇಟ್ ಮಾಡಿ ಅದರಲ್ಲಿ ಎಷ್ಟು ಅದಿರು ಸಾಗಾಣೆ ಎಲ್ಲಿಗೆ ಮಾಡಲಾಗುತ್ತದೆ ಎಂಬುದನ್ನು ಉಲ್ಲೇಖಿಸಲಾಗಿರುತ್ತದೆ.
ಅದಿರನ್ಬು ಹೊತ್ತು ತರುವ ಲಾರಿ ಪರ್ಮಿಟ್ ನೊಂದಿಗೆ ಬರುತ್ತದೆ. ಲಾರಿ ನಿಗಧಿ ಪ್ರದೇಶಕ್ಕೆ ನಿಗಧಿತ ಅದಿರನ್ನು ಸಾಗಾಟ ಮಾಡುತ್ತಿದೆಯೇ ಎಂವುದನ್ನು ಪತ್ತೆಹಚ್ಚಲು ಬಂಡಿ ಹಟ್ಟಿ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿದೆ. ಗಣಿ ಇಲಾಖೆ.
ಇಲ್ಲಿ ಲಾರಿಯ ತೂಕ, ಎಷ್ಟು ಪ್ರಮಾಣದ ಅದಿರು ಸಾಗಾಟ ಆಗುತ್ತದೆ ಎಂವುದನ್ನು ವೇ ಬ್ರಿಡ್ಜ್ ಮೂಲಕ ಪರಿಶೀಲನೆ ಮಾಡಲಾಗುತ್ತದೆ.
ಆದರೆ ಕಳೆದ ಹಲವು ತಿಂಗಳಿಂದ 4 ಚೆಕ್ ಪೋಸ್ಟ್ ಗಳಲ್ಲಿ ಕೇವಲ ಒಂದು ಮಾತ್ರ ಕೆಲಸ ಮಾಡುತ್ತಿದೆ. ಇನ್ನು ಮೂರು ಕೆಟ್ಟು ನಿಂತಿವೆ. ಆದರೂ ಈ ಕೆಟ್ಟ ಚೆಕ್ ಪೋಸ್ಟ್ ನಲ್ಲಿಯೇ ಲಾರಿ ಸಾಗಿ ಮುದ್ರೆ ಹಾಕಿಸಿಕೊಂಡು ಎಲ್ಲ ಸರಿ ಇದೆ ಎಂಬಂತೆ ಸಾಗಾಟ ಮಾಡಲಾಗುತ್ತಿದೆ.
ಸರಿ ಇರುವ ಚೆಕ್ ಪೋಸ್ಟ್ ನಲ್ಲಿ ಮಾತ್ರ ಸರಿಯಾದ ಪ್ರಮಾಣದ ಅದಿರು ತುಂಬಿರುವ ಲಾರಿಗಳು ಸಾಗುತ್ತವೆ. ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ಅದಿರನ್ನು ತರುವ ಲಾರಿಗಳು ಕೆಟ್ಟಿರುವ ಚೆಕ್ ಪೋಸ್ಟ್ ಗಳಲ್ಲಿ ಸಾಗಿ ಅಕ್ರಮ ವ್ಯವಹಾರ ಮಾಡುತ್ತಿವೆ ಎಂಬುದು ಈಗ ಬಹಿರಂಗ ಗೊಂಡಿದೆ.
ಇಲ್ಲಿ ಇಂದು ಇದನ್ನು ಪತ್ತೆಹಚ್ಚಿದ ಲೋಕಸಭಾ ಸದಸ್ಯ ಇ.ತುಕರಾಂ ಅವರು ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರಶ್ನಿಸಿದರೆ ಕೆಟ್ಟಿರುವ ಬಗ್ಗೆ ಕಳೆದ ಮೂರು ತಿಂಗಳಿಗೂ ಮೊದಲೇ ಮೇಲಾಧಿಕಾರಿಗಳಿಗೆ ತಿಳಿಸಿದೆ. ಆದರೆ ಅವರು ಸರಿ ಮಾಡಿಸಿಲ್ಲ ಎನ್ನುತ್ತಿದ್ದಾರೆ.
ಇದರಲ್ಲಿ ಗಣಿ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಈ ದಂದೆ ನಡೆಸಿದ್ದಾರೆ. ಕೋಟ್ಯಾಂತರ ರೂ ಮೌಲ್ಯದ ಅದಿರನ್ನು ಅಕ್ರಮವಾಗಿ ಸಾಗಾಟ ನಡೆದಿದೆ ಎಂಬುದು ತುಕರಾಂ ಅವರ ಆರೋಪವಾಗಿದೆ.
ಈ ಬಗ್ಗೆ ವಿವರಣೆ ಕೇಳಲು ಕರೆ ಮಾಡಿದರೆ ಗಣಿ ಇಲಾಖೆಯ ಅಧಿಕಾರಿ ದ್ವಿತೀಯ ಅವರು ಸ್ವೀಕರಿಸಲಿಲ್ಲ.
ಒಟ್ಟಾರೆ ಇಲ್ಲಿ ಅಕ್ರಮವಾಗಿ ಅದಿರಿನ ಸಾಗಾಟ ನಡೆದಿರುವುದಂತೂ ಸತ್ಯ ಎನ್ಬುತ್ತಾರೆ ಸಂಡೂರಿನ ಜನತೆ. ಇದರ ಲಾಭ ಪಡೆಯುವವರು ಜಿಂದಾಲ್ ಸಂಸ್ಥೆ. ಇನ್ನು ಎನ್ ಎಂಡಿಸಿ ಅಧಿಕಾರಿಗಳ ಕೈವಾಡವೂ ಇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*