LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಉಗಾರದಲ್ಲಿ ಜನಶಕ್ತಿ ಸೇವಾ ಸಂಘ ಉದ್ಘಾಟನೆ

ಕಾಗವಾಡ: ಜನಶಕ್ತಿ ಸೇವಾ ಸಂಘವು ದೇಶದಲ್ಲಿ ಹಾಗು ರಾಜ್ಯದಲ್ಲಿ ಮಾದರಿ ಸಂಘವಾಗಲ್ಲಿ 
ಎಂದು ಉಗಾರ ಶುಗರ್ಸ ಕಾರ್ಖಾನೆಯ ಜನರಲ್ ಮ್ಯಾನೇಜರ್ ಅನಂತ ಸಿದ್ದಾಂತಿ ಶುಭ ಹಾರೈಸಿದರು.
ಅವರು ಸಮೀಪದ ಉಗಾರಖುರ್ದ ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಜನಶಕ್ತಿ ಸೇವಾ ಸಂಘವನ್ನು ಡಾ.ಬಿ ಆರ್ ಅಂಬೇಡ್ಕರ್ ಹಾಗೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಜನರ ಶಕ್ತಿ ದೇಶದ ಶಕ್ತಿ ಉಗಾರ ಖುರ್ದ ನಗರ ಜನರಿಗೆ ಸುತ್ತಮುತ್ತಲಿನ ನೊಂದ,ನಿರ್ಗತಿಕ ಜನರಿಗೆ ಅನುಕೂಲವಾಗಲಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಈ ಸಂಘ ಸ್ಪಂದಿಸಲಿ ಎಂದರು.
ಅತಿಥಿಗಳಾಗಿ ಅಥಣಿ ನ್ಯಾಯವಾದಿ  
ರಾಘವೇಂದ್ರ ಹಳಿಂಗಳಿ ಮಾತನಾಡುತ್ತ, ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು ಇಲ್ಲಿ ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಕೂಡಿಕೊಂಡು ಸಂಘವನ್ನು ಬೆಳೆಸಬೇಕು ಎಂದ ಅವರು ಘನ ನೇತೃತ್ವ ವಹಿಸಿದ ಕಾಗವಾಡ ಮತಕ್ಷೇತ್ರ ಯುವನಾಯಕ ನ್ಯಾಯವಾದಿ ರಾಹುಲ ಕಟಗೇರಿಯವರು ಚಿಕ್ಕವಯಸ್ಸಿನಲ್ಲೇ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದರು.
ಇ ಸಂದರ್ಭದಲ್ಲಿ ನ್ಯಾಯವಾದಿ ವಿಜಯ ದೇಸಾಯಿ, ಹಿರಿಯರಾದ ವಿರಭದ್ರ ಕಟಗೇರಿ,ವಿನಾಯಕ ಕಾಂಬಳೆ,ರಾಜು ಯಶವಾಡೆ,ದಾವಲಮಲಿಕ ಜಮಖಾನೆ,ಹಾರೂಣ ಮುಲ್ಲಾ,ಶಾನೂರ ಜಮಖಾನೆ ದಿಲಿಪ ಕಾಂಬಳೆ,ಹಾಜಿಸಾಬ ಶೇಖ,ತೋಪೇಲಹ್ಮದ ಮುಜಾವರ, ಮುಬಾರಕ ನದಾಪ, ಕುಮಾರ ಯಾದವ ಜೈನುದಿನ ಇನಾಮದಾರ, ಚಂದ್ರಕಾಂತ ಶೇಟ್ಟಿ, ರಾಮಾ ಕಾಂಬಳೆ ಹಾಗೂ ಪಟ್ಟಣದ ನಾಗರಿಕರು ಸೇರಿದಂತೆ ಇತರರು ಇದ್ದರು. 
ನ್ಯಾಯವಾದಿ ರಾಹುಲ ಕಟಗೇರಿ ನಿರೂಪಿಸಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್