ಯರಗಟ್ಟಿ,ಜು,೨೭: ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಇವರ ಆಶ್ರಯದಲ್ಲಿ ಸರಕಾರಿ ಕನ್ನಡ ಶಾಲಾ ಆವರಣದಲ್ಲಿ ೨೭ನೇ ಕಾರ್ಗಿಲ್ ವಿಜಯೋತ್ಸವನ್ನು ಸಸಿಗೆ ನೀರು ಹಾಕುವ ಮೂಲಕ ಪಿಎಸ್‌ಐ ಎಲ್ ಬಿ ಮಾಳಿ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಉಪನ್ಯಾಸ ನೀಡಿದ ಯರಗಟ್ಟಿ ಬಾಲಕಿಯರ ನಿಲಯಪಾಲಕರಾದ ಆಶಾ ಪರೀಟ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ ೨೬ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.
ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ.
ಈ ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ ೧೯೯೯ ಮೇ ೩ರಂದು ಆರಂಭವಾಗಿ ಜುಲೈ ೨೬ರಂದು ಅಧಿಕೃತವಾಗಿ ಭಾರತದ ವಿಜಯದೊಂದಿಗೆ ಮುಕ್ತಾಯಗೊಂಡಿತ್ತು ಪಾಕ್‌ನ ಕುತಂತ್ರಕ್ಕೆ ಭಾರತದ ’ಕಾರ್ಗಿಲ್ ಯುದ್ಧ ಮೂಲಕ ಉತ್ತರ ನೀಡಿದೆ ಎಂದರು.
ಈ ಕಾರ್ಗಿಲ್ ಯುದ್ಧದ ಕುರುಹಾಗಿ ಕಾರ್ಗಿಲ್ ಯುದ್ಧ ಸ್ಮಾರಕ ಅಥವಾ ದ್ರಾಸ್ ಯುದ್ಧ ಸ್ಮಾರಕವನ್ನು ಭಾರತೀಯ ಸೇನೆ ಲಡಾಕ್ ಪ್ರಾಂತ್ಯದ ಕಾರ್ಗಿಲ್ ಜಿಲ್ಲೆಯ ಕಾರ್ಗಿಲ್ ನಗರದ ಹತ್ತಿರದ ದ್ರಾಸ್ ಎಂಬ ಪಟ್ಟಣದಲ್ಲಿ ನಿರ್ಮಿಸಿ.
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಿಂದ ೫ ಕಿಲೋ ಮೀಟರ್ ದೂರದಲ್ಲಿರುವ ದ್ರಾಸ್ ಪಟ್ಟಣದಲ್ಲಿ ಟೈಗರ್ ಹಿಲ್ ಸಮೀಪ ಈ ಸ್ಮಾರಕ ಇದೆ. ಪ್ರತಿ ದಿನ ಸಾವಿರಾರು ಮಂದಿ ಈ ಸ್ಮಾರಕಕ್ಕೆ ಭೇಟಿ ನೀಡಿ ವೀರ ಜವಾನರ ಪ್ರಾಣತ್ಯಾಗದ ಸ್ಮಾರಕವನ್ನು ನೋಡಿ ದೇಶಕ್ಕಾಗಿ ಸಮರ್ಪಿಸಿಕೊಳ್ಳಲು ಪ್ರತಿಜ್ಞೆ ಮಾಡುತ್ತಾರೆ ಮತ್ತು ದೇಶಭಕ್ತಿಯನ್ನು ಆವಾಹನೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಈ ವೇಳೆ ಸತ್ತಿಗೇರಿ ಮಳಿಮಲ್ಲೇಶ್ವರ ಶ್ರೀಮಠದ ಚಂದ್ರಶೇಖರ ಸ್ವಾಮೀಜಿ, ಕೋರಕೊಪ್ಪ ರೇವಣಸಿದ್ದೇಶ್ವರ ಆಶ್ರಮದ ರೇವಣಸಿದ್ದೇಶ್ವರ ಸ್ವಾಮೀಜಿ, ಜೈ ಜವಾನ ಸೈ ಕೀಸಾನ ಸಂಘದ ಅಧ್ಯಕ್ಷ ಕುಮಾರ ಹಿರೇಮಠ, ಪಿಎಸ್‌ಐ ಎಲ್. ಬಿ. ಮಾಳಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ ಹುಡೇ, ನಿವೃತ್ತ ಶಿಕ್ಷಕ ಎಮ. ಬಿ. ಂಲಕಂಡಿ, ಪ್ರಧಾನ ಗುರುಗಳಾದ ಎಸ್. ಎಫ್. ನರಗುಂದ, ಮಾಜಿ ಸೈನಿಕರಾದ ಬಸವರಾಜ ಹರಳಿ, ಸುರೇಶ ಬಾಳಿಕಾಯಿ, ನಾಗಪ್ಪ ಮೆಟಗುಡ್ಡ, ಎಂ. ಜಿ. ಬಬಲಾದಿಮಠ, ಸಿದ್ದಪ್ಪ ದೇವರಡ್ಡಿ, ಹೊನ್ನಪ್ಪ ಖಂಡ್ರಿ, ಮಹಾದೇವ ಯಡ್ರಾಂವಿ, ರವಿ ಸೊಲಬನ್ನವರ, ಯಲ್ಲಪ್ಪ ಬಡೆನ್ನವರ, ಪುಂಡಲೀಕ ತಳವಾರ, ರಾಜೇಶ ಕೊಂಜಾರ, ಮಹಾಂತೇಶ ಮಾದರ, ಸುಬಾಷ ದೇವರಡ್ಡಿ, ಈರಣ್ಣಾ ಹುರಕಡ್ಲಿ, ಬಸವರಾಜ ಮಲ್ಲಾಪೂರ, ಸುರೇಶ ಗೌಡರ ಸೇರಿದಂತೆ ಅನೇಕ ಮಾಜಿ ಸೈನಿಕರು ಹಾಗೂ ಗ್ರಾಮಸ್ಥರು ಇದ್ದರು.