Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿವಯೋಗದಿಂದ ಅಂತರಂಗ ಶುದ್ಧಿ: ಡಾ. ರಾಜಶೇಖರ

 
ಬೆಳಗಾವಿ: ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಕರುಣಿಸಿದ ಇಷ್ಟಲಿಂಗ ಪೂಜೆ ಶಿವಯೋಗದಿಂದ ಅಂತರಂಗ ಶುದ್ಧಿಯಾಗುತ್ತದೆ. ಇಷ್ಟಲಿಂಗ ಪೂಜಾ ವಿಧಿ-ವಿಧಾನವನ್ನು ವೈಜ್ಞಾನಿಕವಾಗಿ ವೈಚಾರಿಕವಾಗಿ ನಿರೂಜಿಸಲಾಗಿದೆ. ಇದನ್ನು ಪ್ರತಿಯೊಂದು ಮನೆಯ ಹಿರಿಯರು ತಮ್ಮ ಕಿರಿಯರಿಗೆ ಇದರ ವಿಶೇಷತೆಯನ್ನು ಕಲಿಸಬೇಕೆಂದು ಜೆಎನ್ ಎಮ್ ಸಿ ನಿವೃತ್ತ ಪ್ರಾಚಾರ್ಯ ಡಾ.ಎಚ್ ಬಿ. ರಾಜಶೇಖರ ಕರೆ ಕೊಟ್ಟರು.
ನಗರದ ಶ್ರೀ ಕಾರಂಜಿಮಠದ 299ನೇಯ ಮಾಸಿಕ ಶಿವಾನುಭದ ಕಾರ್ಯಕ್ರಮದ ನಿಮಿತ್ತವಾಗಿ ಸೋಮವಾರ ನಡೆದ "ವಿಶ್ವಗುರು ಬಸವಣ್ಣನವರ ಜಂಯತಿ" ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶೀಮಠದ ಪೀಠಾಧಿಗಳಾದ ಪೂಜ್ಯಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಮಾರಂಭದಲ್ಲಿ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ಜೆಎನ್‌ಎಮ್‌ಸಿ ಪ್ರಾಧ್ಯಾಪಕರು, ಸಾಹಿತಿ ಡಾ. ಅವಿನಾಶ ಕವಿ ಅವರು, " ವಿಶ್ವಗುರು ಬಸವಣ್ಣನವರ ಬಹುಮುಖ ವ್ಯಕ್ತಿತ್ವ" ಕುರಿತು ಚಿಂತನ ಪರ ಉಪನ್ಯಾಸ ನೀಡಿದರು.
ಡಾ.ಎಪ್ ವಿ. ಮಾನ್ಸಿ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ರತ್ನಪ್ರಭಾ ಬೆಲ್ಲದ, ಬೆಳಗಾವಿ ಶ್ರೀ ಬಸವೇಶ್ವರ ಕೋ-ಅಪರೇಟಿವ ಬ್ಯಾಂಕಿನ ನಿರ್ದೇಶಕರಾದ ಸರಳಾ ಹೀರೇಕರ, ಪ್ರಾಚಾರ್ಯ ವಿ.ಬಿ. ದೊಡಮನಿ, ಪ್ರೊ. ಎ.ಕೆ ಪಾಟೀಲ್, ಸ್ವಾಗತಿಸಿ, ನಿರೂಪಿಸಿದರು. ಶರಣ ರಾಜು ಪಡಗುರಿ ಗ್ರಂಥ ಪುಷ್ಪ ಸಮರ್ಪಿಸಿದರು. ಶ್ರೀ ಕುಮಾರೇಶ್ವರ ಸಂಗೀತ ಪಾಠ ಶಾಲೆಯ ಮಕ್ಕಳಿಂದ ವಚನ ಪ್ರಾರ್ಥಿಸಿದರು. ವಕೀಲರಾದ ವಿ. ಕೆ. ಪಾಟೀಲ ಶರಣು ಸಮರ್ಪಣೆ ಮಾಡಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*