LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವೀರ ಸೈನಿಕರನ್ನು ನಿತ್ಯವೂ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ಶ್ರೀ ಗುರುಸಿದ್ಧ ಮಹಾಸ್ವಾಮೀಜಿ





ಬೆಳಗಾವಿ:  ದೇಶದ ರಕ್ಷಣೆಗಾಗಿ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಮುಡಿಪಾಗಿಟ್ಟು, ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳುವ ಯೋಧರಿಗೆ  ಊರಿನಲ್ಲಿ ಗೌರವಯುತ ಹಾಗೂ ಅದ್ದೂರಿಯಾದ 'ಸನ್ಮಾನ ಸಮಾರಂಭ'ವನ್ನು ಆಯೋಜಿಸುವುದು ನಮ್ಮ ಸಂಪ್ರದಾಯ ಮತ್ತು ಹೆಮ್ಮೆಯ ಸಂಕೇತವಾಗಿದೆ ಎಂದು ಕಾರಂಜಿಮಠದ  ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು.

ನಗರದ ರಾಮತೀರ್ಥ ನಗರದ ಸಮುದಾಯ ಭವನದಲ್ಲಿ  ಸುರೇಶ ಯಾದವ ಫೌಂಡೇಶನ ಹಾಗೂ ರಾಮತೀರ್ಥ ನಗರ ರಹವಾಸಿಗ ಸಹಯೋಗದೊಂದಿಗೆ ಭಾನುವಾರ ಆಯೋಜಿಸಲಾದ , 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ  ಸ್ವ-ಗ್ರಾಮಕ್ಕೆ ಆಗಮಿಸಿದ ವೀರಯೋಧರಾದ ಹವಾಲ್ದಾರ್  ಬಸವರಾಜ ಶಿವಗುಂಡಪ್ಪಾ ಕುಂದರಗಿ  ಅವರ ಸ್ವಾಗತ ಹಾಗೂ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಾ, ದೇಶದ ಕೋಟ್ಯಂತರ ನಾಗರಿಕರ ನೆಮ್ಮದಿಯ ಬದುಕಿಗೆ ಕಾರಣರಾಗಿರುವ ಸೈನಿಕರನ್ನು ಕೇವಲ ವಿಶೇಷ ದಿನಗಳಿಗಷ್ಟೇ ಸೀಮಿತಗೊಳಿಸದೆ, ದೈನಂದಿನ ಜೀವನದಲ್ಲಿಯೂ ನಿರಂತರವಾಗಿ ಗೌರವಿಸಬೇಕು. ಸೈನಿಕರು ಮತ್ತು ಅವರ ಕುಟುಂಬದ ತ್ಯಾಗಕ್ಕೆ ಪ್ರತಿಯೊಬ್ಬ ಭಾರತೀಯನೂ ದೈನಂದಿನ ಬದುಕಿನಲ್ಲಿ ಕೃತಜ್ಞತೆ ಸಲ್ಲಿಸುವ ಮೂಲಕ ನೈಜ ದೇಶಭಕ್ತಿ ಮೆರೆಯಬೇಕಾದ ಅಗತ್ಯವಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಸುರೇಶ ಯಾದವ  ಅವರು ಮಾತನಾಡಿ, ದೇಶದ ಪ್ರಗತಿಯಲ್ಲಿ ಸೈನಿಕರ ಕೊಡುಗೆ ಅಪಾರ ಮತ್ತು ಅತ್ಯಮೂಲ್ಯ. ಗಡಿ ಕಾಯುವ ಮೂಲಕ ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವ ಯೋಧರು, ದೇಶದ ಅಭಿವೃದ್ಧಿಗೆ ಬಲವಾದ ಅಡಿಪಾಯವಾಗಿದೆ. ಅವರ ಶಕ್ತಿ, ಭದ್ರತೆಯಿಂದ ನಾಡಿನಲ್ಲಿ ನಾವೆಲ್ಲರೂ ಸುಕ್ಷತೆಯಿಂದ ಜೀವನ ಸಾಗುತ್ತಿದ್ದಾರೆ. ಸುಧೀರ್ಘ ಸೇವೆ ತಾಯ್ನಾಡಿಗೆ ಆಗಮಿಸಿದ ಈ ನೆಲದ ಹೆಮ್ಮೆಯ ವೀರಪುತ್ರ ಬಸವರಾಜ  ಕುಂದರಗಿ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ವೀರಯೋಧರಾದ ಹವಾಲ್ದಾರ್  ಬಸವರಾಜ ಶಿವಗುಂಡಪ್ಪಾ ಕುಂದರಗಿ    ಮಾತನಾಡಿ, "ದೇಶದ ಗಡಿಕಾಯುವ ಸೌಭಾಗ್ಯ ಸಿಕ್ಕಿದ್ದು ನನ್ನ ಜೀವನದ ಹೆಮ್ಮೆ. ಇಂದು ಸ್ವಂತ ಊರಿನ ಜನತೆ ತೋರಿರುವ ಪ್ರೀತಿ ಮತ್ತು ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಯುವ ಪೀಳಿಗೆ ದೇಶ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು" ಎಂದು ಕರೆ ನೀಡಿದರು.

ಗಮನ ಸೆಳೆದ ಮೆರವಣಿಗೆ:   24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ನಾಡಿನ ಕೀರ್ತಿ ಬೆಳಗಿಸಿ ಮರಳಿ ಸ್ವ-ಗ್ರಾಮಕ್ಕೆ ಆಗಮಿಸಿದ ಜಿಲ್ಲೆಯ ಹೆಮ್ಮೆಯ ಪುತ್ರ ವೀರಯೋಧರಾದ ಹವಾಲ್ದಾರ್  ಬಸವರಾಜ ಶಿವಗುಂಡಪ್ಪಾ ಕುಂದರಗಿ ಇವರನ್ನು  ಭವ್ಯ ಮೆರವಣಿಗೆಯೊಂದಿಗೆ ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಅತ್ಯಂತ ಸಡಗರದಿಂದ ಸ್ವಾಗತಿಸಲಾಯಿತು.  
ನಂತರ ತೆರೆದ ವಾಹನದಲ್ಲಿ ಯೋಧರನ್ನು ಕೂರಿಸಿ, ಮೈಸೂರು ಪೇಟ ತೊಡಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಯುವಕರು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುತ್ತಾ, "ಭಾರತ್ ಮಾತಾ ಕೀ ಜೈ" ಮತ್ತು "ವೀರ ಯೋಧನಿಗೆ ಜಯವಾಗಲಿ" ಎಂಬ ಘೋಷಣೆಗಳನ್ನು ಕೂಗಿ ಸೈನಿಕನಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಕ್ತಾರ್ ಪಠಾಣ್, ಮುಖ್ಯ ಅತಿಥಿ ಮುರಘೇಂದ್ರಗೌಡ ಪಾಟೀಲ್‌ ವಹಿಸಿದರು, ತುಕಾರಾಂ ಹಾಜರತಿ,  ಕೆಂಪಣ್ಣ ಜಿನ್ರಾಳ, ಬಳಪ್ಪಾ ಹಣಜಿ ,  ರಾಜಶೇಖರ್ ಶಿಂಧೆ , ನಿತಿನ್ ಪಾಟೀಲ್ , ಸಚಿನ್ ಪಾಟೀಲ್, ಅಪಾಯ ಕೊಲ್ಕರ್,  ಮಲ್ಲಿಕಾರ್ಜುನ ಹಿತ್ತಲಮನಿ, ಬಿ.ಎಸ್‌ ಮುರಗೋಡ , ಆನಂದ ಪಾಟೀಲ್‌ ,  ಈರಯ್ಯಾ ಖೋತ, ಗುರುಪುತ್ರಪ್ಪಾ ತೋರಗಲ, ಹಾಗೂ  ಗಣೇಶ ಉತ್ಸವ  ಮಂಡಳಿಯ ಸದಸ್ಯರು,  ಸುರೇಶ ಯಾದವ ಫೌಂಡೇಶನ ಸರ್ವ ಸದ್ಯರು, ರಾಮತೀರ್ಥ ನಗರ ರಹವಾಸಿಗಳು ಹಾಗೂ ಇತರರು ಇದ್ದರು. ಸಿ.ಎಸ್‌ ಬಿಡ್ನಾಳ  ನಿರೂಪಿಸಿ, ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್