LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶರಣ ಸಂಸ್ಕೃತಿಯಿಂದ ಮಾತ್ರ ಜಗದೋದ್ಧಾರ : ಪ್ರೊ.ಎಸ್.ಎಂ. ಶೇಖ ಅಭಿಮತ


  ವಿಜಯಪುರ:-ತಮ್ಮನ್ನು ತಾವು ವಿಮರ್ಶೆಗೆ ಒಳಪಡಿಸಿಕೊಳ್ಳುವ ಆತ್ಮ ಪ್ರಜ್ಞೆಗೆ ಬಸವ ಪ್ರಜ್ಞೆ ಎನ್ನುವರು.ಇದು ವಚನ ಸಾಹಿತ್ಯದಲ್ಲಿ ಅಮೂಲ್ಯ ನಿಧಿಯಾಗಿ ಹರಡಿಕೊಂಡಿದೆ.ಈ ಸಂಪತ್ತಿನಿಂದ ಮನುಷ್ಯ ತನ್ನ ಬದುಕನ್ನು ಶ್ರೀಮಂತ ಗೊಳಿಸಿ- ಕೊಂಡು ಪುನೀತನಾಗಬೇಕೆಂದು ಪ್ರೊ.ಎಸ್ ಎಂ ಶೇಖ ಹೇಳಿದರು.
         ಅವರು ಜಿಲ್ಲಾ  ವೀರಶೈವ ಲಿಂಗಾಯತ ಮಹಾಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಲಿಂ. ಅಮರಪ್ಪ ಕುರುಬರ ಅವರ ದತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಅವರು ಬಸವಾದಿ ಶರಣರ ವಚನಗಳಲ್ಲಿ ವಚನಗಳ ಪ್ರಸ್ತುತತೆ ಎಂಬ ವಿಷಯ ಕುರಿತು ವಿದ್ವತ್ಪೂರ್ಣವಾಗಿ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ವಿ. ಸಿ. ನಾಗಠಾಣ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳನ್ನು ಸಚ್ಚಾರಿತ್ರ್ಯವಂತರನ್ನಾಗಿ ಮಾಡುವಲ್ಲಿ ತಾಯಿತಂದೆಯರ ಪಾತ್ರ ಹೆಚ್ಚಿರುತ್ತದೆ ಎಂದು ಹೇಳಿದರು.
  ಡಾ. ವಿ. ಡಿ. ಐಹೊಳ್ಳಿಯವರು ಸ್ವಾಗತಿಸಿದರು. ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾಸೋಹಿಗಳಾದ ನಾರಾಯಣಪ್ಪ ಕುರುಬರ ಅವರು ಮಾತನಾಡಿ ಹೆತ್ತವರ ಸ್ಮರಣೆಯನ್ನು ಮಾಡಲು ಅವಕಾಶ ನೀಡಿದ ಶರಣಸಾಹಿತ್ಯ ಪರಿಷತ್ತಿಗೆ ಕೃತಜ್ಞತೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಮ. ಗು. ಯಾದವಾಡ ವಂದಿಸಿದರು. ಸಭೆಯಲ್ಲಿ ಬಿ. ಎಂ. ಪಾಟೀಲ್, ಬಿ. ಟಿ. ಈಶ್ವರಗೊಂಡ ,ಜಗದೀಶ್ ಪಟ್ಟಣಶೆಟ್ಟಿ, ಎಸ್. ವೈ. ಗದಗ ಬಸವರಾಜ ಪಟ್ಟಣಶೆಟ್ಟಿ, ದೇವೇಂದ್ರ ಡಂಬಳ,ಎಸ್ ಬಿ ದೊಡಮನಿ , ಲಕ್ಷ್ಮಿ ಕುರುಬರ, ಶಕುಂತಲಾ ಮೋಸಲಗಿ,ಕಮಲಾ ಮುರಾಳ,ಎಲ್.ಪಿ.ಬಿರಾದಾರ, ಮಾಧವ ಗುಡಿ,ಅಶೋಕ ಹಂಚಲಿ,ಶ್ರೀಮತಿ ಚೋಳಕೆ,ಬಿ.ಸಿ.ಸಾರವಾಡ,ಬಸವರಾಜ ಗೋಟ್ಯಾಳ,ಆರ್,ಎಸ್, ಬಿರಾದಾರ ಶಿವಪ್ಪ ಶಿವಣಗಿ ಸುಭಾಸ ಬೆಟಗೇರಿ ಹಾಗೂ ಯರಗಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು.
          

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್