LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

"ಸತ್ಯ ಸಂಶೋಧನೆಯ ಭಾಗವೇ ಪತ್ರಕರ್ತ : ಡಾ||ಆನಂದ ಮಹಾರಾಜ ಗೋಸಾವಿ,


ಉಳ್ಳಾಗಡ್ಡಿ-ಖಾನಾಪೂರ:-ಸಮಾಜದಲ್ಲಿನ ಸತ್ಯ ಸಂಶೋಧನೆಯ ಭಾಗವೇ ಪತ್ರಕರ್ತ ಆ ನಿಟ್ಟಿನಲ್ಲಿ ಮುದ್ರಣ ಮಾಧ್ಯಮ ಇಂದಿಗೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿ ಬಂದಿದೆ ಎಂದು ಹತ್ತರಗಿಯ ಹರಿ ಮಂದಿರದ ಡಾ||ಆನಂದ ಮಹಾರಾಜ ಗೋಸಾವಿ ಹೇಳಿದರು,
ಅವರು ಸಮೀಪದ ನಾಗನೂರ ಕೆ,ಡಿ,ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ದಿ, ೧ ರಂದು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ದೇಶದಲ್ಲಿ ವಿವಿಧಡೆ ಬೇರೆ ಬೇರೆ ದಿನಗಳಲ್ಲಿ ಪತ್ರಿಕಾ ದಿನಾಚರಣೆ ಆಚರಿಸುವ ವಾಡಿಕೆ ಇದೆ ಕರ್ನಾಟಕದಲ್ಲಿ ಮಂಗಳೂರ ಸಮಾಚಾರ ಪತ್ರಿಕೆ ಜುಲೈ-೧ ರಂದು ಮುದ್ರಣ ಪ್ರಾರಂಭಿಸಿದ್ದರಿಂದ ಜುಲೈ ೧ ರಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದೆ ಪತ್ರಕರ್ತರಾದವರು ಸಮಾಜದಲ್ಲಿನ ಸತ್ಯ ಸುದ್ದಿಗಳನ್ನು ಸಮಾಜದ ಸಮತೋಲನ ಕಾಪಾಡುವ ಸುದ್ದಿಗಳನ್ನು ಸಮಾಜದಲ್ಲಿನ ಸಮತೋಲನವನ್ನು ಹಾಳುಗೆಡಹುವ ಸುದ್ದಿಗಳತ್ತ ಸಮತೋಲನದಿಂದ ಪ್ರಕಟಿಸುವಂತೆ ಕರೆಯಿತ್ತ ಅವರು ಇಂದು ವಾಟ್ಸಫ್, ಇನ್ಸ್ಟಾಗ್ರಾಮ ಫೆಸ್ ಬುಕ್ ಸುದ್ದಿಗಳು  ಪ್ರಚಲಿತದಲ್ಲಿದ್ದರೂ ಕೂಡಾ ಮುದ್ರಣ ಮಧ್ಯಮಕ್ಕೆ ತನ್ನದೆ ಆದ ಗತ್ತು ಇಂದಿಗೂ ಇದೆ ಎಂದರು,
 ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಹತ್ತರಗಿ ಕಾರಿ ಮಠದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ಪತ್ರಕಾ ರಂಗ "ಸಮಾಜದ ಕಣ್ಣು" ಪತ್ರಿಕೆಗಳು ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಪ್ರಸಂಶನೀಯ ಆದ್ದರಿಂದ ಪತ್ರಕರ್ತರು ದೂರ ದೃಷ್ಟಿಯನ್ನಿಟ್ಟುಕೊಂಡು ಪರಿಸರ ಕಳಜಿ ಪ್ರತಿಭಾ ವಿದ್ಯಾರ್ಥಿಗಳಿಗೆ ಬಹುಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಸಮಾಜದಲ್ಲಿನ ಮಹತ್ವದ ಅಂಗವಾಗಿ ಹೊರ ಹೊಮ್ಮುತ್ತಿದ್ದಾರೆ ಎಂದರು,
 ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಹುಲ್ ಜಾರಕಿಹೊಳಿ ಮಾತನಾಡಿ ಪತ್ರಿಕಾ ದಿನಾಚರಣೆ ಮತ್ತು ಪರಿಸರ ದಿನಾಚರಣೆ ಎರಡು ಅರ್ಥಪೂರ್ಣ ಮತ್ತು ಸಮಾಜಕ್ಕೆ ಅಮೂಲ್ಯವಾದವು  ಸಮಾಜಕ್ಕೆ ಅಗತ್ಯವಿರುವ ಸುದ್ದಿ ಬಿತ್ತರಣೆಯ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಯಮಕನಮರಡಿ ಕ್ಷೇತ್ರದಲ್ಲಿನ ಪತ್ರಕರ್ತರು ಸದಾ ಬದ್ದತೆಯಿಂದ ನಡೆಯುತ್ತಿದ್ದು ಕ್ಷೇತ್ರದ ಹಾಗೂ ಪತ್ರಕರ್ತರ ಅಭಿವೃದ್ದಿಗೆ ತಂದೆ ಸತೀಶ ಜಾರಕಿಹೊಳಿಯವರು ನಾವು ಬದ್ದರಾಗಿದ್ದೆವೆ ಎಂದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಗೋಪಾಲ ಚಿಪಣೆ ವಹಿಸಿದ್ದರು, ವೇದಿಕೆಯಲ್ಲಿ ಯುವ ಮುಖಂಡರಾದ ಕಿರಣಸಿಂಗ್ ರಜಪೂತ ಕಾಂಗ್ರೇಸ್ ಮುಖಂಡರಾದ ರವಿಂದ್ರ ಜಿಂಡ್ರಾಳಿ ಮಹಾದೇವ ಪಟೋಳಿ ದಡ್ಡಿಯ ಮುಖಂಡರಾದ ದಯಾನಂದ ಪಾಟೀಲ ಸಾಮಾಜಿಕ ಅರಣ್ಯ ಇಲಾಖೆಯ ಎಚ್ ಎಸ್ ಇಂಗಳಗಿ ಶಾಲಾ ಮೇಲುಸ್ತುವಾರಿ ಸಮಿತಿಯ ಬಸವರಾಜ ದೇಸಾಯಿ ವೀರುಪಾಕ್ಷಿ ಚೌಗಲಾ ಪಿಡಿಓ ಶಿವಾನಂದ ವಾಸನ್ನವರ ಮುಖ್ಯೋಪಾಧ್ಯಾಯರಾದ ಶ್ರೀಮತಿ ತನುಜಾ ಗುಡಸಿ ಅಶೋಕ ತಳವಾರ ಜೋಮಲಿಂಗ ಪಟೋಳಿ ಶ್ರೀಮತಿ ಗೋದವ್ವಾ ಅಗಸರ ಮಹಾದೇವ ಮುರಗಾಲಿ ಪರಶುರಾಮ ಸನದಿ ಬೈರಪ್ಪಾ ಅಗಸರ ರವಿ ಘಸ್ತಿ ಮಾರುತಿ ಅಗಸರ ಮುದ್ದು ಬಾನಿ ಪರ್ತಕರ್ತರಾದ ಎ ಎಮ್ ಕರ್ನಾಚಿ ಬಿ ಬಿ ಕೋತೇಕರ ಕಲ್ಲಪ್ಪಾ ಪಾಮನಾಯಿಕ ಪ್ರಭು ಖೋತ ಸುನೀಲ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು,
ಸತ್ಕಾರ:-ವೇದಿಕೆಯಲ್ಲಿದ್ದ ಸರ್ವರನ್ನು ಪತ್ರತರ್ಕರು ಸತ್ಕರಿಸಿದರು ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಇದೆ ಸಂದರ್ಭದಲ್ಲಿ ಸತ್ಕರಿಸಿದರು, 
ಪರಿಸರ ದಿನಾಚರಣೆ:-ಪ್ರಥಮದಲ್ಲಿ ಪತ್ರಕರ್ತರ ಸಂಘ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಉಭಯ ಶ್ರೀಗಳು ಹಾಗೂ ರಾಹುಲ್ ಜಾರಕಿಹೊಳಿ ಸಸಿ ನೀರು ಹಾಕಿ ಚಾಲನೆ ನೀಡಿದರು, ಕಾರ್ಯಕ್ರಮಕ್ಕೆ ಸಂಜೀವ ಮುಷ್ಟಗಿ ಸ್ವಾಗತಿಸಿ ಎಸ್ ಬಿ ಮಠಪತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು,

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್