LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಜೂ. ೨೪ ರಂದು ಮೊಹರಮ್ ಹಬ್ಬದ ಪ್ರಸಿದ್ದ ಆಟವಿ ಖತಾಲ ಆಚರಣೆ

ಇಂಡಿ : ಮೊಹರಂ ಇಂಡಿಯಲ್ಲಿ ಹಿಂದು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ಮಂಗಳವಾರ ೭ ನೇ ದಿನ ನಗರದ ಪ್ರಮುಖ ಬೀದಿಗಳಲ್ಲಿ ಝುಲ್ ಫಕೀರ ಮೆರವಣೆಗೆ ನಡೆಯಿತು. ಬುಧವಾರ ಜೂ. ೨೪ ರಂದು ಮೊಹರಮ್ ಹಬ್ಬದ ಪ್ರಸಿದ್ದ ಆಟವಿ ಖತಾಲ ಆಚರಿಸಲಾಗುತ್ತದೆ.
 ವಿಜಯಪುರ, ಗುಲಬರ್ಗಾ, ಬಾಗಲಕೋಟ ಸೇರಿದಂತೆ ಮುಂಬಯಿ,ಪೂನಾ ಸೋಲಾಪುರ, ಆಂಧ್ರದಿಂದಲೂ ಭಕ್ತರು ಬಂರುವ ರೂಢಿ. ಖತಾಲ ದಿವಸ ಅಂದಾಜು ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ.
ಗುರುವಾರ ನಸುಕಿನ ಜಾವ ನಗರದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣೆಗೆ ನಡೆಯುತ್ತದೆ. ಇಂಡಿಯ ದಾದಾಗೌಡರ ಮನೆತನದವರು ಬಂದು ಪೂಜೆ ಸಲ್ಲಿಸಿದ ನಂತರ ದೇವರ ಮೆರವಣೆಗೆ ಪ್ರಾರಂಭವಾಗುತ್ತದೆ. ಕರಬಲ್ ಕುಣಿತ, ಭಡಂಗ ಬಾವಾ, ಹುಲಿ ವೇಷ, ಅಲಾಯಿ ಕುಣಿತ ಕುದುರೆ ಕುಣಿತ ಸೇರಿ ನೂರಾರು ದಿವಟಗೆ ನಗಾರಿಯೊಂದಿಗೆ ಭವ್ಯ ಮೆರವಣೆಗೆ ನಡೆಯುತ್ತದೆ.
ಗುರುವಾರ ದೇವರ ಮೆರವಣೆಗೆ ಅಗಸಿ ಅಥವಾ ಮಹಾವೀರ ವೃತ್ತಕ್ಕೆ ಬಂದ ನಂತರ ಅಲ್ಲಿ ಮೂರು ಜೇನು ಹುಳುಗಳು ಬಂದು ದೇವರಿಗೆ ಸ್ಪರ್ಶ ಮಾಡುತ್ತವೆ. ತದನಂತರವೇ ದೇವರು ತಿರುಗಿ ಗ್ರಾಮದಲ್ಲಿ ಪ್ರವೇಶ ಮಾಡುವದು ವಿಶೇಷ. 
ಹಿನ್ನೆಲೆ ? ಮೊಹರಮ್ ತ್ಯಾಗ ಬಲಿದಾನದ ಸಂಕೇತ, ಪ್ರವಾದಿ ಮಹಮ್ಮದ ಅವರ ಮೊಮ್ಮಗ ಇಮಾಮ ಹುಸೇನ ಅವರಿಗೆ ರಾಜನನ್ನಾಗಿ ಮಾಡಬೇಕಾಗುತ್ತದೆ.  ಯಜೀದ ಮೊಸದಿಂದ ರಾಜನಾಗುತ್ತಾನೆ. ಮತ್ತು ಓಬಯದುಲ್ಲಾ ಬಿನ್ ಜಿಯಾದ ಇವರಿಗೆ ಮಂತ್ರಿ ಮಾಡುತ್ತಾನೆ. ಓಬೆಯದುಲ್ಲಾ ಇಮಾಮರಿಗೆ ಕರಬಲಾ ಮೈದಾನದಲ್ಲಿ ಯುದ್ದಕ್ಕೆ ಕರೆಯುತ್ತಾರೆ. 
ಇಮಾಮ ಹತ್ತಿರ ಕೇವಲ ೨೦೦ ಸೈನಿಕರಿರುತ್ತಾರೆ. ಓಬೆದುಲ್ಲಾ ಇಪ್ಪತ್ತು ಸಾವಿರ ಸೈನಿಕ ಬಂದು ಕರಬಲಾ ಮೈದಾನದಲ್ಲಿ ಯುದ್ದ ನಡೆದು ಇಮಾಮ ಹುತಾತ್ಮರಾಗುತ್ತಾರೆ.
ಇಮಾಮ ಶೂರರಿರುತ್ತಾರೆ. ಅವರನ್ನು ಮೋಸಮಾಡಿ ಕೊಂದಿದ್ದಾರೆ ಎಂದು ಎಲ್ಲರೂ ಸಂತೋಷದಿಂದ ಅವರ ಅಂತಿಮ ಮೆರವಣೆಗೆ ಮಾಡುತ್ತಾರೆ. ಅದರ ಅಣುಕು ಪ್ರದರ್ಶನವೇ ಇಂಡಿಯ ಮೊಹರಮ್. ಇಮಾಮ ಶಾಂತಿ ಶೂರ ಧೀರದ ಪ್ರತೀಕ ಎಂದು ಅವರ ಹೆಸರಿನಲ್ಲಿ ಇಂಡಿಯಲ್ಲಿ ಮಕ್ಕಾದಿಂದ ಬಂದ ಪಂಜೆಗಳ  ಮೆರವಣೆಗೆ ನಡೆಯುತ್ತದೆ.     

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್