LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕರೆಡೀಶರ ಸಮಾಜಸೇವೆ ಅನನ್ಯ: ಅಮಾತಿ ಬಸವರಾಜ್

ಬಳ್ಳಾರಿ, ಜೂ.17:  ಕಳೆದ ಎರೆಡು ದಿನಗಳಿಂದ ಇಲ್ಲಿನ  ಬಸವಭವನದಲ್ಲಿ ನಡೆಯುತ್ತಿರುವ ಗದ್ದಿಕೇರಿ-ನಂದೀಪುರದ ಚರಂತಪ್ಪಜ್ಜ ಸ್ವಾಮಿಗಳ 22ನೇ ಸ್ಮರಣೋತ್ಸವದ ಎರಡನೇ ದಿನವಾದ  ನಿನ್ನೆ ಸಂಜೆ. ವಿವಿಧ ಮಠಾಧೀಶರ ಸಾನಿಧ್ತದಲ್ಲಿ  ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ಸಂಶೋಧಕ ಡಾ.ಸಿ. ಶಿವಕುಮಾರ ಸ್ವಾಮಿಗಳ 'ವಚನಾನುಸಂಧಾನ' ಕೃತಿ ಲೋಕಾರ್ಪಣೆ  ಮಾಡಲಾಯ್ತು.
ಕೃತಿ ಕುರಿತು ಮಾತನಾಡಿದವರು,  ಕೃತಿಯಲ್ಲಿ ಬರುವ ಶಿವದೀಕ್ಷೆ, ಲಿಂಗದೀಕ್ಷೆ, ಭಸ್ಮ, ರುದ್ರಾಕ್ಷಿ, ಪಂಚಾಚಾರ, ಷಟ್ಸ್ಥಲ, ಲಿಂಗಾಂಗ ಸಾಮರಸ್ಯ ಹಾಗೂ ಸಮಾಧಿ ಸಂಸ್ಕಾರ ಕುರಿತು  ಬರೆದಿರುವ ಲೇಖನಗಳ ಮಹತ್ವ ಕತಿಳಿಸಿದರು. ಉಪನ್ಯಾಸಕ  ಆಮಾತಿ ಬಸವರಾಜ್ ಅವರು 'ಸಕ್ಕರೆ ಕರೆಡೇಶನವರ ಮರಿಕಲ್ಯಾಣದ ಪರಿಕಲ್ಪನೆ' ಕುರಿತು ವಿಶೇಷ ಉಪನ್ಯಾಸ ನೀಡಿ,  ಸಕ್ಕರೆ ಕರೆಡೀಶರ ಸಮಾಜಸೇವೆ, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸೇವೆ ಹಾಗೂ ಜಿಲ್ಲೆಯ ಅಭಿವೃದ್ಧಿ ನೆಲೆಯಲ್ಲಿ ಅವರು ಕೈಗೊಂಡ ಕಾರ್ಯಗಳ ಕುರಿತು ತಿಳಿಸಿದರು.
ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರಸ್ವಾಮಿ, ಬೆಟ್ಟದೂರು ಪ್ರಭುಲಿಂಗೇಶ್ವರ ಮಠದ ಮಹಾದೇವ ದೇವಸ್ವಾಮಿ, ಜಂಗಮ ಹೊಸಹಳ್ಳಿ ಪುರವರ್ಗ ಮಠದ ಅಜಾತ ಶಂಭುಲಿಂಗ ಶಿವಾಚಾರ್ಯಸ್ವಾಮಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಚನಾನು ಸಂಧಾನ ಕೃತಿಯ ಲೇಖಕ, ಹಿರಿಯ ಸಂಶೋಧಕ ಡಾ.ಸಿ. ಶಿವಕುಮಾರಸ್ವಾಮಿ, 579 ಕೃತಿಗಳ ಲೇಖಕ ಎಸ್.ವಿ. ಪಾಟೀಲ್ ಗುಂಡೂರ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಪಲ್ಲೇದ ಪಂಪಾಪತೆಪ್ಪ, ಎರಿಸ್ವಾಮಿ ಬೂದಿಹಾಳುಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ  ಅಧಿಕಾರಿ ಚೋರನೂರು ಕೊಟ್ರಪ್ಪ,  ಮಠಂ ನಂದೀಶ, ಮಸೀದಿಪುರದ ಸಿದ್ದರಾಮನಗೌಡ  ಭಾಗವಹಿಸಿದ್ದರು.
  ಸಿದ್ಧರಾಮ ಕಲ್ಮಠ ಪ್ರಾಸ್ತಾವಿಕ ಮಾತನಾಡಿದರು. ಲೇಖಕಿ ಡಾ.ಎಚ್.ಎಂ.ಉಮಾ ಕಾರ್ಯಕ್ರಮ ನಿರ್ವಹಿಸಿದರು. ಚರಂತಪ್ಪಜ್ಜನವರ ಲೀಲೆಗಳ ಕುರಿತು ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಮತ್ತವರ ತಂಡ ಹಾಡಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್