LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರೈತರಿಗೆ ಖೇತ ಬಚಾವೋ ಅಭಿಯಾನ ತರಬೇತಿ ಕಾರ್ಯಕ್ರಮ


ಯರಗಟ್ಟಿ,ಜೂ,೨೦: ಕೃಷಿ ಇಲಾಖೆ ಸವದತ್ತಿ ಮತ್ತು ಕೆವಿಕೆ ಮತ್ತಿಕೊಪ್ಪ ಇವರ ಸಂಯೋಗದಲ್ಲಿ ಆತ್ಮ ಯೋಜನೆಯಡಿ ರೈತರಿಗೆ ಖೇತ ಬಚಾವೋ ಅಭಿಯಾನ ತರಬೇತಿ ಕಾರ್ಯಕ್ರಮವನ್ನು ತಾಲೂಕಿನ  ಸತ್ತಿಗೇರಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಹಾಗೂ ರೈನಾಪೂರ ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. 
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಕೆವಿಕೆ ಮತ್ತಿಕೊಪ್ಪದ ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಎಮ್. ಎಸ್. ವಾರದ ಅವರು ಮಾತನಾಡಿ ಈ ಅಭಿಯಾನದ ಮುಖ್ಯ ಉದ್ದೇಶವೆಂದರೆ ಮಣ್ಣನ್ನು ರಕ್ಷಣೆ ಮಾಡುವುದು, ರೈತರು ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಹಾಳಾಗುತ್ತಿದೆ ಆದಷ್ಟು ಸಮತೋಲಿತ ರಸಗೊಬ್ಬರ ಅಥವಾ ಮಣ್ಣು ಆರೋಗ್ಯ ಚೀಟಿ ಆಧಾರಿತ ರಸಗೊಬ್ಬರ ಬಳಕೆ ಮಾಡಿ ಕೃಷಿ ಮಾಡಿದರೆ ಮಣ್ಣು ಸುರಕ್ಷಣೆ ಮಾಡಬಹುದು ಎಂದು ತಿಳಿಸಿದರು.
ಮಣ್ಣು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ರೈತರ ಆದ್ಯ ಕರ್ತವ್ಯವಾಗಿದ್ದು ಈ ಅಭಿಯಾನವು ಜೂನ್ ಒಂದನೇ ತಾರೀಖಿನಿಂದ ಈ ತಿಂಗಳ ೩೦ನೇ ತಾರೀಖಿನವರೆಗೂ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು ಎಲ್ಲಾ ರೈತರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಾಹಿತಿ ನೀಡಿದರು. 
ಜೈವಿಕ ಗೊಬ್ಬರಗಳ ಬಳಕೆ, ಹಸಿರೆಲೆ ಗೊಬ್ಬರಗಳ ಉಪಯೋಗ, ಬೆಳೆ ಪರಿವರ್ತನೆ, ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣು ಪರೀಕ್ಷೆ, ಯೂರಿಯ ಗೊಬ್ಬರದ ದುಷ್ಪರಿಣಾಮಗಳು ,ನ್ಯಾನೋ ಗೊಬ್ಬರ ಬಳಕೆ ಮುಂತಾದ ರೈತರಿಗೆ ಅನುಕೂಲವಾಗುವ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದರು.
ನಂತರ ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಇಲಾಖೆಯ ಯೋಜನೆಗಳ ಕುರಿತು ಮತ್ತು ಸಾವಯವ ಕೃಷಿಯ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಿದರು.
ಈ ವೇಳೆ ಕೃಷಿ ಅಧಿಕಾರಿಗಳಾದ ಎಸ್. ಎಲ್. ದೇಸಾಯಿ, ಎಂ. ಜಿ. ಕಳಸಪ್ಪನವರ, ರೈನಾಪೂರ ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ಬಂಟನೂರ, ಮಾಜಿ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಅಳಗೋಡಿ, ವೀರನಗೌಡ ಸರನಾಡಗೌಡರ, ವಿಠ್ಠಲ ಭಾಂಗಿ, ಸಿದ್ದು ಬೆಕ್ಕನ್ನವರ, ಸುರೇಶ ತೋಟದ, ಸೋಮು ರೈನಾಪೂರ, ಕೃಷಿ ಇಲಾಖೆ ಸಿಬ್ಬಂದಿಯಾದ ಉಮೇಶ ಯರಗಟ್ಟಿ ಶ್ರವಣ ಶಿವಪೂಜಿ, ಮಂಜು ಮುಂಡೇಶಿ ಸೇರಿದಂತೆ ಪ್ರಗತಿಪರ ರೈತರು ಹಾಜರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್