ತಾಳಿಕೋಟೆ, ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ (ರಿ) ತಾಳಿಕೋಟಿಯಲ್ಲಿ ಉಚಿತ ನೃತ್ಯ ತರಬೇತಿ ಅಲ್ಲಿ ಪ್ರವೇಶ ಪಡೆದುಕೊಂಡು ಶ್ರೀವಿನೋದಕುಮಾರ ಚಿಕ್ಕಮಠ ಇವರ ಹತ್ತಿರ ಭರತನಾಟ್ಯ ಹಾಗೂ ಜಾನಪದ ನೃತ್ಯ ತರಬೇತಿ ಪಡೆಯುತ್ತಿದ್ದ ಕುಮಾರಿ ಅಂಬಿಕಾ ಬಡಿಗೇರ್ ಅವರಿಗೆ ಕಲಬುರ್ಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಶ್ರೀ ಮಹೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪದಲ್ಲಿ ರವಿವಾರರಂದು ಜರುಗಿದ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ೬ ವಾರ್ಷಿಕೋತ್ಸವ ಹಾಗೂ ಸರ್ವಧರ್ಮದ ಭಾವ್ಯಕ್ಯತೆಯ ೭ನೇ ರಾಜ್ಯ ಸಮ್ಮೇಳನ ಕಾರ್ಯಕ್ರಮ ಪುಜ್ಯಶ್ರೀ ಷ. ಬ್ರ.ವಿಶ್ವಾರಾಧ್ಯ ಮಹೇಂದ್ರ ಶಿವಾಚಾರ್ಯರು ಹಿರೇಮಠ ಸಂಸ್ಥಾನ ಅಫಜಲಪುರ ಹಾಗೂ ಹಲವಾರು ಪುಜ್ಯರ, ಗಣ್ಯಮಾನ್ಯರ ಸಮ್ಮುಖದಲ್ಲಿ ಡಾ. ಎಸ್.ಎಸ್ ಪಾಟಿಲ್ ಸಂಪಾದಕರು ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ಹುಬ್ಬಳ್ಳಿ ಇವರ ನೇತೃತ್ವದಲ್ಲಿ ಕಲಾವಿದೆ ಕು. ಅಂಬಿಕಾ ಬಡಿಗೇರ ಗೆ "ಕರುನಾಡ ನಾಟ್ಯ ಕಣ್ಮಣಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಪಟ್ಟಣದ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ (ರಿ)ತಾಳಿಕೋಟಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನೋದಕುಮಾರ ಚಿಕ್ಕಮಠ ಎಲ್ಲಾ ಪದಾಧಿಕಾರಿಗಳು ಹಾಗೂ ತಾಳಿಕೋಟಿಯ ಗಣ್ಯಮಾನ್ಯರು ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ