Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರಮಿಕ ಮತ್ತು ಇತರೆ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಕಾರ್ಮಿಕ ದಿನಾಚರಣೆ


ಮಹಾಲಿಂಗಪುರ:ಮೇ ೦೧ ರಂದು ಶುಕ್ರವಾರ ಎಪಿಎಂಸಿ ಭವನದಲ್ಲಿ ಶ್ರಮಿಕ ಮತ್ತು ಇತರೆ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ದಿನಾಚರಣೆ ನಡೆಯಿತು. 
ಈ ಸಂದರ್ಭದಲ್ಲಿ ಕಾರ್ಮಿಕ ( ಶ್ರಮಿಕರ) ಮುಖಂಡ ಪೈಗಂಬರ್ ಪೆಂಡಾರಿ ಮಾತನಾಡಿ, ಕಾರ್ಮಿಕರು ದೇಶದ ಬೆನ್ನೆಲುಬು. ನಾವು ಇಂದು ಅನುಭವಿಸುತ್ತಿರುವ ಸೌಕರ್ಯಗಳು, ವಾಸಿಸುವ ಮನೆಗಳು, ಓಡಾಡುವ ರಸ್ತೆಗಳು ಮತ್ತು ಬಳಸುವ ಪ್ರತಿಯೊಂದು ವಸ್ತುಗಳ ಹಿಂದೆ ಒಬ್ಬ ಕಾರ್ಮಿಕನ ಬೆವರು, ಕಠಿಣ ಪರಿಶ್ರಮ ಮತ್ತು ತ್ಯಾಗ ಅಡಗಿದೆ. ಆದ ಕಾರಣ ವಿಶ್ವದೆಲ್ಲೆಡೆ ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಅವರ ಸಾಧನೆಗಳನ್ನು ಗುರುತಿಸಿ ಗೌರವಿಸುವ ಈ ದಿನವೇ ಕಾರ್ಮಿಕರ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.
ಇದರ ಉದ್ದೇಶ ಮಾನವೀಯ ಆಧಾರದ ಮೇಲೆ ಕೆಲಸದ ಸಮಯ ನಿಗದಿ ಮತ್ತು ನ್ಯಾಯಯುತ ಪ್ರತಿ ಫಲ ಅಂದರೆ ವೇತನಕ್ಕಾಗಿ ಹೋರಾಟದ ಕಿಚ್ಚು ಹಚ್ಚುವ ಈ ದಿನವೇ ಕಾರ್ಮಿಕರಿಗೆ ಮೀಸಲಾಗಿದೆ. ತಮ್ಮ ನೋವು ನಲಿವುಗಳ ಮಧ್ಯೆ ಗೋಳು ಹೋಯ್ದುಕ್ಕೊಂಡು ಮತ್ತೊಬ್ಬರಿಗೆ ಸಹಕಾರ ನೀಡುವವರೇ ಕಾರ್ಮಿಕರು. ಪ್ರತಿಯೊಬ್ಬ ಕಾರ್ಮಿಕನಿಗೆ ಗೌರವಯುತ ಬದುಕು, ಕೆಲಸದಲ್ಲಿ ಸುರಕ್ಷತೆ ಮತ್ತು ನ್ಯಾಯಯುತ ವೇತನದ ಹಕ್ಕಾಗಿದೆ.ಎಲ್ಲ ಕಾರ್ಮಿಕರು ಸಂಘಟಿತರಾದಲ್ಲಿ ವಿಶ್ವವನ್ನೇ ಜಯಿಸುವ ಶಕ್ತಿ ಬರುತ್ತದೆ ಎಂದರು.
ನೇಕಾರ ನಾಯಕ ಶಿವಲಿಂಗಪ್ಪ ಟಿರಕಿ, ಲಕ್ಷ್ಮಣ ಕಿಶೋರಿ ಮಾತನಾಡಿದರು.ಈ ಸಂದರ್ಭದಲ್ಲಿ ಪೈಗಂಬರ್ ಪೆಂಡಾರಿ, ಮಹೇಶ ಆರಿ, ಹಾಜಿ ರಫೀಕ್ ಜಂಗಿ,ನೂರ ಮರೆಗುದ್ದಿ, ಬೋಜು ಲಮಾಣಿ, ದಾದಾಪೀರ ಕಬಾಡಿ, ಪ್ರಕಾಶ ಚವಾನ, ಗನಸೈದ ಕಬಾಡಿ,ರಾಮು ಲಮಾಣಿ,ಅನ್ನು ಪೆಂಡಾರಿ, ಮೇಹಬೂಬ ಮುಲ್ಲಾ, ಯಾಕೂಬ್ ಜೀರಗಾಳ, ದಾವಲಸಾಬ ನಗಾರ್ಚಿ, ಅರಫಾತ ಮಾಲದಾರ, ಅಬುಬಕರ ಝಾರೆ, ಮಲಿಕ ಖುದಾವಂದ, ಕಾರ್ಮಿಕ ಸಂಘದ ಲಾಲಸಾಬ ನಗಾರ್ಚಿ ಸ್ವಾಗತಿಸಿ, ವಂದಿಸಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*