LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪ್ರಚಲಿತ ವಿದ್ಯಮಾನಗಳಿಗೆ ಕವಿತೆಗಳು ಬೆಳಕಾಗಲಿ : ಶಿವಶಾಂತಾ

ಗದಗ, ಮೇ. ೫ : ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಕವಿತೆಗಳು ಹೊರಹೊಮ್ಮಬೇಕು. ವಾಸ್ತವಿಕ ಬದುಕಿಗೆ ಹತ್ತಿರವಾಗುವ ಕವಿತೆಗಳು ಜನಮನ ಸೆಳೆಯಬಲ್ಲವು ಅಂತಹ ಕವಿತೆಗಳ ರಚನೆಗೆ ಯುವ ಬರಹಗಾರರು ಮುಂದಾಗಬೇಕೆಂದು ಸಾಹಿತಿ ಶ್ರೀಮತಿ ಶಿವಶಾಂತಾ ಬಿಸನಳ್ಳಿ ಹೇಳಿದರು.
ಗದುಗಿನ ಲಾಯನ್ಸ್ ಭವನದಲ್ಲಿ ಕರ್ನಾಟಕ ರಾಜ್ಯ ಲೇಖಕಿಯರ ಸಂಘ ಗದಗ ಜಿಲ್ಲಾ ಘಟಕ ಹಾಗೂ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ಗದಗ ಜಿಲ್ಲಾ ಘಟಕ ಧಾರವಾಡದ ಚೇತನ ಫೌಂಡೇಶನ್, ಬೆಂಗಳೂರಿನ ಗಂಧದ ಗುಡಿ ಕನ್ನಡ ಸಂಘ ಎರ್ಪಡಿಸಿದ್ದ ರಾಜ್ಯ ಮಟ್ಟದ ಕನ್ನಡ ನುಡಿ ಸಡಗರ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರಹಗಾರರು ಅಧ್ಯಯನಶೀಲರಾಗಬೇಕು, ಇತರ ಬರಹಗಾರರ ಸಾಹಿತ್ಯವನ್ನು ಓದುವ ಒಳ್ಳೆಯದನ್ನು ಸ್ವೀಕರಿಸುವ ಹಾಗೂ ಅಗತ್ಯವಿದ್ದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ಸಾಹಿತ್ಯ ರಚನೆಗೆ ಪ್ರೇರಣೆ ನೀಡಬೇಕು ಅಂದಾಗ ಸಾಹಿತ್ಯ ಸಂವರ್ಧಿಸುವದು, ಸ್ನೇಹ ಬಲಗೊಳ್ಳುವದು ಎಂದರು.
ಇಂದಿಲ್ಲಿ ಕವನ ವಾಚಿಸಿದ ಕವಿ, ಕವಯಿತ್ರಿಯರು ಒಳ್ಳೆಯ ಪ್ರಬುದ್ಧವಾದ ಕವನಗಳನ್ನು ರಚಿಸಿದ್ದಾರೆ, ಅವರ ಈ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ ಬರಲಿರುವ ದಿನಗಳಲ್ಲಿ ಇವರ ಸಾಹಿತ್ಯಿಕ ಕೃತಿಗಳು ಕನ್ನಡ ಸಾಹಿತ್ಯ ಭಂಡಾರವನ್ನು ಸೇರಿಕೊಳ್ಳುವಂತಾಗಲಿ ಎಂದು ಶುಭ ಕೋರಿದರು.
ಆಶಯ ನುಡಿಗಳನ್ನಾಡಿದ ಪ್ರೊ.ಪ್ರಕಾಶ ಸುಣಗಾರ ಕಾವ್ಯ ಸಾಹಿತ್ಯದ ಜೀವಾಳ, ರವಿ ಕಾಣದ್ದನ್ನು ಕವಿ ಕಾಣುವನು ಎಂಬಂತೆ ಶಬ್ದ, ನುಡಿಗಳು ಅರ್ಥಪೂರ್ಣ ಎನ್ನಿಸುವಂತೆ ಕಾವ್ಯ ರಚನೆಗೆ ಯುವ ಬರಹಗಾರರು ಮುಂದಾಗಲಿ ಜೊತೆಗೆ ಓದುಗರಿಗೆ, ಜನಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳ ಭಾಷೆಯ ಬಳಕೆಯಾಗಲಿ ಎಂದರು. ಸಮ್ಮೇಳನದ ಸರ್ವಾಧ್ಯಕ್ಷೆ ಶ್ರೀಮತಿ ರತ್ನಾ ಬದಿ ಸಂದರ್ಭೋಚಿತವಾಗಿ ಮಾತನಾಡಿದರು. 
ಅತಿಥಿಗಳಾಗಿ ಅತಿಥಿಗಳಾಗಿ ಸಾಹಿತಿ ಶ್ರೀಮತಿ ಪರ್ವಿನ್‌ಭಾನು ಬುಳ್ಳಣ್ಣವರ, ರಾಜೇಶ್ವರಿ ಹಿರೇಮಠ, ಮಂಜುನಾಥ ಭೀಮಕ್ಕಣ್ಣವರ, ಎಲ್.ಐ.ಲಕ್ಕಮ್ಮನವರ, ಸಾಹಿತಿ ಶಿವಲಿಂಗಪ್ಪ ಅಣ್ಣಿಗೇರಿ, ಶರಣಪ್ಪ ಹೊಸಂಗಡಿ ಆಗಮಿಸಿದ್ದರು. 
ಕವಿಗೋಷ್ಠಿಯಲ್ಲಿ ಬಸವಣ್ಣೆವ್ವ ಹರ್ತಿ, ಜಿ.ಎನ್.ಪಾಟೀಲ, ನೇತ್ರಾ ಕುರಬರ, ಬೂದೇಶ ಮಜ್ಜಿಗುಡ್ಡ, ಸೌಜನ್ಯ ಪಾಟೀಲ, ಭಾಗ್ಯಶ್ರೀ ಹುರಕಡ್ಲಿ, ಶಿಲ್ಪಾ ಮಿಣಜಗಿ, ಕಸ್ತೂರಿ ಕಡಗದ, ರೇಖಾ ನಾಲ್ವಾಡ, ಮೇಘಾ ಬೆಳದಡಿ, ವಿಜಯಲಕ್ಷ್ಮೀ ಬಂಡಿವಾಡ, ಶಶಿಕಲಾ ಕಮತರ, ಜೆ.ಚಂದ್ರಶೇಖರ ಸೇರಿದಂತೆ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಕವಿಗಳು ನಾಡು, ನುಡಿ, ದೇಶಾಭಿಮಾನ, ಅತ್ತೆ-ಸೊಸೆ, ಸಮಯದ ಮಹತ್ವ, ಹೆಣ್ಣು, ಬಾಲ್ಯವಿವಾಹ, ಪರಿಸರ ಕುರಿತಾಗಿ ಕವನ ವಾಚಿಸಿದರು. ಚೇತನಾ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಸ್ವಾಗತಿಸಿದರು, ಡಾ.ಜೆ.ಪ್ರೇಮಾ ನಿರೂಪಿಸಿದರು ಸುಜಾತಾ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ದೀಪ್ತಿ ಪಾಠಕ, ಪುಷ್ಪಲತಾ ಬಸವರಾಜ ಬಳ್ಳಾರಿ, ಚಂಪಾ ಪಾಟೀಲ, ಸುಮತಿ ಮುರುಗೇಶ ಗದಗಿನಮಠ, ಉಡಚಮ್ಮ ಮುದಿಯಪ್ಪ ವಾಲ್ಮೀಕಿ, ಪ್ರೊ.ಸಿದ್ದಲಿಂಗೇಶ ಸಜ್ಜನಶೆಟ್ಟರ, ನಿರ್ಮಲಾ ಚಿತ್ತಾಮೂರ, ಶಕುಂತಲಾ ಬಂಡಿ, ರೇಖಾ ರೊಟ್ಟಿ, ಚಂದ್ರಕಲಾ ಸ್ಥಾವರಮಠ, ವಿಜಯಲಕ್ಷ್ಮೀ ಹಳ್ಳಿ, ಸಂಧ್ಯಾ ಕೋಟಿ, ಸುಶೀಲಾ ಕೋಟಿ, ವೀಣಾ ಕಾವೇರಿ, ಮೀನಾಕ್ಷಿ ಕೊರವನವರ, ಕಾವ್ಯಾ ದಂಡಿನ ಸೇರಿದಂತೆ ರಾಜ್ಯದ ವಿವಿದ ಜಿಲ್ಲೆಗಳ ಸಾಹಿತಿಗಳು, ಗಣ್ಯರು ಪಾಲ್ಗೋಂಡಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ