LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವರ್ತಮಾನದ ತಲ್ಲಣಗಳಿಗೆ ಕವಿ ಸ್ಪಂದಿಸಲಿ  ಡಾ.ಪುಷ್ಪಾ.ಶಲವಡಿಮಠ  ದರ್ವೇಶಿ ಕಾವ್ಯ ಕೃತಿ ಜನಾರ್ಪಣೆ 



ಗದಗ : ಬಡತನ ಹಸಿವು ನೋವು ಸಂಕಟಗಳು

ವರ್ತಮಾನದ ತಲ್ಲಣಗಳಿಗೆ ಕವಿ ಸ್ಪಂದನೆ ಅಗತ್ಯ ಎಂದು ಹಾವೇರಿ ಜಿಲ್ಲಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು, ಹಿರಿಯ ಕವಯತ್ರಿ

ಡಾ ಪುಷ್ಪಾ ಶಲವಡಿಮಠ ಅಭಿಮತ ವ್ಯಕ್ತಪಡಿಸಿದರು.


ಹೂವಿನ ಹಡಗಲಿ ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ  ಸಿಂಚನ ಪ್ರಕಾಶನ. ಮೇ ಸಾಹಿತ್ಯ ಮೇಳ ಬಳಗ ಹೂವಿನ ಹಡಗಲಿ ಸಹಯೋಗದಲ್ಲಿ ಗದುಗಿನ ಕವಿ ಎ.ಎಎಸ್. ಮಕಾನದಾರ ಅವರ ಮಹತ್ವದ ಕವನ ಸಂಕಲನ  ದರ್ವೇಶಿ ಪದ್ಯ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಕುರಿತು ಮಾತನಾಡಿದರು.


ಶರಣರ ಸೂಫಿ ಸಂತರ ಸೌಹಾರ್ದತೆ ಸಮಾನತೆಯ ನುಡಿಗಳನ್ನು ಕವಿ ಸರಳ ಪದ್ಯಗಳಲ್ಲಿ ಅನಾವರಣಗೊಳಿಸಿದ್ದಾರೆ.

ಸಮಾಜದ ಜನ ಸಾಮಾನ್ಯರ

ಕಡು ಕಷ್ಟಗಳಿಗೆ ಕವಿ ಮರುಗಿ ಕರಗಿ ಕಾವ್ಯರೂಪದಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದರು.


ದರ್ವೇಶಿಗಳು ಸರಳ ಜೀವನ ನಡೆಸುವ ಉದಾತ್ತ ಮೌಲ್ಯಗಳನ್ನು ಬಿತ್ತರಿಸುವ ಕೆಲಸ ನಿರಂತರವಾಗಿ ಮಾಡುವವರು. ದರ್ಪವಿಲ್ಲದ ತ್ಯಾಗಮಯ ಬದುಕು ನಿರ್ವಹಿಸುವ ದರ್ವೇಶಿ  ಬಗ್ಗೆ

ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ವಿಶಿಷ್ಟ ರೀತಿಯಲ್ಲಿ ಪದ್ಯಗಳನ್ನು ರಚಿಸಿದ್ದಾರೆ ಎಂದು ಬಣ್ಣಿಸಿದರು.


ಅಸಮಾನತೆ ಭ್ರಷ್ಟಾಚಾರ ಯುದ್ಧದ ಭೀತಿಯ ಸಂದರ್ಭದಲ್ಲಿ ದರ್ವೇಶಿ  ಕೃತಿಯ ಕವಿತೆಗಳು ಮಾನವೀಯ ಸಂಬಂಧಗಳು

ಬೆಸೆಯುವಲ್ಲಿ ಸಾರ್ಥಕಗೊಂಡಿವೆ ಎಂದು ಹೇಳಿದರು.


ದರ್ವೇಶಿ ಕೃತಿಯ ಕವಿತೆಗಳು

ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ, ಕುವೆಂಪು ವಿಶ್ವ ವಿದ್ಯಾಲಯ ಗಳ ಪಠ್ಯಕ್ಕೆ ಆಯ್ಕೆ ಆಗಿರುವುದನ್ನು ಸ್ಮರಿಸಿದರು.


ಸಾಹಿತಿ ಇಸ್ಮಾಯಿಲ್ ಎಲಿಗಾರ್ ದರ್ವೇಶಿ  ಪದ್ಯ  ಕೃತಿ ಜನಾರ್ಪಣೆ ಮಾಡಿದರು.

ನಿರಂತರ ಪ್ರಕಾಶನದ ಕವಿ ಎ ಎಸ್ ಮಕಾನದಾರ ಮಾತನಾಡಿ

ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಕ್ಕೆ ಕಾವ್ಯಗಳನ್ನು ಪದವಿ ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ

ಸಾಂಸ್ಕೃತಿಕ ನೆಲ ಹೂವಿನ ಹಡಗಲಿಯಲ್ಲಿ ದರ್ವೇಶಿ  ಕೃತಿ

ಜನಾರ್ಪಣೆ ಆಗಿರುವುದು ವಿಶೇಷ ಸಂಗತಿ ಎಂದು ಹೇಳಿದರು.


ಸಾಹಿತಿ ತೋ.ಮ. ಶಂಕ್ರಯ್ಯ ಅಧ್ಯಕ್ಷತೆ ವಹಿಸಿದ್ದರು.

ಕವಿ ರಾಮಪ್ಪ ಕೋಟಿಹಾಳ

ಸಿಂಚನ ಪ್ರಕಾಶನದ ಸವಿತಾ ಅಂಗಡಿ

ಗ್ರಂಥಾಲಯಾಧಿಕಾರಿ ಬಿ.ನಾರಾಯಣ್ ದಾಸ್

ಸಿಂಚನ ಕಾವ್ಯ ಪ್ರಶಸ್ತಿ ಪುರಸ್ಕೃತರಾದ ಸೋಮಲಿಂಗ ಬೇಡರ ಆಳೂರ ಹಾಗೂ ಹುರಕಡ್ಲಿ ಶಿವಕುಮಾರ ಉಪಸ್ಥಿತರಿದ್ದರು.


ಪತ್ರಕರ್ತ ಎಂ ದಯಾನಂದ,

ನಯನಾ ಅಂಗಡಿ, ನಾಗರಾಜ್

ಮಲ್ಕಿಒಡೆಯರ್ ನಿರ್ವಹಿಸಿದರು.


ಇದೇ ವೇಳೆ ವಿವಿಧ ಪ್ರಕಾಶನ ಸಂಸ್ಥೆಗಳ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಕಲ್ಪಿಸಲಾಗಿತ್ತು.

ಹೂವಿನ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿಯ

ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್