LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಾಹಿತಿಗಳು ಹೋರಾಟಗಾರರಿಗೆ ಬೆಂಗಾವಲಾಗಿದ್ದೇವೆ: ಡಾ. ಕಾಟ್ಕರ್

 

ಬೆಳಗಾವಿ,ಜೂ,೦೩ : ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯವನ್ನು ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ನಿರ್ಣಯ ಕುರಿತಂತೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಲೇಖಕರ, ಸಾಹಿತಿಗಳ ಸುದ್ದಿಗಳ ಕುರಿತಂತೆ ಲೇಖಕ, ಸಂಘಟಕರಾದ ಗುಂಡೇನಟ್ಟಿ ಮಧುಕರ ಹಾಗೂ ಬಸವರಾಜ ಗಾರ್ಗಿ ನೇತೃತ್ವದಲ್ಲಿ ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಇಂದು. ದಿ. ೨ ಮಂಗಳವಾರದಂದು ಮುಂಜಾನೆ ೧೦-೩೦ ಕ್ಕೆ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸಾಹಿತಿಗಳು, ನಾಟಕಕಾರರು, ಕಲಾವಿದರು ಮಂತಾದವರು ಪಾಲ್ಗೊಂಡಿದ್ದರು.
ಹಿರಿಯ ಪತ್ರಕರ್ತ, ಲೇಖಕ ಡಾ. ಸರಜು ಕಾಟ್ಕರ್ ಅವರು ಮಾತನಾಡುತ್ತ ಕನ್ನಡ ಉಳಿಸುವ ಬೆಳೆಸುವ ಕುರಿತಂತೆ ಲೇಖಕರಿಗಿಂತ, ಹೋರಾಟಗಾರರು ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ. ಕನ್ನಡ ಶಾಲೆಗಳ ಉಳಿವಿಗಾಗಿ, ಕನ್ನಡ ಶಾಲೆಗಳ ಕಟ್ಟಗಳ ಕುರಿತಂತೆ, ಸರಕಾರಿ ಕಚೇರಿಗಳಲ್ಲಿ ಕನ್ನಡ ಬಳಿಕೆಗಾಗಿ ಬೇರೆ ಬೇರೆ ಕನ್ನಡ ಕೆಲಸಕ್ಕಾಗಿ ಕನ್ನಡ ಹೋರಾಟಗಾರರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಹೋರಾಟಗಾರರು ನಾಡಿನ ಸೈನಿಕರಿದ್ದಂತೆ. ಸಾಹಿತಿಗಳಾದ ನಾವು ಹೋರಾಟಗಾರರ ಬೆಂಬಲವಾಗಿ ನಿಂತಿದ್ದೇವೆ. ನಿಲ್ಲಲೇ ಬೇಕು.  ಆದರೆ ಸಾಹಿತಿಗಳು ಭಾಷೆ, ಗಡಿ, ನಾಡು, ನುಡಿ ಕುರಿತಂತೆ ಸಾಹಿತಿಗಳೆಂದೂ ಹಿಂದೆ ಸರಿದವರಲ್ಲ. ನಾವು ಮೌನವಾಗಿದ್ದುಕೊಂಡು ಅಕ್ಷರಗಳ ಮೂಲಕ ನಮ್ಮ ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಮುಂದೆ ಮಾತನಾಡುತ್ತ ಡಾ. ಸರಜು ಅವರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂಬುದಕ್ಕೆ ಸಾಕಷ್ಟು ದಾಖಲೆಗಳಿವೆ.ಅದಕ್ಕಾಗಿ ಸಾಕಷ್ಟು ಹೋರಾಟಗಳಾಗಿವೆ. ಗಡಿ ಸಮಸ್ಯೆ ಕುರಿತಂತೆ ಮಹಾಜನ ಸಮಿತಿ ವರೆಗೆ ಒಟ್ಟು ಇಪ್ಪತ್ತು ಸಮಿತಿಗಳಾಗಿವೆ. ಎಲ್ಲರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದೇ ಹೇಳಿದ್ದಾರೆ. ಆದರೂ ಎಂ.ಇ.ಎಸ್. ದವರು ಆ ಸಮಸ್ಯೆಯನ್ನು ಜೀವಂತವಾಗಿಡಲು ಹೊರಟಿದ್ದಾರೆ ಅಷ್ಟೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಸಾಹಿತಿ ಎಲ್. ಎಸ್. ಶಾಸ್ತ್ರಿಯವರು ಮಾತನಾಡುತ್ತ ಹೋರಾಟಗಾರರಾಗಲಿ, ಸಾಹಿತಿಗಳಾಗಲಿ ಇಬ್ಬರೂ ಮಾಡುತ್ತಿರುವುದು ಮಾತೃಭಾಷೆ ಬೆಳೆಸುವುದಕ್ಕಾಗಿಯೇ ಆದರೆ. ಇಬ್ಬರ ದಾರಿಗಳು ಬೇರೆ ಬೇರೆ ಇವೆ ಅಷ್ಟೆ.ಅದಕ್ಕಾಗಿ ಯಾರೂ ಮನಸ್ಸಿಗೆ ಬೇಸರ ಮಾಡಿಕೊಳ್ಳುವ ಕಾರಣವಿಲ್ಲ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ರಂಗ ಸಂಪದ, ರಂಗಸೃಷ್ಟಿ ಸಾಂಸ್ಕೃತಿಕ ವೇದಿಕೆ, ಹಾಸ್ಯಕೂಟ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ನಾಡಹಬ್ಬ ಉತ್ಸವ ಸಮಿತಿ, ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಸಾಹಿತ್ಯ ಸಂವಾದ, ಕಲಾ ರಂಗ, ಜನ ಸಾಹಿತ್ಯ ಪೀಠ, ವೇಣುಗ್ರಾಮ ನಾಟ್ಯ ಸಂಘ, ಸಾಹಿತ್ಯ ಸಂಜೆ, ಶರಣ ಸಾಹಿತ್ಯ ಪರಿಷತ್ತು, ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ದ.ರಾ. ಬೇಂದ್ರೆ ಸ್ಮಾರಕ ಟ್ರಸ್ಟ್, ಕನ್ನಡ ಕಾವ್ಯ ಕೂಟ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಡಾ. ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ.  ಡಿ. ಎಸ್. ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ, ಹೊಂಬೆಳೆಕು ಸಾಂಸ್ಕೃತಿಕ ಸಂಘ, ನಿವೇದಿತಾರ್ಪಣ ಸಂಗೀತ ಅಕಾಡಮಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ, ಸಂಘಟನೆಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದವು.
ಡಾ. ಎಚ್. ಬಿ. ರಾಜಶೇಖರ, ಎಲ್. ಎಸ್. ಶಾಸ್ತ್ರಿ, ಡಾ. ಬಸವರಾಜ ಜಗಜಂಪಿ, ಡಾ. ಸರಜು ಕಾಟ್ಕರ್, ಡಾ. ಅರವಿಂದ ಕುಲಕರ್ಣಿ, ಡಾ. ಯಲ್ಲಪ್ಪ ಹಿಮ್ಮಡಿ,  ನೀಲಗಂಗಾ ಚರಂತಿಮಠ,  ಯ. ರು. ಪಾಟಿಲ, ಡಾ. ರಾಮಕೃಷ್ಣ ಮರಾಠೆ, ಅಶೋಕ ಮಳಗಲಿ, ರವಿ ಕೊಟಾರಗಸ್ತಿ, ಚಂದ್ರಶೇಖರ ನವಲಗುಂದ, ರಾಮಚಂದ್ರ ಕಟ್ಟಿ, ಆನಂದ ಪುರಾಣಿಕ, ಎ. ಎ. ಸನದಿ, ಶಿರೀಷ ಜೋಶಿ, ಅರವಿಂದ ಹುನಗುಂದ, ಆಶಾ ಯಮಕನಮರಡಿ, ವಾಸಂತಿ ಮೆಳೆದ, ಸುನಂದಾ ಹಾಲಬಾವಿ, ದೀಪಿಕಾ ಚಾಟೆ, ಉಪಸ್ಥಿತರಿದ್ದರು. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವರಾಜ ಗಾರ್ಗಿ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್