LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಏಪ್ರಿಲ್ 1 ರಿಂದ  ಮದನಬಾವಿ ಗ್ರಾಮದೇವಿಯ ಜಾತ್ರೆ ಆರಂಭ

 
ನೇಸರಗಿ. ಇಲ್ಲಿಗೆ ಸಮೀಪದ ಮದನಬಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಗ್ರಾಮದೇವಿಯ ಜಾತ್ರೆಯು 11 ವರ್ಷಗಳ ನಂತರ  ಬುಧವಾರ ದಿ. 01-04-2026 ರಿಂದ ಗುರುವಾರ ದಿ. 9-4-2026 ರವರೆಗೆ ಅದ್ದೂರಿಯಾಗಿ ನೆರವೇರಲಿದೆ. ಜಾತ್ರೆಯ  ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಇಂಚಲ ಸಾಧು ಸಂಸ್ಥಾನ ಮಠದ ಪರಮಪೂಜ್ಯ ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ವಹಿಸುವರು. ಏ. 1 ರಂದು  ಬ್ರಾಹ್ಮೀ ಮಹೂರ್ಥದಲ್ಲಿ ಹಣಬರಹಟ್ಟಿ ಕೆಳದಿ ಹಿರೇಮಠದ ಶ್ರೀ ಷ. ಭ್ರ ಬಸವಲಿಂಗ ಶಿವಾಚಾರ್ಯರು ಹಾಗೂ ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ ಇವರುಗಳ ಸಮ್ಮುಖದಲ್ಲಿ ಹೋಮ, ಹವನ, ಪೂಜೆ, ದೈವದ ಉಡಿ ತುಂಬುವದು ಮತ್ತು ಬಾಬದ ಮನೆ ವಸತಿ, ರಾತ್ರಿ 8 ಘಂಟೆಗೆ ಶಂಕರಣ್ಣ ಸಂಕನ್ನವರ ಹಾಗೂ ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವದು. ಏ. 2 ರಂದು ಗ್ರಾಮದೇವಿಗೆ ಉಡಿ ತುಂಬುವದು, ಗ್ರಾಮದೇವಿಯ ಹೊನ್ನಾಟ  ಸಂಜೆ 7 ಘಂಟೆಗೆ ಶ್ರೀ ಬಸವೇಶ್ವರ ರಥದ  ಕಳಸಾರೋಹಣ, ರಾತ್ರಿ 8 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಏ. 3 ರಂದು ಗ್ರಾಮದೇವಿಗೆ ಉಡಿ ತುಂಬುವದು, ಹೊನ್ನಾಟ, ರಾತ್ರಿ 8 ಘಂಟೆಗೆ ಗಿರಿಯಾಲ ಹಂಸಧ್ವನಿ ಮೆಲೋಡಿಸ್ ಆರ್ಕೆಸ್ಟ್ರಾ, ಜೀ ಕನ್ನಡ ಸರಿಗಮಪ ಗಾಯಕರಾದ ಪಂಕಜ್ ಪರಸನಟ್ಟಿ ಹಾಗೂ ದಿಯಾ ಹೆಗಡೆ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ, ಏ 4 ರಂದು ಗ್ರಾಮದೇವಿಗೆ ಉಡಿ ತುಂಬುವದು, ಹೊನ್ನಾಟ, ಸಂಜೆ 8 ಘಂಟೆಗೆ ಜೀ ಹಾಗೂ ಕಲರ್ಸ್ ಕನ್ನಡ ವಾಹಿನಿ ಕಲಾವಿದರಿಂದ ನಗೆಹಬ್ಬ ಕಾರ್ಯಕ್ರಮ ಜರುಗುವದು. ಏ 5 ರಂದು ಉಡಿ ತುಂಬುವದು, ಹೊನ್ನಾಟ  ರಾತ್ರಿ 8 ಘಂಟೆಗೆ ಶ್ರೀ ದೇವಿಯ ನವ ಅವತಾರದ ನೃತ್ಯ ಸಂಯೋಜನೆ, ಏ 6 ರಂದು ಉಡಿ ತುಂಬುವದು, ಹೊನ್ನಾಟ  ಸಂಜೆ 8 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9 ಘಂಟೆಗೆ  ಶ್ರೀ ಚನ್ನವೃಷಬೇಂದ್ರ ನಾಟ್ಯ ಸಂಘ ಮದನಬಾವಿ ಇವರಿಂದ ಸಮಾಜ ರೂಪಿಸಿದ ರೌಡಿ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನೆರವೇರಲಿದೆ.ಏ 7 ರಂದು ಹೊನ್ನಾಟ, ಸೀಮೆಕಟ್ಟೆಗೆ ಕುರಿಸುವದು, ಸಂಜೆ 5 ಘಂಟೆಗೆ ಶ್ರೀ ಬಸವೇಶ್ವರ ಮಹಾರಥೋತ್ಸವ ಜರುಗುವದು, ರಾತ್ರಿ 9 ಘಂಟೆಗೆ ಬೀಳಗಿ ತಾಲೂಕಿನ ಬೂದಿಹಾಳ ಎಸ್ ವಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ನಾಟ್ಯ ಸಂಘ ಇವರಿಂದ ನವಲಗುಂದದ ಅಜಾತ ನಾಗಲಿಂಗೇಶ್ವರ ಮಹಾತ್ಮೆ ಭಕ್ತಿ ಪ್ರಧಾನ ನಾಟಕ, ಏ 8 ರಂದು ಉಡಿ ತುಂಬುವದು, ಸಂಜೆ 6 ಘಂಟೆಗೆ ಮದನಬಾವಿಯ ಮಹಾಂತೇಶ ದೊಡ್ಡಗೌಡರ ಅಭಿಮಾನಿಗಳ ಭಳಗದ ವತಿಯಿಂದ ಗ್ರಾಮೀಣ ಮಟ್ಟದ ಹೊನಲು - ಬೆಳಕಿನ ವ್ಹಾಲಿಬಾಲ್ ಪಂದ್ಯಾವಳಿ, ಏ 9 ರಂದು ಉಡಿ ತುಂಬುವದು, ಸಂಜೆ ಶ್ರೀ ಗ್ರಾಮದೇವಿಯರು ಸೀಮೆಗೆ ಹೋಗುವದು ನಂತರ ಶ್ರೀ ಬಸವೇಶ್ವರ ರಥದ ಕಳಸ ಇಳಿಸುವ ಕಾರ್ಯಕ್ರಮ ಜರುಗಲಿವೆ ಎಂದು ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹಾಗೂ ಜಾತ್ರಾ ಉತ್ಸವ ಕಮಿಟಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್