LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮಹರ್ಷಿ ಭಗೀರಥರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ :  ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮ ಹೊಂದಿದ್ದ ಭಗೀರಥ ಮಹರ್ಷಿ ತಮ್ಮ ಪೂರ್ವಜರ ಮುಕ್ತಿಗಾಗಿ ರಾಜಸುಖವನ್ನೇ ತ್ಯಜಿಸಿದ ಮಹಾನ್ ಋಷಿ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಗುರುವಾರ ಪಟ್ಟಣದ ಹೊರವಲಯದಲ್ಲಿರುವ ಭಗೀರಥ ವೃತ್ತ (ಮೂಡಲಗಿ ಕ್ರಾಸ್)ದಲ್ಲಿರುವ ಮಹರ್ಷಿ ಭಗೀರಥ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮಹರ್ಷಿ ಭಗೀರಥರ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಬೆಳವಣಿಗೆಗೆ ಶ್ರಮಿಸುವಂತೆ ಅವರು ತಿಳಿಸಿದರು. ಭಗೀರಥ ಮಹಾರಾಜನು ಕಠಿಣ ತಪಸ್ಸಿನಿಂದ ತಮ್ಮ ಪೂರ್ವಜರ ಮುಕ್ತಿಗಾಗಿ ಸ್ವರ್ಗದಲ್ಲಿದ್ದ ಗಂಗಾ ನದಿಯನ್ನು ಭೂಮಿಗೆ ತಂದು ಅವರ ಆತ್ಮಕ್ಕೆ ಮುಕ್ತಿ ನೀಡಿದ ಮಹಾನ್ ಪುರು?ರಾಗಿದ್ದರು. ಇದಕ್ಕಾಗಿ ಹಿಮಾಲಯ ಪರ್ವತದಲ್ಲಿ ಕಠಿಣ ತಪಸ್ಸು ಮಾಡಿದ್ದರು. ಅದರ ಫಲವೇ  ಗಂಗಾ ನದಿಯನ್ನು ಭೂಮಿಗೆ ತಂದ ಪುಣ್ಯವಂತನು ಭಗೀರಥರು ಎಂದು ಅವರು ಹೇಳಿದರು.
ಪ್ರತಿ ವ?ವೂ ಭಗೀರಥ ಮಹರ್ಷಿ, ಜಗಜ್ಯೋತಿ ಬಸವೇಶ್ವರರು, ಭಕ್ತ ಕನಕದಾಸರು, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಬಿ. ಆರ್. ಅಂಬೇಡ್ಕರ್ ಅವರಂತಹ ಮಹಾನ್ ಪುರು?ರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಿ ಅವರಿಗೆ ಗೌರವವನ್ನು ಸಲ್ಲಿಸುತ್ತಿದ್ದೇವೆ.ಆದರೆ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗಬೇಕಿದೆ. ಕೇವಲ ಜಯಂತಿ ಕಾರ್ಯಕ್ರಮಗಳಿಗೆ ಮೀಸಲಿಡದೇ ಪ್ರತಿ ದಿನವೂ ಮಹಾನ್ ವ್ಯಕ್ತಿಗಳನ್ನು ಸ್ಮರಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣದಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ, ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಹಂದಿಗುಂದ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಶೈಲ ಬ್ಯಾಕೋಡ, ಸಮಾಜದ ಮುಖಂಡರಾದ ಈಶ್ವರ ಕಂಕಣವಾಡಿ, ಅಜ್ಜಪ್ಪ ಕಂಕಣವಾಡಿ, ಹಣಮಂತ ಪೂಜೇರಿ, ಮುತ್ತೆಪ್ಪ ಬಿರನಾಳ, ನ್ಯಾಯವಾದಿ ಲಕ್ಷ್ಮಣ ಅಡಿಹುಡಿ, ಅಲ್ಲಪ್ಪ ಕಂಕಣವಾಡಿ, ವೈ.ಆರ್.ಹಂದಿಗುಂದ, ಭರಮಣ್ಣ ಕಪ್ಪಲಗುದ್ದಿ, ಸುಭಾಸ ಗೋಡ್ಯಾಗೋಳ, ಪರಸಪ್ಪ ಉಪ್ಪಾರ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ನಾಗನೂರ : ಪಟ್ಟಣದಲ್ಲಿ ಮಹರ್ಷಿ ಭಗೀರಥ ಮಹಾರಾಜರ ಜಯಂತಿಯನ್ನು ಭಗೀರಥ ಮಠದಲ್ಲಿ ಜರುಗಿತು. ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಭಗೀರಥ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಗೌರವ ಅರ್ಪಿಸಿದರು.
ಸಮಾಜದ ಪ್ರಮುಖರಾದ ಚಂದ್ರು ಬೆಳಗಲಿ, ಅಲ್ಲಪ್ಪ ಗುಡೆನ್ನವರ, ಪರಸಪ್ಪ ಬಬಲಿ, ಸುಭಾಸ ಬೆಳಗಲಿ, ರಾಮಗೊಂಡ ಪಡದಲ್ಲಿ, ಅಲ್ಲಪ್ಪ ಗೋಟೂರ, ಚಂದ್ರು ಪಡದಲ್ಲಿ, ಅರ್ಬನ್ ಸೊಸೈಟಿ ಅಧ್ಯಕ್ಷ ಬಸವರಾಜ ತಡಸನವರ, ಭೀಮಗೌಡ ಹೊಸಮನಿ, ಪವಾಡೆಪ್ಪ ಗೋಟೂರ, ಮುತ್ತೆಪ್ಪ ಮುತ್ತೆನ್ನವರ, ಮಹಾದೇವ ನಾಯಿಕ, ಬಸು ಹಳಿಗೌಡರ, ಪ್ರವೀಣ ಜೋಕಿ, ರಾಮಚಂದ್ರ ಚಿಗಡೊಳ್ಳಿ, ಯಮನಪ್ಪ ಪಡದಲ್ಲಿ,  ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್