LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮೇ 10 ಹೇಮರಡ್ಡಿ ಮಲ್ಲಮ್ಮ ಜಯಂತಿ ವೀರಶೈವ ಲಿಂಗಾಯತ ರಡ್ಡಿ ಸಂಘ ಪುನರ್ಚನೆ






ಬಳ್ಳಾರಿ, ಏ.16: ಬರುವ ಮೇ 10 ರಂದು ನಗರದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಭಕ್ತಿಭಾವ, ಸಡಗರ ಸಂಭ್ರಮದಿಂದ ಆಚರಿಸಲು ವೀರಶೈವ ಲಿಂಗಾಯತ ರಡ್ಡಿ ಸಂಘ ನಿರ್ಧರಿಸಿದೆ.

ನಗರದ ಬಸವ ಭವನದಲ್ಲಿ ನಿನ್ನೆ ಸಂಜೆ ಸಭೆ ಸೇರಿದ ಸಂಘದ ಸದಸ್ಯರು, ಮುಖಂಡರು, ಕಳೆದ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಕಳೆದ ವರ್ಷದಂತೆ ಜಿಲ್ಲಾಡಳಿತದ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಲು ಚರ್ಚಿಸಿದರು.

ಈ ಕುರಿತಂತೆ ಜಿಲ್ಲಾಡಳಿತ ಕರೆಯುವ ಪೂರ್ವ ಸಿದ್ದತಾ ಸಭೆಯಲ್ಲಿ. ಮಲ್ಲಮ್ಮ ಜಯಂತಿ ಸಮಾರಂಭವನ್ನು ನಗರದ ಬಸವ ಭವದಲ್ಲಿ ಅಂದು ಸಂಜೆ ಹಮ್ಮಿಕೊಳ್ಳೋಣ. ಅದಕ್ಕೂ ಮುನ್ನ ಮಲ್ಲಮ್ಮಳ ಭಾವಚಿತ್ರದ ಮೆರವಣಿಗೆಯನ್ನು ದುರ್ಗಮ್ಮ ದೇವಸ್ಥಾನದಿಂದ ಬಸವ ಭವನದ ವರೆಗೆ ಹಮ್ಮಿಕೊಳ್ಳಬೇಕು. ಇದಕ್ಕಾಗಿ ಹಳ್ಳಿಗಳಿಗೆ ತೆರಳಿ ರಡ್ಡಿ ಸಮುದಾಯದ ಜನತೆ ಜಯಂತಿ ಕಾರ್ಯಕ್ರಮಕ್ಕೆ ಬರುವಂತೆ ಕರಪತ್ರ ನೀಡಿ ಆಹ್ವಾನಿಸಲು. ಸಮಾರಂಭದ ನಂತರ ಪ್ರಸಾದ ವ್ಯವಸ್ಥೆ ಮಾಡಲು ತೀರ್ಮಾನಿಸಿತು.

ಉಳಿಸಂತೆ ಉಪನ್ಯಾಸ, ಸನ್ಮಾನ ಮೊದಲಾದವುಗಳ ಬಗ್ಗೆ ಜಿಲ್ಲಾಡಳಿತ ಕರೆಯುವ ಸಭೆಯಲ್ಲಿ ಅಂತಿಮಗೊಳಿಸಲು ನಿರ್ಣಯಿಸಲಾಯ್ತು.

ಇದೇ ವೇಳೆ ವೀರಶೈವ ಲಿಂಗಾಯತ ರಡ್ಡಿ ಸಂಘವನ್ನು ಪುನರ್ವರಚಿಸಲು ನಿರ್ಧರಿಸಿ. ಹಳಬರು ಮತ್ತು ಹೊಸಬರನ್ನು ಒಳಗೊಂಡ ಈ ಮುಂದಿನ. 21 ಹೆಸರುಗಳನ್ನು ಅಂತಿಮಗೊಳಿಸಲಾಯ್ತು. ಡಾ ಎಸ್.ಜೆ.ವಿ.ಮಹಿಪಾಲ್, ಎನ್.ಅಯ್ಯಪ್ಪ, ಜೆ.ಎಸ್.ನೇಪಾಕ್ಷಪ್ಪ, ರವಿರಾಜಶೇಖರ ರಡ್ಡಿ, ಜೋಳದರಾಶಿ ಬಸವರಾಜ್, ಟಿ.ವಿರುಪಾಕ್ಷಗೌಡ, ಸಂಗನಕಲ್ಲು ಯುಧಿಷ್ಟರ, ಬಿ.ರವೀಂದ್ರನಾಥ, ಕೆರೆನಳ್ಳಿ ಚಂದ್ರಶೇಖರ, ಅಭಿನಂದನ್ ಪಾಟೀಲ್, ಎನ್ ಚಂದ್ರಶೇಖರ ಯರಂಗಳಿ, ಡಾ.ಭಾಗ್ಯಲಕ್ಷ್ಮಿ, ಟಿ.ಎಂ.ಜಡೇಶ, ಮಿಂಚೇರಿ ನರೇಂದ್ರಬಾಬು, ಸಂಜೀವರಾಯನಕೋಟೆ ಸೋಮನಗೌಡ, ಕೆ.ನಂದೀಶ್ ಕುಮಾರ್, ಬಣಾಪುರ ನಾಗರಾಜ, ಜೆ.ಬಿ.ಸುಮಂಗಳ, ಗೋನಾಳ್ ಮುರಹರಗೌಡ, ಹೆಚ್.ಮಹಾಬಲೇಶ್ವರಗೌಡ, ಹೆಚ್.ವೀರಭದ್ರಗೌಡ ಇವರನ್ನು ಅಂತಿಮಗೊಳಿಸಿದ್ದು. ಇವರಲ್ಲಿ ಪದಾಧಿಕಾರಿಗಳನ್ನು ಕೆಲ ದಿನಗಳಲ್ಲಿ ಆಯ್ಕೆ ಮಾಡಲು ಸೂಚಿಸಿದೆ.

ಇನ್ನು ಮಹಿಳಾ, ಘಟಕ, ಬಳ್ಳಾರಿ ತಾಲೂಕು ಘಟಕ, ಯುವ ಘಟಕಗಳನ್ನು ರಚಿಸುವ ಬಗ್ಗೆಯೂ ಚರ್ಚಿಸಲಾಯ್ತು. ಸಭೆಯಲ್ಲಿ ರಡ್ಡಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.







Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್