LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಂಗೀತದಿಂದ ಮಾನಸಿಕ ನೆಮ್ಮದಿ:ರನ್ನ ವಿಚಾರ ವೇದಿಕೆ ಅಧ್ಯಕ್ಷ ಗುರುರಾಜ ಖಾಸನೀಸ ಅಭಿಮತ


ಮಹಾಲಿಂಗಪುರ:ಸಂಗೀತ ಕೇವಲ ಮನರಂಜನೆ ಮಾಧ್ಯಮವಲ್ಲ ಶಾಂತಿಯುತ ಹಾಡುಗಳನ್ನು ಕೇಳುವದರಿಂದ ಒತ್ತಡ,ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಿ ಮನಸ್ಸನ್ನು ಪ್ರಶಾಂತವಾಗಿಡುತ್ತದೆಯಲ್ಲದೆ ನಿದ್ರಾಹೀನತೆ ಸಮಸ್ಯ ದೂರಾಗುತ್ತದೆ ಎಂದು ರನ್ನ ವಿಚಾರವೇದಿಕೆ ಅಧ್ಯಕ್ಷ ಗುರುರಾಜ ಖಾಸನೀಸ ಹೇಳಿದರು.
ಇಲ್ಲಿಯ ಶ್ರೀ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ರನ್ನವಿಚಾರ ವೇದಿಕೆ ವತಿಯಿಂದ ರವಿವಾರ ಸಂಜೆ ಆಯೋಜಿಸಿದ್ದ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಂಗೀತ ಕರ್ಣ ಮಾಧುರ್‍ಯವಾಗಿರಬೇಕು.ಅಂತಹ ಸಂಗೀತವು ಮಾನಸಿಕ ಪ್ರಸನ್ನತೆ ನೀಡಿ ರಕ್ತದೊತ್ತಡ ಕಡಿಮೆ ಮಾಡಿ ಆರೋಗ್ಯ ಸುಧಾರಿಸಲು ಸಹಕಾರಿಯಾಗುತ್ತದೆ ಎಂದರು.
ವೇದಿಕೆಯ ಸಂಚಾಲಕ ಮ,ಕೃ,ಮೇಗಾಡಿ ಮಾತನಾಡಿ ಮೇಲು ಕೀಳು ಜಾತಿ ಮತ ಎಂಬ ಬೇದವಿಲ್ಲದ ಕಲೆ ಸಂಗೀತ.ಕಿವಿಯೊಳಗೆ ಹಾದು ನರನಾಡಿಗಳಲ್ಲಿ ಪ್ರವಹಿಸಿ  ಮನಸ್ಸಿನ ಬೇಸರ ಸಂಕಟ ನಿವಾರಿಸಿ ಹೊಸ ಚೈತನ್ಯ ತುಂಬುತ್ತದೆ,ಸಂಗೀತವಿಲ್ಲದ ಜೀವನ ನೀರಸ.ಸಂಗೀತ  ಆತ್ಮಕ್ಕೆ ಆಹಾರ ನೀಡುವ ಕಲೆ ದೇವತೆಗಳ ಭಾಷೆ ಎಂದರು.
ಬಾಕ್ಸ:ಸಂಗೀತವನ್ನು ಜನತೆ ಇಷ್ಟಪಡುತ್ತಾರೆ ಎನ್ನುವುದಕ್ಕೆ ಇಲ್ಲಿ ಸೇರಿದ ಅಪಾರ ಜನಸ್ತೋಮ ಸಾಕ್ಷಿಯಾಗಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರನ್ನ ವಿಚಾರ ವೇದಿಕೆಯ ಸದಸ್ಯರಾಗಿ ಕನ್ನಡ ನಾಡು ನುಡಿಯ ಸೇವೆ ಮಾಡಬೇಕು.........ಜಿ.ಎಸ್.ಗೊಂಬಿ ರನ್ನ ವಿಚಾರ ವೇದಿಕೆ ಮಹಾಲಿಂಗಪುರ.
ಇಂಪಾದ ಗಾಯನ:ಬೆಂಗಳೂರಿನ ಸಂಗೀತ ಕಲಾವಿದರಾದ ರಕ್ಷಿತ್ ಕುಲಕರ್ಣಿ,ವಿನಾಯಕ ಇನಾಮದಾರ ಹಾಗೂ ಶ್ರೇಯಶ್ರೀ ಇನಾಮದಾರ ಅವರ ಶಾಸ್ತ್ರೀಯ ಸಂಗೀತ ಗಾಯನ,ಭಾವಗೀತೆ,ಭಕ್ತಿಗೀತೆ ವಚನ ಗಾಯನ ಜನಮನಸೂರ್ಯಗೊಂಡವು.ವಿಜಯಪುರದ ವಿನಯ ಕುಲಕರ್ಣಿ ಅವರ ತಬಲಾ ವಾದನ ಹಾಗೂ ಈಚಲಕರಂಜಿಯ ತ್ರಿಗುಣ ಪೂಜಾರಿ ಅವರ ಹಾರ್‍ಮೋನಿಯಂ ವಾದನ ಸಂಗೀತಕ್ಕೆ ಮೆರಗು ನೀಡಿದವು. ಪ್ರೇಕ್ಷಕರು ಖುಶಿಗೊಂಡು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ಹೊರಹಾಕಿದರು.
ರನ್ನ ವಿಚಾರ ವೇದಿಕೆ ಉಪಾಧ್ಯಕ್ಷ ಬಸವರಾಜ ಮೇಟಿ,ಮಾಧ್ಯಮ ಕಾರ್ಯದರ್ಶಿ ಎಸ್.ಎಸ್.ಈಶ್ವರಪ್ಪಗೋಳ,ಕೋಶಾಧ್ಯಕ್ಷ ಈರಣ್ಣ ಹಲಗತ್ತಿ,ಸಲಹಾ ಸಮಿತಿ ಸದಸ್ಯರಾದ ಜಿ.ಎಸ್.ಗೊಂಬಿ,ಅಣ್ಣಾಜಿ ಫಡತಾರೆ,,ಶ್ರೀಶೈಲಪ್ಪ ಉಳ್ಳಾಗಡ್ಡಿ,ಗುರುಲಿಂಗ ಅಮ್ಮಣಗಿ,ದಾಕ್ಷಾಯಣಿ ಮಂಡಿ,ಅಕ್ಕೂತಾಯಿ ಕಿಚಡಿ,ಶಕುಂತಲಾ ತೇರದಾಳ,ಗಣ್ಯರಾದ ಲಕ್ಕಪ್ಪ ಚಮಕೇರಿ,ಎಂ,ಎಸ್,ಮುಗಳಖೋಡ ಮುಂತಾದವರು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್