LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮೃತ ಲಕ್ಷ್ಮಣರಾವ್ ಮನೆಗೆ ಶಾಸಕ ನಾಡಗೌಡ ಭೇಟಿ: ಸಾಂತ್ವನ

ತಾಳಿಕೋಟೆ,   ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಮುಖಂಡ ಲಕ್ಷ್ಮಣರಾವ್ ಮಹಿಂದ್ರಕರ ಅವರು ಇತ್ತೀಚಿಗೆ ನಿಧನರಾದ ಹಿನ್ನೆಲೆಯಲ್ಲಿ ಕೆ ಎಸ್ ಡಿ ಎಲ್ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಂಗಳವಾರ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. 
      ಈ ಸಂದರ್ಭದಲ್ಲಿ ಶಾಸಕರು ದಿವಂಗತ ಲಕ್ಷ್ಮಣರಾವ್ ಮಹಿಂದ್ರಕರ ಅವರೊಂದಿಗಿನ ತಮ್ಮ ರಾಜಕೀಯ ಒಡನಾಟ, ಪಕ್ಷದ ಕುರಿತು ಅವರಿಗಿದ್ದ ನಿಷ್ಠೆ ಹಾಗೂ ಅವರಲ್ಲಿದ್ದ ಒಳ್ಳೆಯ ಮಾನವೀಯ ಗುಣಗಳನ್ನು ಮೆಲುಕು ಹಾಕಿ ಇವತ್ತು ನಾನು ಪಕ್ಷದ ಒಬ್ಬ ಒಳ್ಳೆಯ ನಿಷ್ಠಾವಂತ ಮುಖಂಡನನ್ನು ಕಳೆದುಕೊಂಡಿದ್ದೇನೆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಈ ದುಃಖವನ್ನು ಸಹಿಸುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು. 
     ಈ ಸಮಯದಲ್ಲಿ ಮೃತ ಲಕ್ಷ್ಮ ಮಹಿಂದ್ರಕರ ಅವರ ಸಹೋದರ ದಿಲೀಪ ಮಹಿಂದ್ರಕರ, ಎಸ್ ಎಂ ಮಹಿಂದ್ರಕರ, ವಿ.ಬಿ.ಲೋಕರೆ, ತುಳಸಿದಾಸ ಹಂಚಾಟೆ, ಮೋತಿಲಾಲ್ ಮಹಿಂದ್ರಕರ, ಕಿಟ್ಟು ಮಹಿಂದ್ರಕರ, ವಿಜಯ ಮಹಿಂದ್ರಕರ, ಸುರೇಶಧಣಿ ನಾಡಗೌಡ(ಬಿಂಜಲಬಾವಿ), ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ,  ಶ್ರೀಮತಿ ನೀಲಮ್ಮ ಪಾಟೀಲ ಹಾಗೂ ಕುಟುಂಬದ ಸದಸ್ಯರು ಇದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್