LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಾರ್ಡಗಳ ಪರಿವಿಕ್ಷಣೆ ಮಾಡಿದ ಶಾಸಕ ಸಿದ್ದು ಸವದಿ

ಮಹಾಲಿಂಗಪುರ : ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ನಗರದ ಹುಲಕುಂದ ಓಣಿ, ಪೋಸ್ಟ್ ಓಣಿ,ಬ್ಯಾಳಿ ಓಣಿ, ಬರಗಿ ಓಣಿಗಳಲ್ಲಿ ದಿನಾಂಕ ೧೮ ರಂದು ಬೆಳ್ಳಿಗೆ ಎಂಟು ಗಂಟೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಂಚರಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.
ನಂತರ ಮಾತನಾಡಿದ ಶಾಸಕ ಸಿದ್ದು ಸವದಿ ಸಾರ್ವಜನಿಕರು ತಮ್ಮ ನಿತ್ಯದ ಅವಶ್ಯಕತೆಗಳಾದ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ, ಗಟಾರ ಸ್ವಚ್ಛತೆ ಇಲ್ಲ ಕೆಲವೊಂದು ಓಣಿಯಲ್ಲಿ ನಡೆದಾಡಲು ಪರದಾಡುವ ಪರಿಸ್ಥಿತಿ ಇದದ್ದು ಕಂಡು ಬಂತು, ಕೆಲವೊಂದಿ? ಜನ ತಮ್ಮ ಅವಶ್ಯಕತೆ ಮುಗಿದ ಮೇಲೆ ನೀರನ್ನು ಗಟಾರಕ್ಕೆ ಬಿಟ್ಟು ಮುಂದಿನವರಿಗೆ ನೀರು ಹೋಗಲಿ ಎನ್ನುವ ಕನಿ? ಮಾನವಿತೆಯನ್ನು ಕಳೆದುಕೊಂಡಿದ್ದು ಕಂಡು ಬಂತು, ಸಾರ್ವಜನಿಕರು ಸಹಕಾರ ಮನೋಭಾವನೆ ಬೆಳೆಸಿ ಕೊಂಡು ತಮ್ಮ ಅವಶ್ಯಕತೆ ಮುಗಿದ ಮೇಲೆ ಮುಂದಿನವರಿಗೆ ಅನುಕೂಲ ಆಗುವಂತೆ ನಲ್ಲಿಗಳನ್ನು ಬಂದ ಮಾಡಿ ಸಹಕರಿಸಬೇಕು ಎಂದು ಶಾಸಕರು ಹೇಳಿದರು.
ಅಲ್ಲದೆ ಅವಶ್ಯಕತೆ ಇಲ್ಲದ ಜಾಗೆಯಲ್ಲಿರುವ ನೀರಿನ ಟ್ಯಾಂಕಗಳನ್ನು ಅವಶ್ಯಕತೆ ಇರುವ ಕಡೆಗೆ ಸ್ಥಳಾಂತರಿಸಿ. ಮತ್ತು ೨೪ * ೭ ನೀರಿನ ಜೋಜನೆಯವರು ಪೈಪ ಅಳವಡಿಕೆ ಸಲುವಾಗಿ ಸಿಕ್ಕ ಸಿಕ್ಕಲ್ಲಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಇದರಿಂದ ರಸ್ತೆಯಲ್ಲಿ ಜನರಿಗೆ ತಿರುಗಾಡಲು ತೊಂದರೆಯಾಗುತ್ತದೆ ಕಾರಣ ಎಲ್ಲ ರಸ್ತೆಗಳನ್ನು ಸ್ವಚ್ಚಗೋಳಿಸುವಂತೆ ಸಂಭಂದ ಪಟ್ಟ ಅಧಿಕಾರಿಗೆ ಸೂಚಿಸಿದರು. ಮತ್ತು ನಗರದಲ್ಲಿ ಕುಡಿಯುವ ನೀರು ಮತ್ತು ಗಟಾರ ಸ್ವಚ್ಚವಾಗಿರುವಂತೆ ನೋಡಿಕೊಳ್ಳಲು ಮುಖ್ಯಾಧಿಕಾರಿಯವರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ,ಮಾಜಿ ಸದಸ್ಯರಾದ ಶೇಖರ ಅಂಗಡಿ, ಚನ್ನಬಸು ಯರಗಟ್ಟಿ, ಮುಖಂಡರಾದ, ಶಿವಾನಂದ ಅಂಗಡಿ, ಈರಪ್ಪ ದಿನ್ನಿಮನಿ,ಮಲ್ಲು ದಲಾಲ, ಪ್ರಶಾಂತ ಮುಖ್ಯನ್ನವರ, ಮಹೇಶ ಜಿಡ್ಡಿಮನಿ, ರಾಮು ಪಾತ್ರೋಟ, ಪುರಸಭೆ ಸಿಬ್ಬಂದಿ, ಉಪ ಸಿಬ್ಬಂದಿ, ನೀರು ಸರಬುರಾಜ ವಿಭಾಗ, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್