LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮೂಡಲಗಿ : ಸಡಗರ ಸಂಭ್ರಮದ ರಂಜಾನ್ ಆಚರಣೆ

ಮೂಡಲಗಿ: ಸಕಲ ಜೀವರಾಶಿಗಳನ್ನು ಪ್ರೀತಿಸುತ್ತ ದಯೆ,ಕರುಣೆ ಹೊಂದಿ ಯಾರ ಕೇಡನ್ನು ಬಯಸದೆ ಇರುವುದು ನಿಜವಾದ ಮನು? ಧರ್ಮವಾಗಿದೆ ಎಂದು ಧರ್ಮ ಗುರುಗಳಾದ ಮೌಲಾನಾ ಮೊಹಮ್ಮದ್ ಶಫೀಕ್ ಆಜ್ಮಿ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಬಿಟಿಟಿ ಕಮಿಟಿ ನೇತೃತ್ವದಲ್ಲಿ ಹಾಗೂ ವಿವಿಧ ಕಮಿಟಿಗಳ ಸಹಕಾರದಲ್ಲಿ ಪವಿತ್ರ ರಂಜಾನ್ ಹಬ್ಬದ ಈದುಲ್ ಫಿತರನ ಸಾಮೂಹಿಕ ಪ್ರಾರ್ಥನೆಗೆ ಸೇರಿದ ಸರ್ವ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು, ಪರೋಪಕಾರ, ಸಮಾನತೆ ಮತ್ತು ಸೌಹಾರ್ದತೆಯ ಧರ್ಮದ ನಿಜತೆಯನ್ನು ಅರಿತು ದ್ವೇ?, ಅಸೂಯೆ ಬಿಟ್ಟು ಪರಸ್ಪರರು ಅನ್ಯೋನ್ಯತೆ ಹೊಂದಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು ಎಂದು ಹಿತ ವಚನ ಹೇಳಿದರು.
ಸಾಮೂಹಿಕ ಪ್ರಾರ್ಥನೆ ಬಳಿಕ ಪರಸ್ಪರರು ಸಡಗರ ಸಂಭ್ರಮದಿಂದ ರಂಜಾನ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಈ ವೇಳೆ ಅರಭಾವಿ ಜನಪ್ರೀಯ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಚಿವ ಸತೀಶ ಜಾರಕಿಹೊಳಿ ಹಾಗೂ ಬೆಳಗಾವಿ ಶಾಸಕ ರಾಜು ಶೇಠ ಅವರು ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿ ಕಳುಹಿಸಿದ ಸಂದೇಶ ಪತ್ರವನ್ನು ಪುರಸಭೆ ಮಾಜಿ ಅಧ್ಯಕ್ಷ ಅಜೀಜ್ ಡಾಂಗೆ ಅವರು ಓದಿ ಹೇಳಿದರು. ಮುಖಂಡರಾದ ಲಾಲಸಾಬ ಸಿದ್ದಾಪೂರ ಅವರು ರಂಜಾನ ಹಬ್ಬದ ಪ್ರಾರ್ಥನೆಗಾಗಿ ಸಹಕರಿಸಿದ ಸಿಪಿಐ , ಪಿಎ??? , ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಬಿಟಿಟಿ ಕಮಿಟಿಯ ಅಧ್ಯಕ್ಷ ಅನ್ವರ್ ನದಾಫ್, ಉಪಾಧ್ಯಕ್ಷ ಹುಸೇನ್ ಥರಥರಿ ಕಾರ್ಯದರ್ಶಿ ಬುಡನಸಾಬ ಡಾಂಗೆ, ಖಜಾಂಚಿ ಅಬ್ದುಲಗಫಾರ ಡಾಂಗೆ, ರಾಜು ಅತ್ತಾರ, ಮುಸ್ತಫಾ ತಾಂಬೋಳಿ, ಆದಮಸಾಬ ತಾಂಬೋಳಿ, ಶರೀಫ್ ಪಟೇಲ್ ಸುಲ್ತಾನಸಾಬ ಕಳ್ಳಿಮನಿ, ಹಸನ ಥರಥರಿ, ಅಬ್ದುಲಸಾಬ ಇನಾಮದಾರ, ರೆಹಮಾನ್ ಝಾರೆ, ಇರ್ಶಾದ್ ಇನಾಮದಾರ,ದಾದು ಮುಗುಟಖಾನ, ಮಲೀಕ ಹುಣಶ್ಯಾಳ, ಹುಸೇನಸಾಬ ಶೇಖ, ನನ್ನುಸಾಬ ಶೇಖ, ಮಲೀಕ ಪಾಶ್ಚಾಪೂರ, ಲಾಲಸಾಬ ಸೈಯದ್, ಸಾಕೀಬ್ ಪೀರಜಾದೆ, ಸಾಹೇಬ್ ಪೀರಜಾದೆ, ಕುತುಬುದ್ದೀನ ನೇಸರ್ಗಿ, ಸೇರಿದಂತೆ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್