LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಂಗಭೂಮಿ ಸೇವೆಗೆ ಹೇಮೇಶ್ವರರ ಕೊಡುಗೆ ಅಪಾರ ಎಂದು ಶ್ರೀ ಬಿ.ಸಿದ್ದಪ್ಪ ಹೇಳಿದರು

ಕಂಪ್ಲಿ:23:- 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ)ಮಾವಿನಹಳ್ಳಿ ಟ್ರಸ್ಟ್ ವತಿಯಿಂದ ಯೋಗ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಮ್ಮಿಗನೂರು ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಂಗಭೂಮಿ ನಿರಂತರವಾಗಿ ಕಾರ್ಯಗತಗೊಳಿಸಲು ಹೇಮೇಶ್ವರ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಲೆಗಳನ್ನು ಬೆಳಸಲು ಮುಂದಾಗಿದ್ದಾರೆ. ಯಾವಾಗಲೂ ಗ್ರಾಮೀಣ ಭಾಗದ ಜನಪದ, ತತ್ವಪದಗಳು, ಭಾವಗೀತೆಗಳು, ಲಾವಣಿ ಪದಗಳು, ಬಯಲಾಟ, ನಾಟಕ,ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಹೇಮೇಶ್ವರ ಎಂದು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ಭಜನೆ ಮತ್ತು ತತ್ವಪದಗಳು ಕಲಾವಿದರು ಶ್ರೀ ಬಿ.ಸಿದ್ದಪ್ಪನವರು ಉದ್ಘಾಟಕರ ನುಡಿಯನ್ನು ನುಡಿದರು.
ಇಂದಿನ ದಿನಗಳಲ್ಲಿ ಮಕ್ಕಳು ಕಲೆಗಳು ಪರಿಚಯ ಇಲ್ಲದೆ ಇರುವುದು ಕಂಡುಬರುತ್ತದೆ. ಅದಕ್ಕಾಗಿ ಗ್ರಾಮೀಣ ಭಾಗದಲ್ಲಿ ಇಂತಹ ಕಲೆಗಳನ್ನು ಬೆಳಿಸುವ ಕೆಲಸ ಸರಕಾರ ಮಾಡಬೇಕು ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಂಗಭೂಮಿ ಕಲಾವಿದರಾದ ಶ್ರೀ ಜಿ.ಪಾಂಡುರಂಗ ಹೇಳಿದರು.
ರಂಗಭೂಮಿ ಚಿಕ್ಕ ವಯಸ್ಸಿನಲ್ಲಿ ಕಲೆಸುವ ಕೆಲಸ ಮನೆಯಲ್ಲಿ ತಂದೆ ತಾಯಿ ಮತ್ತು ಗುರುಗಳು ಮಾಡಬೇಕು ಅದಕ್ಕಾಗಿ ಸರ್ಕಾರ ಶಾಲೆಯಲ್ಲಿ ರಂಗಭೂಮಿ ಶಿಕ್ಷಕರು ನೇಮಕಾತಿ ಮಾಡುವುದರ ಮೂಲಕ ನಾಟಕ ಶಿಕ್ಷಕರ, ಸಂಗೀತ ಶಿಕ್ಷಕರ ಮತ್ತು ನೃತ್ಯ ಶಿಕ್ಷಕರ ನೇಮಕಗೊಳಿಸಿ ರಂಗಭೂಮಿ ಶಿಕ್ಷಣ ನೀಡಲು ಮುಂದಾಗಬೇಕೆಂದು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ ರಂಗಭೂಮಿ ಕಲಾವಿದರಾದ ಶ್ರೀ ಡಿ.ಜಡೀಯಪ್ಪ ಹೇಳಿದರು.
ಯೋಗದಿಂದ ರೋಗ ಮುಕ್ತಿ ಎಲ್ಲರೂ ಪ್ರತಿದಿನ ಯೋಗ,ಧ್ಯಾನ ಕೈಗೊಂಡು ನಡೆಯಬೇಕು ನಮ್ಮ ಆರೋಗ್ಯ ದಿನ ದಿನ ಅನಾರೋಗ್ಯದ ಕಡೆ ಸರಿಯುತ್ತಿದೆ ಅದಕ್ಕಾಗಿ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಲು ಯೋಗವನ್ನು ಕೈಗೊಳ್ಳಬೇಕೆಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಯುಷ್ಮಾನ್ ಆರೋಗ್ಯ ಮಂದಿರ ಸಣಾಪುರದ ವೈದ್ಯರು ಶ್ರೀ ಡಾ.ಬಸವರಾಜ ಹೇಳಿದರು.
ಕಲೆ,ಸಾಹಿತ್ಯ, ಮತ್ತು ಯೋಗ ಈ ನಂಟು ಬೆಸೆಯುವ ಗಂಟು ಪ್ರತಿಯೊಬ್ಬರೂ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ನಮ್ಮ ಕುಟುಂಬದ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬಂತೆ ಪ್ರತಿದಿನ ನಾವು ಯೋಗ ಮತ್ತು ಧ್ಯಾನ ಕೈಗೊಂಡು ನಡೆಯಬೇಕು ನಾವು ಯೋಗ ಕಲಿತು ನಮ್ಮ ಮನೆಯಲ್ಲಿ ಇರುವ ಎಲ್ಲರೂ ಯೋಗ ಮಾಡಲು ಪ್ರೇರಪಿಸಬೇಕೆಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಯುಷ್ಮಾನ್ ಆರೋಗ್ಯ ಮಂದಿರ ಹಂಪಾದೇವನಹಳ್ಳಿ ವೈದ್ಯಾಧಿಕಾರಿಳು ಶ್ರೀ ಡಾ.ಪ್ರಲ್ಹಾದ ಆರ್. ಐಲಿಯವರು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:- ತತ್ವಪದಗಳು:-ಶ್ರೀ ಸದಾಶಿವ ಗೌಡ.ಬಿ ಮತ್ತು ತಂಡದವರು ಎಮ್ಮಿಗನೂರು. ಯೋಗ ನೃತ್ಯ ಶ್ರೀ ಕಗ್ಗಲ್ ಲೋಕಣ್ಣ ಮತ್ತು ತಂಡದವರು ಕುರುಗೋಡು. ಹಾಗೂ ಸಮೂಹ  ನೃತ್ಯ :- ಶ್ರೀ ಹೆಚ್ ಲೋಕರಾಜ್ ಮತ್ತು ತಂಡದವರು ಕುರುಗೋಡು ನೇರವೇರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರು:- ಬಯಲಾಟ ಮತ್ತು ರಂಗಭೂಮಿ ಕಲಾವಿದರು ಶ್ರೀ ಬಿ.ಸಿದ್ದಪ್ಪ ಧರ್ಮಪ್ಪ ಮಾವಿನಹಳ್ಳಿ,ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಿರಿಯ ಮೇಲ್ವಿಚಾರಕ ಶ್ರೀ ಮಾರೇಶ,ತತ್ವಪದಗಳು ಕಲಾವಿದರಗಳು ಶರಣ,ಸ್ವಾಮಯ್ಯ,ಬೆಳಗೋಡು ತಿಪ್ಪೇಶ,ಶಂಕರಪ್ಪ, ಚಾನಾಳ ಈರಣ್ಣ, ಬಸವ,ಹಳೆಮನೆ ವಿರೇಶ, ಪಕ್ಕೀರಪ್ಪ,ಜಡೇಶ,ಸಾಧಕಲಿ,ಹೊನ್ನುರಸಾಬ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರಾಟೆ ಮತ್ತು ಸಮಾಜ ಸೇವಕ ಶ್ರೀ ಹೆಚ್ ಪೀರಾವಲಿ,ಶ್ರೀ ಸಿದ್ದಶಂಕರ,ಶ್ರೀ ಪಾರ್ಥಕುಮಾರ್,ಶ್ರೀ ಸಿದ್ದಾರ್ಥ ಪ್ರಸಾದ್, ಶ್ರೀ ಕು.ಕಾವ್ಯಾಂಜಲಿ, ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್(ರಿ) ಅಧ್ಯಕ್ಷ ಶ್ರೀ ಗುರುಮಹಾಂತೇಶ. ಬಿ ಕಾರ್ಯದರ್ಶಿ ಶ್ರೀ ಕುರುಬರ ಹೇಮೇಶ್ವರ,ಖಜಾಂಚಿ ಶ್ರೀ ಕೆ ಹಿಮಂತರಾಜ ನಿರೂಪಣೆ ಶ್ರೀ ಕುರುಬರ ಹೇಮೇಶ್ವರ, ಸ್ವಾಗತ ಶ್ರೀ ಹೆಚ್.ಪೀರಾವಲಿ,ಶ್ರೀ ಗುರು ಮಹಾಂತೇಶ ಬಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್