LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಅಗತ್ಯ: ಸರ್ಮಸ್ ವಲಿ



ಬಳ್ಳಾರಿ,ಜು.24: ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಸರ್ಮಸ್ ವಲಿ ಅವರು ಹೇಳಿದರು.
ನಗರದ ಪೀಪಲ್ ಟ್ರೀ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮಾನಸಿಕ ಆರೋಗ್ಯದ ಕುರಿತು ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರೌಢಶಾಲಾ ಹಂತವು ಹದಿಹರೆಯದ ವಯಸ್ಸಾಗಿದ್ದು, ಈ ಸಮಯದಲ್ಲಿ ಮಕ್ಕಳಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ವೇಗವಾಗಿ ನಡೆಯುತ್ತವೆ. ಪರೀಕ್ಷೆಯ ಭಯ, ಗೆಳೆಯರ ಒತ್ತಡ ಹಾಗೂ ಭವಿಷ್ಯದ ಆತಂಕದಿAದ ಮಕ್ಕಳು ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ದೈಹಿಕವಾಗಿ ಆರೋಗ್ಯವಾಗಿರುವುದು ಎಷ್ಟು ಮುಖ್ಯವೋ, ಮಾನಸಿಕವಾಗಿ ಪ್ರಶಾಂತವಾಗಿ ಮತ್ತು ಸಕ್ರಿಯವಾಗಿರುವುದೂ ಅಷ್ಟೇ ಮುಖ್ಯ. ಕೋಪ, ದುಃಖ, ಭಯ, ಸಂತೋಷ ಇವೆಲ್ಲವೂ ಸಹಜ ಭಾವನೆಗಳು. ಈ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದೇ ಉತ್ತಮ ಮಾನಸಿಕ ಆರೋಗ್ಯ ಎಂದರು.
*ವಿದ್ಯಾರ್ಥಿಗಳು ಎದುರಿಸುವ ಮುಖ್ಯ ಸವಾಲುಗಳು:*
ಪರೀಕ್ಷೆ ಮತ್ತು ಅಭ್ಯಾಸದ ಒತ್ತಡ: ಅಂಕಗಳ ಚಿಂತೆ ಮತ್ತು ಪೋಷಕರು/ಶಿಕ್ಷಕರ ನಿರೀಕ್ಷೆಗಳು.
ಗೆಳೆಯರ ಒತ್ತಡ: ಇತರರಂತೆ ಕಾಣಿಸಿಕೊಳ್ಳಬೇಕು ಅಥವಾ ಅವರ ನಿಯಮಗಳಿಗೆ ಒಗ್ಗಿಕೊಳ್ಳಬೇಕು ಎಂಬ ಹಠ.
ಸಾಮಾಜಿಕ ಮಾಧ್ಯಮಗಳ ಪ್ರಭಾವ: ಇತರರ ಜೀವನವನ್ನು ನೋಡಿ ತಮ್ಮನ್ನು ತಾವು ಹೋಲಿಸಿಕೊಂಡು ಬೇಸರಪಡುವುದು.
ದೇಹದ ಬದಲಾವಣೆಗಳ ಆತಂಕ: ಹದಿಹರೆಯದಲ್ಲಿ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಕೀಳರಿಮೆ ಹೊಂದುವುದು.
*ಮಾನಸಿಕವಾಗಿ ಗಟ್ಟಿಯಾಗಿರಲು ಸರಳ ಸೂತ್ರಗಳು:*
ಭಾವನೆಗಳನ್ನು ಹಂಚಿಕೊಳ್ಳಿ: ಬೇಸರ ಅಥವಾ ಭಯವಾದಾಗ ಮನಸ್ಸಿನಲ್ಲೇ ಇಟ್ಟುಕೊಳ್ಳದೆ ಇಷ್ಟವಾದ ಸ್ನೇಹಿತರು, ಪೋಷಕರು ಅಥವಾ ಶಿಕ್ಷಕರ ಜೊತೆ ಮುಕ್ತವಾಗಿ ಮಾತನಾಡಿ.
ಸರಿಯಾದ ನಿದ್ರೆ ಮತ್ತು ಆಹಾರ: ದಿನಕ್ಕೆ 7-8 ಗಂಟೆಗಳ ನಿದ್ರೆ ಮತ್ತು ಪೌಷ್ಟಿಕ ಆಹಾರ ಮನಸ್ಸನ್ನು ಶಾಂತವಾಗಿಡುತ್ತದೆ.
ದೈಹಿಕ ಚಟುವಟಿಕೆ: ದಿನವೂ ಆಟವಾಡುವುದು, ಓಡುವುದು ಅಥವಾ ಯೋಗ ಮಾಡುವುದರಿಂದ ಮನಸ್ಸಿನಲ್ಲಿ ‘ಸಂತೋಷದ ಹಾರ್ಮೋನ್ ಗಳು’ ಉತ್ಪತ್ತಿಯಾಗುತ್ತವೆ.
ಹೋಲಿಕೆ ಬೇಡ: ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಯೂ ವಿಭಿನ್ನ. ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ.
ವಿರಾಮ ತೆಗೆದುಕೊಳ್ಳಿ: ನಿರಂತರವಾಗಿ ಓದುವ ಬದಲು ಮಧ್ಯೆ ಸಣ್ಣ ವಿರಾಮ ತೆಗೆದುಕೊಳ್ಳುವುದು ಗಮನ ಕೇಂದ್ರೀಕರಿಸಲು ನೆರವಾಗುತ್ತದೆ.
*ಉಚಿತ ‘ಟೆಲಿ-ಮಾನಸ್' ಸಹಾಯವಾಣಿ ಬಳಕೆಗೆ ಕರೆ:*
ಕರ್ನಾಟಕ ರಾಜ್ಯ ಸರ್ಕಾರವು ರಾಷ್ಟಿçÃಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ‘ಟೆಲಿ-ಮಾನಸ್' (14416) ಎಂಬ ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಗೆ ಕರೆ ಮಾಡಿದವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿ ಇಡಲಾಗುವುದು ಮತ್ತು ಧ್ವನಿಮುದ್ರಣ ಮಾಡುವುದಿಲ್ಲ. ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆ, ಆತ್ಮಹತ್ಯೆ ಆಲೋಚನೆ, ಮಾದಕ ವ್ಯಸನ, ಸಂಬAಧಗಳ ಸಮಸ್ಯೆ, ಜ್ಞಾಪಕ ಶಕ್ತಿ ತೊಂದರೆ ಅಥವಾ ಇತರ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಸೌಲಭ್ಯದ ಪ್ರಯೋಜನ ಪಡೆಯಬಹುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ವೈಷ್ಣವಿ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗನ್ನವರ, ಮಾನಸಿಕ ವಿಭಾಗದ ಸಮಾಜ ಕಾರ್ಯಕರ್ತ ಹೆಚ್. ಶಾಂತಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಶಾಲಾ ಶಿಕ್ಷಕರಾದ ಗಂಗಣ್ಣ, ಸುರೇಖಾ, ಸಂಧ್ಯಾ, ರಿಜ್ವಾನ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್