LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನೂತನ ಮಾಸಪತ್ರಿಕೆ ರತ್ನಗಂಬಳಿ ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ 


ರಾಮದುರ್ಗ,ಜು,೨೨: ಇಂದಿನ ಕಾನೂನು ಸುವ್ಯವಸ್ಥೆ ನಮಗೆ ತಕ್ಕಂತೆ ಇರುವುದಿಲ್ಲ. ಹಲವಾರು ಸನ್ನಿವೇಷಗಳಲ್ಲಿ ನಡೆಯುವ ಘಟನೆಗಳ ವರದಿ ಮಾಡುವಾಗ ಪತ್ರಕರ್ತರು ಬಹಳ ಜಾಣತನದಿಂದ ಕಾರ್ಯ ನಿಭಾಯಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಹೇಳಿದರು.
ಸ್ಥಳೀಯ ರಾಜ್ಯ ಸರಕಾರಿ ನೌಕರರ ಸಭಾ ಭವನದಲ್ಲಿ ಹಮ್ಮಿಕೊಂಡ ನೂತನ ಮಾಸಪತ್ರಿಕೆ ರತ್ನಗಂಬಳಿ ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ ಸಂಗ್ರಾಮದಲ್ಲಿ ಪತ್ರಿಕೆಗಳ ಕಾರ್ಯ ಗುರುತರವಾದುದು ಎಂದು ಪತ್ರಿಕೆಗಳ ಕಾರ್ಯವನ್ನು ಸ್ಮರಿಸಿದರು.
ಸಾನಿಧ್ಯ ವಹಿಸಿದ್ದ ಲಖನಾಯ್ಕನಕೊಪ್ಪದ ಪೂರ್ಣನಂದ ಮಠದ ಶ್ರೀ ಕೃಷ್ಣಾನಂದ ಸ್ವಾಮೀಜಿ ಮಾತನಾಡಿ, ಪತ್ರಿಕೆ ಓದುವುದರಿಂದ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ. ಪುಸ್ತಕ ಓದುವ ಸಂಸ್ಕೃತಿ ಬೆಳೆದಾಗ ನಾಡಿನ ಮನೆ-ಮನಗಳ ವಿಕೃತಿ ಅಳಿದು ಜನಮಾನಸಕ್ಕೆ ನೆಮ್ಮದಿ ದೊರೆಯುವುದು. ಇಂದಿನ ಪತ್ರಿಕೋದ್ಯಮ ಕಷ್ಟದಾಯಕವಾಗಿದೆ. ಆದರೂ ಸಹ ಇಂದು ಪತ್ರಿಕೆಗಳಿಂದ ಎಲ್ಲಾ ಕಡೆಗೂ ಜ್ಞಾನದ ಬೆಳಕು ಮೂಡಬೇಕಾಗಿದೆ. ಆ ಕಾರ್ಯವನ್ನು ಸಂಪಾದಕರು, ವರದಿಗಾರರು ಮಾಡಬೇಕು ಎಂದರು.
ಬಿಜೆಪಿ ಮುಖಂಡ ಡಾ. ಬಿ.ಎನ್. ಮಾದನ್ನವರ ಮಾತನಾಡಿ, ನಾಲ್ಕನೇ ಅಂಗ ಎಂದು ಖ್ಯಾತನಾಮದಲ್ಲಿ ಗುರುತಿಸಿಕೊಂಡ ಪತ್ರಿಕೆಗಳ ಕಾರ್ಯ ಅಳತೆ ಮೀರಿದ ವ್ಯಾಪ್ತಿಯಲ್ಲಿದೆ. ಕಷ್ಟದಾಯಕ ಕಾರ್ಯವಾದರೂ ಇದು ಬಹಳ ಗೌರವಾನ್ವಿತ ಕಾರ್ಯ ಆಗಿದೆ. ಇದನ್ನು ಸಾರ್ಥಕಪಡಿಸಿಕೊಂಡು ಪತ್ರಕರ್ತರು ಉತ್ತಮ ಸಾಧನೆ ಮಾಡುತ್ತ ದೇಶ-ಸಮಾಜದ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿ ಎಂದು ಹೇಳಿದರು.ವಿಜಯ ಸೇನಾ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ವಿಜಯ ನಾಯ್ಕ ಮಾತನಾಡಿ, ಪತ್ರಿಕಾಕರ್ತರು ರೋಲ್-ಕಾಲ್ ಪದ್ಧತಿಯಲ್ಲಿ ಮುನ್ನುಗ್ಗದೆ ರೋಲ್ ಮಾಡೆಲ್ ಪದ್ಧತಿಯಲ್ಲಿ ಕಾರ್ಯ ಮಾಡುತ್ತ ಸಾಗಿದರೆ ಸಮಾಜದಲ್ಲಿ ಉತ್ತಮ ಮೌಲ್ಯಗಳು ವೃದ್ಧಿ ಆಗುತ್ತವೆ ಎಂದರು.
ಸುಧಿರ್ಘ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಈಗ ವಿಶ್ರಾಂತರಾದ ಮಲ್ಲಿಕಾರ್ಜುನ  ಭಾವಿಕಟ್ಟ್ಟಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಸಲಾಯಿತು. ಕುಳಗೇರಿ ಪಿ.ಕೆ.ಪಿ.ಎಸ್ ಮುಖಂಡ ಶ್ರೀಕಾಂತ್ ಅಡಪಟ್ಟಿ, ಮೌಲ ಸಂಪದ ಪತ್ರಿಕೆ ಸಂಪಾದಕ ಸೋಮಶೇಖರ್ ಸೊಗಲದ ಪತ್ರಿಕಾ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು. ರತ್ನಗಂಬಳಿ ಪತ್ರಿಕೆಯ ಸಂಪಾದಕ ಮಲ್ಲಪ್ಪ ಕಂಬಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಮಲ್ಲನಗೌಡ ಪಾಟೀಲ, ಕುಳಗೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಕಟ್ಟೆಕರ, ಬಸವರಾಜ ಒಕ್ಕಲಗೇರಿ ಉಪಸ್ಥಿತರಿದ್ದರು. ಮಹೇಶ ಸುಳ್ಳದ ನಿರೂಪಿಸಿ, ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್