ನೇಸರಗಿ. ಸಮೀಪದ ಸುತಗಟ್ಟಿ ಗ್ರಾಮದ ಶ್ರೀ ಸಂಜೀವಿನಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮವನ್ನು ಜೋಡ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ದಿವ್ಯ ಸಾನಿಧ್ಯ ವಹಿಸಿದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧ ಮಾಡಿದ ಪೌಷ್ಟಿಕ ಆಹಾರ ಅರಿವು ಉಪಯುಕ್ತವಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಿಕ್ಕೆ ಒಳ್ಳೆಯ ಅವಕಾಶ ಆರೋಗ್ಯ ಕಡೆಗೆ ಹೆಚ್ಚು ಗಮನ ಕೊಡುವ ಅವಶ್ಯಕತೆ ತುಂಬಾ ಇದೆ ಈಗಿನ ಆಹಾರ ಬಳಕೆ ಎಲ್ಲವೂ ಕೂಡ ವಿಷ ಬೆರತ ಆಹಾರ ಬಳಿಕ ಮಾಡೋದ್ರಿಂದ ಆರೋಗ್ಯಕ್ಕೆ ಹಾನಿಕಾರ ಒಳ್ಳೆ ಆರೋಗ್ಯ ವೃದ್ಧಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಪೌಷ್ಟಿಕ ಆಹಾರ ಬಳಕೆಯಿಂದ ಆಗುವ ಪ್ರಯೋಜನ ಕುರಿತು ತಿಳಿಸಿ ಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು, ಧರ್ಮಸ್ಥಳ ಸಂಘದ ಪದಾಧಿಕಾರಿಗಳು, ಸಂಜೀವಿನಿ ಜ್ಞಾನವಿಕಾಸ ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಎಲ್ಲ ತರಹದ ಪೌಷ್ಟಿಕ ಆಹಾರಗಳನ್ನು ಮನೆಯಲ್ಲಿ ಮಾಡಿ ಪ್ರದರ್ಶನಕ್ಕೆ ಇಡಲಾಗಿತ್ತು.