LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನಮ್ಮದು ಭಯೋತ್ಪಾದಕರಿಗೆ ಬಿರಿಯಾನಿಕೊಟ್ಟು ಸಲಹುವ ಸರ್ಕಾರವಲ್ಲ: ಸಿ.ಟಿ.ರವಿ.

ಬಳ್ಳಾರಿ:15: ದೇಶದಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ ಭಯೋತ್ಪಾದಕರನ್ನು ನಿಗೂಡವಾಗಿ ಸಂಹಾರ ಮಾಡುತ್ತದೆ ಹೊರತು ಅವರಿಗೆ ಬಿರಿಯಾನಿ ನೀಡಿ  ಸಲಹುವ ಸರ್ಕಾರ ನಮ್ಮದಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಇಂದು  ಮಾತನಾಡುತ್ತಿದ್ದರು.ಭಯೋತ್ಪಾದಕರ ನಿಗೂಢ ಸಾವಿನ ಹಿಂದೆ ಚಾಣಕ್ಯನ ನೀತಿ ಇದೆಂದ ಅವರು ಭಯೋತ್ಪಾದಕರನ್ನು ಬ್ರದರ್ಸ್ ಎನ್ನುವ ಪಕ್ಷ ಕಾಂಗ್ರೆಸ್ ಎಂದರು. ನಕ್ಸಲ್ ಮುಕ್ತ ಭಾರ ನಿರ್ಮಾಣ ಮಾಡಲಾಗಿದೆ. ನಗರ ನಕ್ಸಲರು ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಲ್ಲಿ ಇದ್ದಾರೆ ಅವರು ಹೋಗಬೇಕಿದೆಂದರು
ಜನ ಸಾಮಾನ್ಯರಿಗೆ ಅಭಿವೃದ್ಧಿಯ ವಿತರಣೆ ಮಾಡುತ್ತ. ವಿಕಾಸ, ವಿಶ್ವಾಸದಿಂದ ಜನಪರವಾದ ಪ್ರಧಾನಿಗಳಾಗಿದ್ದಾರೆ ಮೋದಿ ಅವರು. ಅವರ 12 ವರ್ಷಗಳ ಆಡಳಿತದಲ್ಲಿ ಶೌಚಾಲಯಗಳ ನಿರ್ಮಾಣ,
ಜನಧನ್ 32 ಕೋಟಿ ಬ್ಯಾಂಕ್ ಖಾತೆ ತೆರೆಯುವ ಮೂಲಕ  ಸರ್ಕಾರದ ಹಣ ನೇರವಾಗಿ ಜನರಿಗೆ ತಲುಪುವಂತೆ ಮಾಡಿದ್ದಾರೆ.
ಉಜ್ವಲ ಯೋಜನೆ ಮೂಲಕ ಹೊಗೆ ರಹಿತ ಅಡುಗೆ ಮನೆಗೆ ಕಾರಣರಾದರು. 81 ಕೋಟಿ ಜನರಿಗೆ ತಲಾ ಐದು ಕಿಲೋ ಅಕ್ಕಿ ಮಾಸಿಕವಾಗಿ ನೀಡುತ್ತಿದೆ.
11 ಕೋಟಿ ರೈತರಿಗೆ ವಾರ್ಷಿಕ 6000 ರೂ ಗಳ ಪಿಎಂ ಸಮ್ಮಾನಯೋಜನೆ. ಜಲಜೀವನ್ ಮಿಷನ್ ಮೂಲಕ ಹಳ್ಳಿಗಳಿಗೆ ಶುದ್ದಕುಡಿಯುವ ನೀರಿನ ಯೋಜನೆ
ಹೀಗೆ ಶಿಕ್ಷಣ, ಆರೋಗ್ಯ, ಸಾರಿಗೆ,  ದೇಶದ ರಕ್ಷಣೆ, ಔದ್ಯೋಗಿಕತೆ   ಸೇರಿದಂತೆ  ಎಲ್ಲಾ ರಂಗದಲ್ಲಿ ಸಾಕಷ್ಟು ಅಭಿವೃದ್ದಿಯಾಗಿದೆ.
2014 ರ ಮುನ್ನ ಮತ್ತು ಈಗಿನ ಅಭಿವೃದ್ಧಿನ್ನ ಅವಲೋಕಿಸಿದರೆ ಮೋದಿ ಅವರು ಪ್ರಧಾನಿಯಾಗಿ ಏನು ಮಾಡಿದ್ದಾರೆ ಎಂಬುದು ಅರ್ಥವಾಗುತ್ತೆ.
ಆಗ ಭ್ರಷ್ಟಚಾರದ್ದೇ ಸುದ್ದಿಯಾಗುತ್ತಿತ್ತು ಈಗ ಭ್ರಷ್ಟಾಚಾರ ರಹಿತ ಆಡಳಿತವಿದೆಂದರು.
ಮೋದಿ ಅವರು ಆಡಳಿತ ಸುಧಾರಣೆ, ಜಾಗತಿಕ ಸಂಕಷ್ಟದಿಂದ ಪಾರು, ಆರ್ಥಿಕ ಅಭಿವೃದ್ಧಿಗೆ ಕಾರಣರಾಗಿದ್ದಾರೆಂದರು.
ಜಾಗತಿಕ ಯುದ್ಧದ ಪರಿಣಾಮ ಬೆಲೆ ಏರಿಕೆಯಾಗಿದೆ.
ಹಲವು ದೇಶಗಳಲ್ಲಿ ಬೆಲೆ ಏರಿಕೆ ಹೆಚ್ಚಾಗ್ತಿದೆ ನಮ್ಮದು ನಿಯಂತ್ರಣದಲ್ಲಿದೆಂದು ಪೆಟ್ರೋಲ್ ದರ ಹೆಚ್ಚಳ ಸಮರ್ಥನೆ ಮಾಡಿಕೊಂಡ ಸಿಟಿ ರವಿ.
ಅಯಿಲ್ ಬಾಂಡ್ ಹೊರೆ ಯುಪಿಎ ಸರ್ಕಾರ ನಮ್ಮ ಮೇಲೆ ಹಾಕ್ತಿದೆ. ಸಾಲವನ್ನು ದೇಶದ ಮೇಲೆ ಹಾಕಿ ಆಡಳಿತ ನಡೆಸಿದ್ದರು. ಏಥನಾಲ್, ಸೋಲಾರ್ ಪ್ಲಾಂಟ್ ಗೆ ಹೆಚ್ಚು ಪೋಕಸ್ ಮಾಡಲಾಯಿತು. ಅದಾನಿ ಅಂಬಾನಿ ಹೆಚ್ಚು ಪೋಕಸ್ ಮಾಡ್ತಿದ್ದಾರೆ ಎನ್ನುವ ಆರೋಪಕ್ಕೆ ಅದಾನಿ ಅಂಬಾನಿ ಅವರು ಭಾರತೀಯರೇ.
ಎಸ್ ಐ ಆರ್ ವಿರೋಧಿಗಳು ದೇಶದ್ರೋಹಿಗಳು:
ಮತದಾರರ ಪಟ್ಟಿಯಲ್ಲಿ ಸತ್ತವರು, ಎರೆಡು ಮೂರು ಕಡೆ ಹೆಸರು ಇಧದವರು, ನಕಲಿ ದಾಖಲೆ ನೀಡಿದ ಹೊರ ದೇಶದವರು ಇರಕೂಡದೆಂದು ಎಸ್ ಐಆರ್ ಪ್ರಕ್ರಿಯೆ ನಡೆಯುತ್ತಿದೆ ಶುದ್ಧ ಮತದಾರರ ಉಳಿಯಲೆಂದು. ಇದು ಹೊಸದೇನಲ್ಲ ಸ್ವಾತಂತ್ರ್ಯ ನಂತರ ಹಲವು ಬಾರಿ ನಡೆದಿದೆ.
ಇದನ್ನು ವಿರೋಧಿಸುವವರು ದೇಶ ದ್ರೋಹಿಗಳು. ತುಕಡೆ ಗ್ಯಾಂಗ್ ಗಳು ಅರಾಜಕತೆ ಸೃಷ್ಟಿ ಮಾಡಲು ಇದರ ವಿರುದ್ದ  ಹೋರಾಟ ಮಾಡ್ತಿದ್ದಾರೆಂದು ಆಪಾದಿಸಿದರು.
ಸುದ್ದಿಗೋಷ್ಟಿಯಲ್ಲಿ  ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ಮಾಜಿ ಸಂಸದ  ಸಣ್ಣ ಪಕ್ಕೀರಪ್ಪ,  ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಮುಖಂಡರಾದ ಎಂ.ಎಸ್.ದಿವಾಕರ್, ಪಾಲಣ್ಣ, ಹೆಚ್.ಹನುಂಮತಪ್ಪ, ಕೆ.ಎ.ರಾಮಲಿಂಗಪ್ಪ, ಎಸ್.ಗುರುಲಿಂಗನಗೌಡ, ಮುದ್ದನಗೌಡ,  ತಿಮ್ಮಪ್ಪ, ಎರ್ರಂಗಳಿ ತಿಮ್ಮಾರೆಡ್ಡಿ,  ಸುರೇಖ ಮಲ್ಲಗೌಡ ಮೊದಲಾದವರು ಇದ್ದರು.
ಬಾಕ್ಸ್
ಸಿಎಂ ಕಚೇರಿಯೇ ಭ್ರಷ್ಟಾಚಾರ ಕೇಂದ್ರವಾದರೆ:
ರಾಜ್ಯದ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್  ಅವರು ಹಿಸದಾಗಿ ರಾಜ್ಯದ ಜನತೆಗೆ ಅನೇಕ ಭರವಶೆಗಳನ್ನು ನೀಡುತ್ತ ಆಡಳಿತ ಸುಧಾರಣೆ ಮಾಡಲು ಯಾರಾದರೂ ಲಂಚ ಕೇಳಿದರೆ ನಮ್ಮಕಚೇರಿಗೆ ದೂರು ನೀಡಿ ಎಂದಿದ್ದಾರೆ. ಸ್ವಾಗತ ಆದರೆ ಸಿಎಂ ಕಚೇರಿಯೇ ಭ್ರಷ್ಟಾಚಾರದ ಕೇಂದ್ರವಾದರೆ ಯಾರಗಿ ದೂರು ಕೊಡಬೇಕು.  ಹಾಗಾಗದಿರಲಿ ಒಳ್ಳೆ ಆಡಳಿತ ನೀಡಲಿ. ಆದರೆ ಅದು ಸಾಧ್ಯವಿಲ್ಲದ ಕೆಲಸ ಏಕೆಂದರೆ ಕಾಂಗ್ರೆಸ್ ಭ್ರಷ್ಟತೆಯನ್ನೇ ಹಾಸು ಹೊದ್ದು ಮಲಗಿದೆ. ಎಲ್ಲವುದನ್ನು ಕಾದು ನೋಡುತ್ತೇವೆ. ಭ್ರಷ್ಟಾಚಾರ ನಡೆದರೆ ಪ್ರತಿಪಕ್ಷವಾಗಿ ಹೋರಾಟ ಮಾಡುತ್ತೇವೆ  ಎಂದರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್