LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅಥಣಿಯಲ್ಲಿ ರಾಮಾನಂದಾಚಾರ್ಯಜೀ ಮಹಾರಾಜರ ಪಾದುಕಾ ದರ್ಶನ ಕಾರ್ಯಕ್ರಮ


ಅಥಣಿ: ಪಟ್ಟಣದ ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಮೋಟಗಿಮಠದ ಅನುಭವ ಮಂಟಪದಲ್ಲಿ ರಮಾನಂದ ಸಂಪ್ರದಾಯದ ವತಿಯಿಂದ ರಾಮಾನಂದಾಚಾರ್ಯಜೀ ಮಹಾರಾಜರ ಪಾದುಕಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಮಾನಂದ ಸಂಪ್ರದಾಯ ಬೆಳಗಾವಿ ಜಿಲ್ಲಾ ಗ್ರಾಮೀಣ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ್ ಚವ್ಹಾಣ ಹೇಳಿದರು.

ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಕಾರ್ಯಕ್ರಮವು ಬೆಳಿಗ್ಗೆ ಶ್ರೀಗಳ ಪಾದುಕೆಗಳೊಂದಿಗೆ ಶಿವಯೋಗಿ ವೃತ್ತದಿಂದ ಮೊಟಗಿ ಮಠದ ಅನುಭವ ಮಂಟಪದ ವರೆಗೆ ಪಾದಯಾತ್ರೆಯ ಮೂಲಕ ಭವ್ಯ ಮೆರವಣಿಗೆ ಸಾಗಲಿದೆ ಆನಂತರ ವಿವಿಧ ಸಾಮಾಜಿಕ ಉಪ-ಕಾರ್ಯಕ್ರಮಗಳು ನಡೆಯಲಿವೆ ಅದರಲ್ಲೂ ವಿಶೇಷವಾಗಿ ಪಾದುಕೆ ಹಾಗೂ ಗುರು ಪೂಜೆ ಸಮಾರಂಭ. ಶ್ರೀಗಳ ಪಾದುಕಾ ಆಗಮನ. ಸಾಮಾಜಿಕ ಉಪಕ್ರಮ. ಗುರು ಪೂಜೆ. ಮಂಗಳಾರತಿ ಸಮಾರಂಭ. ಪ್ರವಚನ. ಉಪಾಸ ದೀಕ್ಷೆ. ದರ್ಶನ. ಹಾಗೂ ಪುಷ್ಪವೃಷ್ಟಿ. ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಅಥಣಿ ಹಾಗೂ ಕಾಗವಾಡ ತಾಲೂಕಿನ ಸುತ್ತಮುತ್ತಲಿನ ಸಮಸ್ತ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀಗಳ ಕೃಪೆಗೆ ಪಾತ್ರರಾಗಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಅವರಿಂದ ಆಯ್ದ್ ರೈತರಿಗೆ 'ಅವರ್ಣಿ ಪಂಪ್'ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ನಡೆಯಲಿದೆ.


ಈಗಾಗಲೇ ಈ ಸಮಿತಿಯ ವತಿಯಿಂದ ದೇಶದ 14 ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು. ಈಗಾಗಲೇ ಜಗದ್ಗುರು ನರೇಂದ್ರಾಚಾರ್ಯಜೀ ಮಹಾರಾಜ ಶಿಕ್ಷಣ ಸಂಸ್ಥೆ ವತಿಯಿಂದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ವೈದ್ಯಕೀಯ ಚಟುವಟಿಕೆಗಳ ಅಡಿಯಲ್ಲಿ ಸೆಪ್ಟೆಂಬರ್ 2016 ರಲ್ಲಿ ಮರಣೋತ್ತರ ದೇಹದಾನದ ಉಪಕ್ರಮದ ಅಡಿಯಲ್ಲಿ ದೇಹಗಳನ್ನು ಸಮಾಜದ ಸೇವೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವುದು. ವೈದ್ಯಕೀಯ ಚಟುವಟಿಕೆಗಳ ಅಡಿಯಲ್ಲಿ ಸಮರ್ಥ ಸದ್ಗುರು ಕಾಡಸಿದ್ದೇಶ್ವರ ಮಹಾರಾಜ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ದುರ್ಬಲ ಕುಟುಂಬದ ಪುನರ್ವಸತಿ ಉಪಕ್ರಮದ ಅಡಿಯಲ್ಲಿ. ನಿರುದ್ಯೋಗಿಗಳನ್ನು ಮೇಲಕ್ಕೆತ್ತುವುದೇ  ನಮ್ಮ ಸಂಕಲ್ಪದದಿಯಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ವಾಹನ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶ ಕಲ್ಪಿಸುವ ಕೆಲಸ ಮುಂಬೈನಲ್ಲಿ ನಡೆಯುತ್ತಿದೆ. ವೈದ್ಯಕೀಯ ಚಟುವಟಿಗಳ ಅಡಿಯಲ್ಲಿ ಅಗತ್ಯವಿರುವವರಿಗೆ ರಕ್ತ  ಜೆಎನ್ಎಂ "ಬ್ಲಡ್ ಇನ್ ನೀಡ್" ವೆಬ್ ಸೈಟ್ ಮೂಲಕ ಸಂಸ್ಥೆಯು ಮಹಾರಾಷ್ಟ್ರ ಗೋವಾ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ಸ್ಥಳಗಳಿಗೆ ತೆರಳಿ ರಕ್ತದಾನ ಮಾಡುವ ಮೂಲಕ ಹಲವರ ಜೀವ ಉಳಿಸಿದ ಹೆಮ್ಮೆ ಇದೆ. ಅದರ ಜೊತೆಗೆ ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ ರಾಮಟೆಕ್ ಸಂಚಲಿತ ಆಧ್ಯ  ಜಗದ್ಗುರು ರಾಮಾನಂದಾಚಾರ್ಯ ವೇದ ಪಾಠಶಾಲೆ. ಹಾಗೂ ಹಾಗೂ ಜಗದ್ಗುರು ನರೇಂದ್ರ ಚಾರ್ಯ ಮಹಾರಾಜ ಸಂಸ್ಥೆ ವತಿಯಿಂದ ದಿನದ 24 ಗಂಟೆಗಳ ಕಾಲ ಉಚಿತ ಆಂಬುಲೆನ್ಸ್ ಸೇವೆ ಇದೆ ಎಂದು ಹೇಳಿದರು.

ಈ ವೇಳೆ ಅನಿಲ ರಾವಣ. ಸಚಿನ್ ಸುರಡೆ. ಮಾರ್ತಾಂಡ ಪೋಳ್, ದತ್ತಾಚವ್ಹಾಣ,ಣ ನಾನಾಸಾಹೇಬ ಜಾಧವ್, ಸಂಜಯ್ ವಾಗಾಂವಕರ,

ಅನಿಲ ಭೋಸಲೆ, ಗಣೇಶ ಚವ್ಹಾಣ, ಓಂಕಾರ ಚವ್ಹಾಣ, ನಾಗೇಶ್ ಚವ್ಹಾಣ, ಅರುಣ ಲಾಂಡಗೆ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್