LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ತಂದೆ ತಾಯಿ ಮತ್ತು ಗುರುಗಳನ್ನು ಗೌರವಿಸಬೇಕು : ಹಚ್ಚೋಳಿ ಅಮರೇಶ್ 

ಬಳ್ಳಾರಿ. ಜು. 30 : ಸಂಸ್ಕಾರ ಭಾರತಿ ಮಹಾನಗರ ಬಳ್ಳಾರಿ ಅವರಿಂದ ಪಾರ್ವತಿ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಗುರು ಪೂರ್ಣಿಮೆ ಪ್ರಯುಕ್ತ ನಟರಾಜ ಪೂಜೆ ಮತ್ತು ಗುರುವಂದನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು    ಕೆಎಂ ರಾಜಶೇಖರಯ್ಯ ಮುಖ್ಯ ಶಿಕ್ಷಕರು   ವಹಿಸಿಕೊಂಡಿದ್ದರು    ಚಂದ್ರಶೇಖರ್ ಗೌಡ ಗುತ್ತಿಗೆದಾರರು ಬಳ್ಳಾರಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿದರು 
 ಮುಖ್ಯ ಅತಿಥಿಗಳಾಗಿ  ಎಸ್ ಗುರುರಾಜ್,  ನೀಲಗಂಗಾ ಕೆಎಚ್, ಯಲ್ಲನಗೌಡ ಶಂಕರ ಬಂಡೆ ಅಧ್ಯಕ್ಷರು ಸಂಸ್ಕಾರ ಭಾರತಿ ಬಳ್ಳಾರಿ ,ಸಿದ್ದಲಿಂಗಯ್ಯ ಕೆಎಂ ನಿವೃತ್ತ ಶಿಕ್ಷಕರು ಬಸವರಾಜ್ ಜೋಳದ ರಾಶಿ ನಿವೃತ್ತ ಶಿಕ್ಷಕರು ಶಿವೇಶ್ವರ ಗೌಡ ರಂಗಕರ್ಮಿ ಬಳ್ಳಾರಿ  ಪದ್ಮಾವತಿ ಶಿಕ್ಷಕಿ ಬಳ್ಳಾರಿ ಇವರು. ಭಾಗವಹಿಸಿದ್ದರು.
 ಕಾರ್ಯಕ್ರಮದಲ್ಲಿ   ಜೆ ನರಸಿಂಹಮೂರ್ತಿ ವಿಶೇಷ ಉಪನ್ಯಾಸವನ್ನು ನೀಡಿದರು.
 ಶಿಕ್ಷಕರು ಹಾಗೂ ಹಾಸ್ಯ ಕಲಾವಿದರು  ಸಿರುಗುಪ್ಪದ ವಿಎಂ ವೀರಭದ್ರಯ್ಯ ಸ್ವಾಮಿಗಳು ಸಂಗೀತ ಶಿಕ್ಷಕರು ಕುರುಗೋಡು,  ಇವರನ್ನು ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು  
ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದ ಅಮರೇಶ ಹಚ್ಚೋಳ್ಳಿ, ಮಕ್ಕಳು ತಂದೆ ತಾಯಿ ಮತ್ತು ಗುರುಗಳನ್ನು ಗೌರವಿಸಬೇಕು ವಿನಯ ಶೀಲರಾಗಬೇಕೆಂದರು. ನರಸಿಂಹಮೂರ್ತಿ ಶಿಕ್ಷಕರು ಸಿರುಗುಪ್ಪ ಇವರು ಮಕ್ಕಳಿಗೆ ತಿಳಿಸಿದರು ,ಗುರು ಶಿಷ್ಯರ ಸಂಬಂಧದ ಬಗ್ಗೆ ಸವಿಸ್ತಾರವಾಗಿ ಗುತ್ತಿಗೆದಾರರಾದ ಚಂದ್ರಶೇಖರ ಗೌಡ್ರು ಮಕ್ಕಳ ಮನಸ್ಸಿಗೆ ನಾಟುವಂತೆ ಹೇಳಿದರು ಅಧ್ಯಕ್ಷತೆ ವಹಿಸಿದ ರಾಜಶೇಖರಯ್ಯ ಕೆಎಂ ಮುಖ್ಯ ಶಿಕ್ಷಕರು ಗುರುಪೂರ್ಣಿಮೆಯ ಶುಭಾಶಯ ಹೇಳುವ ಮೂಲಕ ಸಂಸ್ಕಾರ ಬಹಳ ಮುಖ್ಯ ಸಂಸ್ಕಾರವಂತರಾಗಬೇಕೆಂದು ಮಕ್ಕಳಲ್ಲಿ ತಿಳಿಸಿದರು.
 ಗುರುವಂದನೆಯನ್ನು ಸ್ವೀಕರಿಸಿದ ವಿಎಮ್ ವೀರಭದ್ರಯ್ಯ ಸ್ವಾಮಿಗಳು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಹಾಡು ಪ್ರಸ್ತುತಪಡಿಸಿದರು ಈ ಸಂದರ್ಭದಲ್ಲಿ ಬೈಲಾಟ ಶಿಕ್ಷಕರಾದ ಖ್ಯಾತ ಕಲಾವಿದರಾದ  ತಿಪ್ಪೇಸ್ವಾಮಿ ಮುದ್ದಟನೂರುರವರು , ತೊಗಲುಗಂಬೆ ಕಲಾವಿದರಾದ ಸುಬ್ಬಣ್ಣ, ವೀರೇಶ್ ದಳವಾಯಿ,  ನತಿ ರಘುರಾಮ  ಶಾಲೆಯ ಎಲ್ಲಾ ಶಿಕ್ಷಕರು ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಮುದ್ದು ಮಕ್ಕಳು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್