ಬಳ್ಳಾರಿ, ಜು.21: ಬಳ್ಳಾರಿ ನಗರದ ಕೌಲ್ ಬಜಾರ್ ಹಾಗೂ ಬ್ರೂಸ್‌ಪೇಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮಹತ್ವದ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಿರುವುದರ ಜೊತೆಗೆ, ಪೇಂಟ್ ಕಳ್ಳತನ ಪ್ರಕರಣದಲ್ಲಿ ₹15.27 ಲಕ್ಷ ಮೌಲ್ಯದ ಪೇಂಟ್ ಡಬ್ಬಿಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೊಂದೆಡೆ, ಬ್ರೂಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶಾಸ್ತ್ರಿನಗರದಲ್ಲಿರುವ ಸಂತೋಷ್ ಕುಮಾರ್ ಕೆ. ಅವರಿಗೆ ಸೇರಿದ ಪೇಂಟ್ ಗೋಡೌನ್‌ನಿಂದ ಸುಮಾರು ₹27.79 ಲಕ್ಷ ಮೌಲ್ಯದ ಡುಲೆಕ್ಸ್ ಕಂಪನಿಯ ಪೇಂಟ್ ಡಬ್ಬಿಗಳು ಕಳ್ಳತನವಾಗಿದ್ದ ಪ್ರಕರಣವನ್ನು ಕೂಡ ಪೊಲೀಸರು ಭೇದಿಸಿದ್ದಾರೆ.
ತನಿಖೆ ವೇಳೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಜೋಸೆಫ್ ಕಳ್ಳತನ ಎಸಗಿರುವುದು ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿ ₹12.21 ಲಕ್ಷ ಮೌಲ್ಯದ 279 ಡುಲೆಕ್ಸ್ ಪೇಂಟ್ ಡಬ್ಬಿಗಳು ಹಾಗೂ ₹3.06 ಲಕ್ಷ ನಗದು ಸೇರಿ ಒಟ್ಟು ₹15.27 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಕೌಲ್ ಬಜಾರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ.ಆರ್. ಷಣ್ಮುಖಪ್ಪ, ಪಿಎಸ್‌ಐಗಳಾದ ಎಂ.ಪಿ. ರವಿ, ನಿಂಗಪ್ಪ, ಎಎಸ್‌ಐ ಮಂಜುನಾಥ ಹಾಗೂ ಸಿಬ್ಬಂದಿಗಳ ತಂಡ ಕೊಲೆ ಪ್ರಕರಣವನ್ನು ಭೇದಿಸಿದೆ.
ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಹಾಂತೇಶ್ ಟಿ., ಪಿಎಸ್‌ಐ ಶೆಹನಾಜ್, ಮಲ್ಲಿಕಾರ್ಜುನ ಜಿ., ಎಎಸ್‌ಐ ಹೊನ್ನೂರಪ್ಪ ಹಾಗೂ ಸಿಬ್ಬಂದಿಗಳ ತಂಡ ಪೇಂಟ್ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ.