ಕಂಪ್ಲಿ: 25:ಪಟ್ಟಣದ ಶ್ರೀ ವಿದ್ಯಾಸಾಗರ ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂನಿನ್ನೆ ಪತ್ರಿಕಾ ದಿನಾಚರಣೆ ಹಮ್ಮಿಕೊಂಡಿತ್ತು.
ತಹಸೀಲ್ದಾರ್ ಜೂಗಲ ಮಂಜುನಾಯಕ ಕಾರ್ಯಕ್ರಮ ಉದ್ಘಾಟನೆ ಮಾಡಿ,
ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಮತ್ತು ನಂತರ ಪತ್ರಿಕೆಗಳ ಸ್ವರೂಪ ಬದಲಾಗಿದೆ. ಪತ್ರಿಕೆ ಕೇವಲ ಮಾಹಿತಿಕೊಡುವ ಮಾಧ್ಯಮ ಆಗಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಚ್ಚನ್ನು ಪ್ರೇರೇಪಿಸಿ ದೇಶವಾಸಿಗಳನ್ನು ಒಟ್ಟುಗೂಡಿಸಲು ಮಹತ್ವದ ಪಾತ್ರವಹಿಸಿತ್ತು. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದ್ದು
ಸಾಮಾನ್ಯ ಜನರಧ್ವನಿಯಾಗಿದೆಂದರು.
ಸುದ್ದಿ ಪ್ರಕಟಿಸುವ ಮೊದಲು ಸೂಕ್ತವಾಗಿ ಪರಿಶೀಲಿಸಿ ಪ್ರಕಟಿಸಲು ಮಾಧ್ಯಮ ಪ್ರತಿನಿಧಿಗಳು ಮುಂದಾಗಬೇಕು. ಪ್ರಚಲಿತ ವಿದ್ಯಮಾನ, ಜ್ಞಾನ ವೃದ್ಧಿಗೆ ಪತ್ರಿಕೆ ಸಹಕಾರಿಯಾಗಿವೆ. ಪತ್ರಿಕೆ ಮಾಹಿತಿ ನೀಡುವ ಪೇಪರ್ ಅಲ್ಲ ಸಮಾಜದ ಧ್ವನಿಯಾಗಿದೆಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಪತ್ರಿಕೋಧ್ಯಮದ ಬೆಳವಣಿಗೆ ಬಗ್ಗೆ ತಿಳಿಸಿ. ಸೋಶಿಯಲ್ ಮೀಡಿಯಾದಲ್ಲಿನ ಎಲ್ಲ ಸುದ್ದಿಗಳು ನಿಜವಲ್ಲ. ಪತ್ರಿಕೆಗಳು ನಿಖರ ಸುದ್ದಿ ಕೊಡುವಲ್ಲಿ ಮುಂದಾಗಿವೆ. ಸುದ್ದಿ ಖಚಿತಪಡಿಸಿಕೊಂಡ ಮೇಲೆ ವರದಿ ನೀಡಬೇಕು. ಸರಿಯಾದ ಸುದ್ದಿ, ಮಾಹಿತಿ ಪತ್ರಿಕೆಗಳಿಗೆ ನೀಡುವುದು ಪತ್ರಕರ್ತರ ಹೊಣೆಯಾಗಿದೆ. ಉನ್ನತ ಶಿಕ್ಷಣ, ಹುದ್ದೆಗಳಿಸಲು ಪ್ರಚಲಿತ ವಿದ್ಯಮಾನ ಅರಿಯಲು ವಿದ್ಯಾರ್ಥಿಗಳು ಪತ್ರಿಕೆಗಳನ್ನು ನಿತ್ಯ ಓದುವುದು ಉತ್ತಮ. ಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನ ಅರಿಯಲು ಸಾಧ್ಯವಾಗುತ್ತದೆ. ಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿ ಇದ್ದು ಅದನ್ನು ಪತ್ರಕರ್ತರು ಅಳವಡಿಸಿಕೊಳ್ಳಬೇಕು ಎಂದರು.
ಇಲ್ಲಿನ ನವ ಭಾರತ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ನಾಗೇಶ್ವರರಾವ್ ಮಾತನಾಡಿ, ಸಂವಹನ ಮತ್ತು ಸಂಪರ್ಕ ಮಾಧ್ಯಮಗಳ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದೆ. ಬ್ರೇಕಿಂಗ್ ನ್ಯೂಸ್ ಕೊಡುವಲ್ಲಿ ಮಾಧ್ಯಮಗಳು ಮುಂದೆ ಇವೆ. ಖಚಿತವಾದ ಸುದ್ದಿ ಪಡೆಯಲು ದಿನಪತ್ರಿಕೆ ಓದಬೇಕು. ವಿದ್ಯಾರ್ಥಿಗಳು ಪತ್ರಿಕೆಯಲ್ಲಿ ಸಂಪಾದಕೀಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಓದುವುದರಿಂದ ಭಾಷಾಜ್ಞಾನ, ಬರವಣಿಗೆ ಕೌಶಲ್ಯಗಳಿಸಲು ಸಾಧ್ಯ. ಪತ್ರಿಕೆ ಓದುವುದರಿಂದ ದೇಶದ ಪರಿಸ್ಥಿತಿ ಅರಿವು ಆಗುತ್ತದೆಂದರು.
ಕಕಾನಿಪ ಸಂಘದ ತಾಲೂಕು ಅಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಅಧ್ಯಕ್ಷತೆವಹಿಸಿ ಮಾತನಾಡಿ, ಮೊಬೈಲ್ ಮತ್ತು ಪತ್ರಿಕೆಗಳನ್ನು ಪಠ್ಯ ಚಟುವಟಿಕೆಯನ್ನಾಗಿ ಸದ್ಭಳಕೆ ಮಾಡಿಕೊಂಡಲ್ಲಿ ಭವಿಷ್ಯದಲ್ಲಿ ಉನ್ನತ ಶಿಕ್ಷಣ, ಹುದ್ದೆಗಳಿಸಲು ಸಹಕರಿಯಾಗುತ್ತದೆ ಎಂದರು.
ನಾನಾ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಬಿ.ಸಾಯಿನಿಧಿ, ಆರ್.ಹರ್ಷಿಣಿ, ವಿನುತಾ ಸೊಪ್ಪಿಮಠ, ನಸ್ರೀನ್‌ತಾಜ್, ಅಭಿನಂದನ್, ಉತ್ತಮ ದೈಹಿಕ ಶಿಕ್ಷಕ ಎಂ.ಎ.ಶರಣಬಸವರಾಜರನ್ನು ಗೌರವಿಸಲಾಯಿತು.
ಕಕಾನಿಪ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಹರನಹಳ್ಳಿ, ವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಾಚಾರ್ಯೆ ರೋಹಿಣಿ ಸಾಯಿಕಿಶೋರ್, ಅಧಿಕಾರಿಗಳಾದ ಬಸವರಾಜ, ಶಂಭುಲಿಂಗ, ಗುರುಪ್ರಸಾದ್, ಟಿ.ಎಂ.ಬಸವರಾಜ, ಸಂಘದ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ಜಿಲ್ಲಾ ಸದಸ್ಯ ಜಿ.ಚಂದ್ರಶೇಖರಗೌಡ, ತಾಲೂಕು ಕಾರ್ಯದರ್ಶಿ ಪಿ.ವೀರೇಶ್, ತಾಲೂಕು ಘಟಕ ಪದಾಧಿಕಾರಿಗಳಾದ ಕರಿ ವಿರುಪಾಕ್ಷಿ, ಎಸ್.ಯಮನಪ್ಪ, ಜೀರು ಗಾದಿಲಿಂಗ, ಎಂ.ಎಸ್.ವಿರುಪಾಕ್ಷಯ್ಯ, ಎಚ್.ಎಂ.ಪಂಡಿತಾರಾಧ್ಯ, ಬಿ.ರಸೂಲ್, ಬಿ.ಎಚ್.ಎಂ. ಗುರುಶಾಂತಶಾಸ್ತ್ರಿ ಮತ್ತಿತರರಿದ್ದರು.